Advertisement

ಕೆಸರು ಗದ್ದೆಯಾಗಿರುವ ತಾಲೂಕು ಕ್ರೀಡಾಂಗಣ

01:15 PM Apr 11, 2017 | Team Udayavani |

ಎಚ್‌.ಡಿ.ಕೋಟೆ: ಒಂದು ಕಡೆ ನಾಟಿ ಮಾಡಲು ಸಿದ್ಧ ಪಡಿಸಿದ ಕೆಸರು ಗದ್ದೆಯಂತಿರುವ ಮೈದಾನ, ಮತ್ತೂಂದು ಕಡೆ ಬರಗಾಲದ ಬೇಸಿಗೆಯಲ್ಲೂ ಬತ್ತ ದಂತಿರುವ ಕೆರೆಯ ಮಾದರಿಯ ನೀರು ಶೇಖರಣೆ, ಇದು ತಾಲೂಕು ಕೇಂದ್ರ ಸ್ಥಾನದ ಕ್ರೀಡಾಂಗಣದ ಅವ್ಯವಸ್ಥೆ. ತಾಲೂಕು ಕೇಂದ್ರ ಸ್ಥಾನದಲ್ಲಿ ವಿಶಾಲವಾದ ಕ್ರೀಡಾಂಗಣ ಇದೆಯಾದರೂ ನಿರ್ವಹಣೆ ಇಲ್ಲದ  ಕಾರಣ ಹದಗೆಟ್ಟು ಕತ್ತಲಾಗುತ್ತಿದ್ದಂತೆಯೇ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

Advertisement

ಕ್ರೀಡಾಂಗಣದಲ್ಲಿ ವಿದ್ಯುತ್‌ ದೀಪಗಳ ವ್ಯವಸ್ಥೆ, ಕುಡಿಯುವ ನೀರು, ರಸ್ತೆ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯ ಗಳಿಲ್ಲದೇ ಇಡೀ ಸ್ಟೇಡಿಯಂ ಆವರಣದಲ್ಲಿ ಸ್ಮಶಾನ ಮೌನ ಆವರಿಸಿದೆ. ತಾಲೂಕು ಕೇಂದ್ರ ಸ್ಥಾನದ ಕ್ರೀಡಾಂಗಣ ಎಂದು ಹೇಳಿಕೊಳ್ಳುವುದಕ್ಕೇ ನಾಚಿಕೆ ಪಡುವಂತಾಗಿದೆಯಾದರೂ ತಾಲೂಕು ಆಡಳಿವತ ವಾಗಲಿ, ಜನ ಪ್ರತಿನಿಧಿಗಳಾಗಲೇ ಕ್ರೀಡಾಂಗಣದ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಮುಂದಾಗಿಲ್ಲ.

ಮಳೆಗೆ ಬಂದ್ರೆ ಕೆರೆಯಂತಾಗುವ ಆವರಣ: ಕಳೆದ ಸಾಲಿನಲ್ಲಿ ನಿರೀಕ್ಷೆ ಪ್ರಮಾಣದಲ್ಲಿ ಮಳೆಯಾಗದೆ ರಾಜ್ಯ ಭೀಕರ ಬರಗಾಲದಿಂದ ತತ್ತರಿಸುತ್ತಿದೆ. ಕುಡಿಯುವ ಹನಿ ನೀರಿಗಾಗಿ ಜನ ಜಾನುವಾರುಗಳು ಪರಿತಪಿಸುತ್ತಿವೆ. ಹೀಗಿರುವಾಗ ಕಳೆದ 2 ದಿನಗಳ ಹಿಂದಷ್ಟೇ ಬಿದ್ದ ಮಳೆಗೆ ತಾಲೂಕಿನ ಕ್ರೀಡಾಂಗಣದ ತುಂಬೆಲ್ಲಾ ನೀರು ತುಂಬಿಕೊಂಡು ಕೆರೆಯನ್ನು ನಾಚಿಸುವಂತಹ ಸ್ಥಿತಿ ನಿರ್ಮಾಣಗೊಂಡರೆ, ಇನ್ನೊಂದು ಕಡೆಯ ಸ್ಟೇಡಿಯಂ ಆವರಣದ ತುಂಬೆಲ್ಲಾ ಕೆಸರು ತುಂಬಿಕೊಂಡು ನಾಟಿ ಮಾಡಲು ಸಿದ್ಧಪಡಿಸಿದ ಕೆಸರು ಗದ್ದೆಯಂತಾಗಿದೆ. ಇದರಿಂದ ದಿನದ ಯಾವುದೋ ಒಂದು ಸಮಯವನ್ನು ಸ್ಟೇಡಿಯಂನಲ್ಲಿ ಕಾಲ ಹರಣ ಮಾಡುತ್ತಿದ್ದ  ಕ್ರೀಡಾಳುಗಳು ಸ್ಟೇಡಿಯಂ ನತ್ತ ಮುಖ ಮಾಡಲು ಹಿಂದೇಟು ಹಾಕುವಂತಾಗಿದೆ.

ಮೂಲಭೂತ ಸೌಕರ್ಯ ಕೊರತೆ: ತಾಲೂಕು ಕ್ರೀಡಾಂಗಣ ಅಂದ ಮೇಲೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಚರಂಡಿ, ವಿದ್ಯುತ್‌ ದೀಪಗಳು ಇರಬೇಕು. ಆದರೆ ಇಲ್ಲಿ ಯಾವ ಸೌಲಭ್ಯಗಳು ಕಾಣ ಸಿಗದು. ಇದರಿಂದ ಕೊಂಚ ಮಳೆಯಾದರೂ ತಾಲೂಕಿನ ವಿವಿಧ ಬಡಾವಣೆಗಳ ಚರಂಡಿ ನೀರು ಇಳಿಜಾರು ಪ್ರದೇಶದಲ್ಲಿರುವ ಕ್ರೀಡಾಂಗಣದ ಆವರಣದಲ್ಲಿ ಶೇಖರಣೆಯಾಗುತ್ತಿದೆ.

ಕಲುಷಿತ ನೀರು ಸ್ಟೇಡಿಯಂ ಸೇರದಂತೆ ಸಂಬಂಧ ಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಕ್ರೀಡಾಂಗಣದಲ್ಲಿ ಕ್ರೀಡಾ ವೀಕ್ಷಕರಿಗೆ ನಿರ್ಮಾಣ ಮಾಡಿರುವ ವೀಕ್ಷಣೆ ಸ್ಥಳದ ಮೆಟ್ಟಿಲುಗಳ ಕೆಳಗೆ ಬಟ್ಟೆ ಬದಲಾಸಿಕೊಳ್ಳಲು 4 ಕೊಠಡಿಗಳನ್ನು ನಿರ್ಮಿಸಲಾಗಿದೆಯಾದರೂ ನಿರ್ವಹಣೆ ಇಲ್ಲದೆ ದಿನದ 24ಗಂಟೆ ಬಾಗಿಲು ತೆರೆದಿರುವ ಕೊಠಡಿಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಿವೆ. 

Advertisement

ಅಭಿವೃದ್ಧಿಪಡಿಸಿ: ಬರದ ಬೇಸಿಗೆ ಕಾಲದಲ್ಲಿ ಬಿದ್ದ ಮೊದಲ ಮಳೆಗೆ ಕ್ರೀಡಾಂಗಣದ ಸ್ಥಿತಿ ಹೀಗಾದ ಮೇಲೆ ಇನ್ನು ಮುಂಗಾರು ಮಳೆ ಆರಂಭ ಗೊಳ್ಳುತ್ತಿ ದ್ದಂತೆಯೇ ಸ್ಟೇಡಿಯಂ ಸ್ಥಿತಿ ಹೇಗಿರುವುದಿಲ್ಲ ಅನ್ನುವು ದನ್ನು ಮನಗಂಡು ಇನ್ನಾದರೂ ಅವ್ಯವಸ್ಥೆಗಳ ಅಗರವಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತ ವಾಗಿರುವ ಕ್ರೀಡಾಂಗಣವನ್ನು ತಾಲೂಕು ಆಡಳಿತ ಇಲ್ಲವೆ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕ್ರೀಡಾಂ ಗಣದ ಅಭಿವೃದ್ಧಿ ಪಡಿಸುವಂತೆ ತಾಲೂಕಿನ ಜನತೆ ಹಾಗೂ ಕ್ರೀಡಾ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಆಶ್ರಯ ನಿವೇಶನಗಳ ಮಂಜೂರಾತಿ ಸಂದರ್ಭದಲ್ಲಿ ಎಚ್‌.ಡಿ.ಕೋಟೆ ತಾಲೂಕು ಕ್ರೀಡಾಂಗಣ ಮಂಜೂ ರಾಗಿದೆ. ಸ್ಟೇಡಿಯಂ ಬಡಾವಣೆಯಲ್ಲಿ ಮನೆಗಳ ನಿರ್ಮಾಣ ತಡವಾಗಿ ಆರಂಭಗೊಂಡ ಹಿನ್ನೆಲೆ ಕ್ರೀಡಾಂಗಣದ ಅಭಿವೃದ್ಧಿಗೆ ಹೆಚ್ಚು ಆದತ್ಯೆ ನೀಡಿರಲಿಲ್ಲ. ಇತ್ತೀಚೆಗಷ್ಟೇ ಶಾಸಕ ಎಸ್‌. ಚಿಕ್ಕಮಾದು ಅವರೊಡಗೂಡಿ ಸ್ಟೇಡಿಯಂ ಸ್ಥಳ ಪರಿಶೀಲನೆ ನಡೆಸಿದ್ದು ಮುಖ್ಯಮಂತ್ರಿಗಳ ವಿಶೇಷ ಅನುದಾನ ಅಡಿಯಲ್ಲಿ ರಸ್ತೆ ಚರಂಡಿ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಂತಹಂತವಾಗಿ ತ್ವರಿತಗತಿಯಲ್ಲಿ ಕ್ರಮ ವಹಿಸಲಾಗುವುದು.
-ವಿಜಯಕುಮಾರ್‌, ಮುಖ್ಯಾಧಿಕಾರಿಗಳು, ಪ.ಪಂಚಾಯಿತಿ

ಎಚ್‌.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದ ಕೀಡಾಂಗಣದಲ್ಲಿ ಮೂಲ ಸೌಲಭ್ಯಗಳಿಲ್ಲದೆ ಕ್ರೀಡಾಭಿಮಾನಿಗಳಲ್ಲಿ ನೋವುಂಟು ಮಾಡಿದೆ. ವಿಶಾಲವಾದ ಕ್ರೀಡಾಂಗಣ ಇದೆಯಾದರೂ ಸರಿಯಾದ ನಿರ್ವಹಣೆ ಇಲ್ಲದೆ ರಾತ್ರಿ ಯಾಗುತ್ತಿದ್ದಂತೆಯೇ ಅನೈತಿಕ ಚಟು ವಟಿಕೆಯ ತಾಣವಾಗಿದ್ದು ಸಂಬಂಧಪಟ್ಟ ಪುರಸಭೆ ಹಾಗೂ ಚುನಾಯಿತ ಪ್ರತಿನಿಧಿಗಳು ಕ್ರೀಡಾಂಗ ಣಕ್ಕೆ ಮೂಲ ಸೌಲಭ್ಯ ಒದಗಿಸುವುದರ ಜೊತೆಗೆ ಕಾವಲುಗಾರರನ್ನು ನಿಯೋಜನೆಗೊಳಿಸಿ ಅವ್ಯವಹಾರ ತಡೆಗಟ್ಟಬೇಕು.
-ಉಮೇಶ್‌. ಬಿ. ನೂರಲಕುಪ್ಪೆ, ಕ್ರೀಡಾಭಿಮಾನಿ

* ಬಸವರಾಜು ಎಚ್‌.ಬಿ

Advertisement

Udayavani is now on Telegram. Click here to join our channel and stay updated with the latest news.

Next