ಗದಗ: ವೀರರಾಣಿ ಕಿತ್ತೂರ ಚನ್ಮಮ್ಮ ಅವರ 240 ನೇ ಜಯಂತ್ಯುತ್ಸವ ಹಾಗೂ 195ನೇ ವಿಜಯೋತ್ಸವ ಅಂಗವಾಗಿ ಜಿಲ್ಲಾ ಪಂಚಮಸಾಲಿ ಸಮುದಾಯದಿಂದ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಬೈಕ್ ರ್ಯಾಲಿಗೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಚಾಲನೆ ನೀಡಿದರು.
ಇದಕ್ಕೂ ಮುನ್ನ ಇಲ್ಲಿನ ಭೂಮರಡ್ಡಿ ವೃತ್ತದಲ್ಲಿರುವ ಪಂ. ಪುಟ್ಟರಾಜ ಗವಾಯಿಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ರಾಜ್ಯ ಸರಕಾರದಂತೆ ಕೇಂದ್ರವೂ ರಾಣಿ ಚನ್ನಮ್ಮ ಜಯಂತಿ ಆಚರಣೆಗೆ ಮುಂದಾಗಬೇಕು. ಸಂಸತ್ ಆವರಣದಲ್ಲಿ ಸ್ಥಾಪಿಸಿರುವ ರಾಣಿ ಚನ್ನಮ್ಮ ಅವರ ಪುತ್ಥಳಿಗೆ ಬಸವ ಜಯಂತಿ ಅಂಗವಾಗಿ ಪ್ರತೀ ವರ್ಷ ಸ್ಪೀಕರ್ ಅವರು ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಬೇಕು ಎಂದರು. ವೀರರಾಣಿ ಚನ್ನಮ್ಮ ಅವರ ಶೌರ್ಯ ಸಾಹಸಗಳು ಇಂದಿನ ಯುವ ಸಮುದಾಯ ಹಾಗೂ ಮಹಿಳೆಯರಿಗೆ ಪ್ರೇರಣೆ ನೀಡುತ್ತವೆ. ರಾಣಿ ಚನ್ನಮ್ಮ ಅವರ ಜೀವನ ಮತ್ತು ಆದರ್ಶಗಳ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಬೇಕು ಎಂದು ಹೇಳಿದರು.
ಬೃಹತ್ ಬೈಕ್ ರ್ಯಾಲಿ: ನಗರದ ವೆಂಕಟೇಶ ಟಾಕೀಸ್ ರಸ್ತೆ, ಚೇತನ ಕ್ಯಾಟೀನ್, ಹಾತಲಗೇರಿ ನಾಕಾ ಮಾರ್ಗವಾಗಿ, ಕುರಟ್ಟಿ ಪೇಟೆ, ತೆಂಗಿನಕಾಯಿ ಬಜಾರ, ಪಾಲಾ ಬದಾಮಿ ರಸ್ತೆ ನಗರಸಭೆ ಮುಂದುಗಡೆ, ಗಾಂಧಿ ಸರ್ಕಲ್, ಮಹೇಂದ್ರಕರ ಸರ್ಕಲ್, ಹುಯಿಲಗೋಳ ನಾರಾಯಣರಾವ ವೃತ್ತ, ಬಸವೇಶ್ವರ ಸರ್ಕಲ್, ಒಕ್ಕಲಗೇರಿ ಮಾರ್ಗವಾಗಿ ಮುಳಗುಂದ ನಾಕಾದ ಮೂಲಕ ಸಂಚರಿಸಿ, ಕಿತ್ತೂರ ಚನ್ನಮ್ಮ ವೃತ್ತದಲ್ಲಿರುವ ರಾಣಿ ಚನ್ನಮ್ಮ ಅವರ ಪುತ್ಥಳಿಗೆ ಪೂಜೆ ಸಲ್ಲಿಸುವ ಮೂಲಕ ಮುಕ್ತಾಯಗೊಳಿಸಲಾಯಿತು.
ಬೈಕ್ ರ್ಯಾಲಿಯಲ್ಲಿ ಅಯ್ಯಪ್ಪ ಅಂಗಡಿ, ಶಿವರಾಜಗೌಡ ಹಿರೇಮನಿಪಾಟೀಲ, ಮೋಹನ ಮಾಳಶೆಟ್ಟಿ, ಬಸವರಾಜ ಮನಗುಂಡಿ, ಮಂಜುನಾಥ ಗುಡದೂರ, ಬಿ.ಬಿ. ಸೂರಪ್ಪಗೌಡ್ರ, ಸಂಗು ಅಂಗಡಿ, ಅಜ್ಜನಗೌಡ ಹಿರೇಮನಿಪಾಟೀಲ, ಶಿವಣ್ಣ ನಾಗರಾಳ, ಬಸವರಾಜ ಕುಂದಗೋಳ, ವಸಂತ ಪಡಗದ, ಮಹೇಶ ಕರಿಬಿಷ್ಠಿ, ಕಲ್ಯಾಣಪ್ಪ ಹೋಳಿ, ಈರಣ್ಣ ಮಾನೇದ, ಚಂದ್ರಕಾಂತ ಚವ್ಹಾಣ, ಶಂಕರಗೌಡ ಪಾಟೀಲ, ಸುಭಾಷ ಮಳಗಿ, ಶೇಖಪ್ಪ ಕರಿಬಿಷ್ಠಿ, ಕಿರಣ ಕಮತರ, ಚೇತನ ಅಬ್ಬಿಗೇರಿ, ಮಂಜುನಾಥ ಕೊಟಗಿ, ಈರಪ್ಪ ಗೋಡಿ, ಮಲ್ಲಪ್ಪ ಪಲ್ಲೇದ, ರಮೇಶ ನಿಂಬನಗೌಡರ, ಅಪ್ಪು ಮುಳವಾಡ, ಸಂತೋಷ ಖಾನಾಪುರ, ಶರಣು ಬೋಳಮ್ಮನವರ, ಮಹಾಂತೇಶ ನಲವಡಿ, ಸುರೇಶ ಚಿತ್ತರಗಿ, ಜಗದೀಶ ಪಲ್ಲೇದ, ರಮೇಶ ಕಾಗಿ, ಸುನೀಲ ಕುಂದಗೋಳ, ಬಸವರಾಜ ದೊಡ್ಡೂರ, ಮಂಜುನಾಥ ಪಿರಂಗಿ, ಗಣೇಶ ಲಕ್ಕುಂಡಿ, ಮುತ್ತು ಮುಳವಾಡ, ಸಂಗು ದೊಡ್ಡಣ್ಣವರ, ಅಶೋಕ ಕೊಂಡಿಕೊಪ್ಪ, ವಿಜಯಕುಮಾರ ಲಕ್ಕುಂಡಿ, ಕುಮಾರ ತಡಕೋಡ, ಸೋಮು ಮುಳಗುಂದ, ಮಂಜು ದಿಂಡೂರ, ಕುಮಾರ ಹೊಂಬಳ ಇದ್ದರು.