Advertisement

ಕಾರ್ಮಿಕರ ಅಭಿವೃದ್ಧಿಗೆ ಒತ್ತು 

10:14 AM Mar 02, 2019 | Team Udayavani |

ಗದಗ: ಕಾರ್ಮಿಕರ ಕಾಯಕ ಪರಿಪೂರ್ಣ ಆಗಿರುವುದರಿಂದ ನಾಗರಿಕ ಸಮಾಜ ಮುಂದುವರಿದಿದೆ ಎಂದು ಜಿಪಂ ಅಧ್ಯಕ್ಷ ಎಸ್‌.ಪಿ. ಬಳಿಗಾರ ಅಭಿಪ್ರಾಯಪಟ್ಟರು.

Advertisement

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ನಡೆದ ಕಾರ್ಮಿಕ ಸಮ್ಮಾನ ದಿನ ಹಾಗೂ ಕಾರ್ಮಿಕ ಸಮ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣನವರು ವಿವಿಧ ರಂಗಗಳ ಕಾರ್ಮಿಕರನ್ನು ಕಾಯಕ ಯೋಗಿ ಎಂದು ಕರೆಯುವುದರೊಂದಿಗೆ ಕಾಯಕವೇ ಕೈಲಾಸ ಎಂದು ಸಂದೇಶ ಸಾರಿದರು. ಗಾಂಧಿಧೀಜಿ ಹಾಗೂ ಬಸವಣ್ಣನವರ ಹಾದಿಯಲ್ಲಿ ಎಲ್ಲರೂ ನಡೆಯಬೇಕು. ಕಾರ್ಮಿಕರಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹಲವಾರು
ಯೋಜನೆ ಜಾರಿಗೆ ತಂದಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅಂಬೇಡ್ಕರ್‌ ಕಾರ್ಮಿಕ ಸಹಾಯಕ ಹಸ್ತ ಯೋಜನೆಯಡಿಯಲ್ಲಿ ಅಸಂಘಟಿತ ವಲಯಗಳಾದ ಹಮಾಲರು, ಚಿಂದಿ
ಆಯುವವರು, ಗೃಹ ಕಾರ್ಮಿಕರು, ಟೇಲರ್‌, ಅಗಸರು, ಮೆಕ್ಯಾನಿಕ್‌, ಅಕ್ಕಸಾಲಿಗರು, ಕಂಬಾರರು, ಕುಂಬಾರರು,
ಕ್ಷೌರಿಕರು, ವಾಹನ ಚಾಲಕರು, ಕಟ್ಟಡ ಕಾರ್ಮಿಕರಿಗೆ ಅಸಂಘಟಿತ ಯೋಜನೆಯಲ್ಲಿ ಸ್ಮಾರ್ಟ್‌ ಕಾರ್ಡ್‌ ವಿತರಿಸಬೇಕು. ಅವರಿಗೆ ದೊರೆಯುವ ಸೌಲಭ್ಯಗಳ ಕುರಿತು ಅರಿವು ಮೂಡಿಸಬೇಕು. ಕಾರ್ಮಿಕರ ಮಕ್ಕಳಿಗೆ
ಸಿಗಬೇಕಾದ ಸೌಲಭ್ಯಗಳು, ಶಿಷ್ಯವೇತನ ಒದಗಿಸಿಕೊಡಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ತಾ.ಪಂ. ಉಪಾಧ್ಯಕ್ಷೆ ಸುಜಾತ ಖಂಡು, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ ಪಾಟೀಲ ಇದ್ದರು.

Advertisement

ಶ್ರಮಯೋಗಿ ಯೋಜನೆ ಪ್ರಧಾನಮಂತ್ರಿ ಶ್ರಮಯೋಗಿ ಯೋಜನೆಯಡಿ ದೇಶಾದ್ಯಾಂತ 43 ವಲಯಗಳ ಅಸಂಘಟಿತ ಕಾರ್ಮಿಕರ ಆರ್ಥಿಕ ಪ್ರಗತಿಗೆ ವಿವಿಧ ಸೌಲತ್ತುಗಳನ್ನು ಒದಗಿಸಲಾಗುತ್ತದೆ. ವೃತ್ತಿಪರರಿಗೆ ವೃದ್ದಾಪ್ಯ ವೇತನ ನೀಡಲಾಗುವುದು. ಪ್ರಧಾನ ಮಂತ್ರಿ ಜೀವನ್‌ ಯೋಜನೆ, ಬಿಪಿಎಲ್‌ ಕಾರ್ಡ್‌ನವರಿಗೆ ಉಚಿತ
ವೈದ್ಯಕೀಯ ಸೇವೆ ನೀಡಲಾಗುತ್ತದೆ. ಅರ್ಹರು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.
. ಶಿವಕುಮಾರ ಉದಾಸಿ, ಸಂಸದ 

Advertisement

Udayavani is now on Telegram. Click here to join our channel and stay updated with the latest news.

Next