ಮಾತನಾಡಿರುವುದನ್ನು ವಿರೋಧಿಸಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ನಗರದ ಗಾಂಧಿ ವೃತ್ತದಲ್ಲಿ ಜಮಾಸಿದ ಜೆಡಿಎಸ್ ಕಾಯರ್ಕತರು, ಶಾಸಕ ಪ್ರೀತಂಗೌಡ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
Advertisement
ಜಿಲ್ಲಾ ಅಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ ಮಾತನಾಡಿ, ಅಧಿಕಾರದ ದುರಾಸೆಯಿಂದ ಶಾಸಕರಿಗೆ ಹಣದಆಮಿಷವೊಡ್ಡಿ, ಬಿಜೆಪಿ ನಾಯಕರು ರಾಜಕೀಯ ವ್ಯಭಿಚಾರ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ
ಅವರು ನಡೆಸಿದ ಆಪರೇಷನ್ ಕಮಲದ ಹೆಸರಲ್ಲಿ ಕುದುರೆ ವ್ಯಾಪಾರಕ್ಕಿಳಿದಿದ್ದು ಜಗಜ್ಜಾಹೀರಾಗಿದೆ. ಜೆಡಿಎಸ್ ವರಿಷ್ಠ ಎಚ್
.ಡಿ. ದೇವೇಗೌಡರ ವಿರುದ್ಧ ಮಾತನಾಡಲು ಬಿಜೆಪಿ ನಾಯಕರಿಗೆ ಯಾವ ನೈತಿಕತೆಯೂ ಇಲ್ಲ. ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಅವರು, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಅದಕ್ಕೆ ಶಾಸಕ ಪ್ರೀತಂಗೌಡ ಬಹಿರಂಗ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ದೇಶದ ರಾಜಕೀಯ ಇತಿಹಾಸದಲ್ಲೇ ಒಂದೇ ಒಂದು ಕಪ್ಪು ಚಿಕ್ಕಿಯಿಲ್ಲದ ನಾಯಕ. ತಮ್ಮ ಇಳಿವ ಯಸ್ಸಿನಲ್ಲೂ ಮೌಲ್ಯಾಧಾರಿತ
ರಾಜಕಾರಣದ ತಳಹದಿಯಲ್ಲಿ ಜೆಡಿಎಸ್ ಕಟ್ಟಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರು ತಮ್ಮ ಅಧಿಕಾರದ
ದಾಹ ತೀರಿಸಿಕೊಳ್ಳಲು ರಾತ್ರೋರಾತ್ರಿ ಶಾಸಕರ ಕುದುರೆ ವ್ಯಾಪಾರಕ್ಕೀಳಿದಿರುವುದು ಬಿಜೆಪಿಯ ದಯನೀಯಸ್ಥಿತಿ ತೋರಿಸುತ್ತದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರು ಬಿಜೆಪಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು. ಡಾ| ಎಸ್. ಆರ್. ಹಿರೇಮಠ, ರಾಮಣ್ಣ ಹೂವಣ್ಣವರ, ಜಾವೀದ್ ನೂರಬಾಷಾ, ಬಸವರಾಜ ಅಪ್ಪಣ್ಣವರ, ಅಂದಾನಯ್ಯ ಮುನವಳ್ಳಿಮಠ, ರಫೀಕ್ ನರಗುಂದ, ಅರುಣ ಹಿಡ್ಕಿಮಠ, ಕರೀಮಸಾಬ್ ಮಾಲ್ದಾರ, ಗಿರೀಶ ಗಡಾದ,
ಅಸ್ಲಂ ನರಗುಂದ, ಭೀಮಪ್ಪ ಹದ್ದಣ್ಣವರ, ಹುಸೇನ್ ಮುಲ್ಲಾನವರ, ಅಬ್ಬು ಮಾಲ್ದಾರ, ಮೋಹನ ಸಿಂಗ್ ತೊಸಿಕಾನೆ, ಬಸವರಾಜ ಬಿಳೆಯಲಿ, ಶಿರಾಜಸಾಬ ಕಲೇಗಾರ ಇದ್ದರು.