Advertisement

ಕೋವಿಡ್-19 ಸೋಂಕು ತಾಗಿದ್ದ ಗದಗದ 80ರ ವೃದ್ಧೆ ಸಾವು; ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

09:15 AM Apr 10, 2020 | keerthan |

ಗದಗ: ಜಿಲ್ಲೆಯ ಕೋವಿಡ್-19 ಸೋಂಕು ಪೀಡಿತ ವೃದ್ಧೆ ಸಾವನ್ನಪ್ಪಿದ್ದಾರೆ. ಬುಧವಾರ ತಡರಾತ್ರಿ ಅವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Advertisement

ನಗರದ ರಂಗನವಾಡಿ ನಿವಾಸಿಯಾಗಿದ್ದ 80 ವರ್ಷದ ವೃದ್ಧೆ ಬುಧವಾರ ಮಧ್ಯರಾತ್ರಿ 12.55ಕ್ಕೆ  ಕಾರ್ಡಿಯಾಕ್ ಅರೆಸ್ಟನಿಂದ ಮೃತಪಟ್ಟಿದ್ದಾಳೆ ಎಂದು  ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ.

ಏಪ್ರಿಲ್ 4 ರಂದು ತೀವ್ರ  ಉಸಿರಾಟದ ತೊಂದರೆಯಿಂದ ಬಳುಲುತ್ತಿದ್ದ ವೃದ್ಧೆಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏ.6 ರಂದು ಕೋವಿಡ್-19 ಸೋಂಕು ದೃಢಪಟ್ಟಿತ್ತು. ಹೀಗಾಗಿ ಮಲ್ಲ ಸಮುದ್ರದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ ಚಿಕಿತ್ಸೆ  ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಸೋಂಕು ಮೂಲ ಯಾರು?

ವೃದ್ಧೆಗೆ ಸೋಂಕು ಎಲ್ಲಿಂದ, ಯಾರಿಂದ ತಗುಲಿದೆ ಎನ್ನುವುದು ನಿಗೂಢವಾಗಿದೆ.  ಮೃತಳು ಇಲ್ಲಿನ ರಂಗನವಾಡದ ತಂಗಿ ಮನೆಯಲ್ಲಿ ವಾಸವಿದ್ದಳು. ಅಲ್ಲದೇ ಇತ್ತೀಚಿಗೆ ಇಲ್ಲಿನ ಎಸ್.ಎಂ.ಕೃಷ್ಣ ನಗರದಲ್ಲಿ ಸಂಬಂಧಿಕರೊಬ್ಬರ ಪುಟ್ಟ ಕಾರ್ಯಕ್ರಮದಲ್ಲಿ ಭಾಗಿಯಗಿದ್ದರು. ಅದೇ ಸಮಾರಂಭಕ್ಕೆ 7 ಜನ ಗೋವಾದಿಂದ ಆಗಮಿಸಿದ್ದರು. ಹೀಗಾಗಿ ಅವರಿಂದಲೇ ಸೋಂಕು ಹರಡಿರುವ ಸಂಶಯ ವ್ಯಕ್ತವಾಯಿತು.

Advertisement

ಈ ನಡುವೆ ವೃದ್ಧೆಗೆ ಸೋಂಕು ಖಚಿತವಾಗುತ್ತಿದ್ದಂತೆ ಆಕೆಯ ಮನೆಯವರು, ಗೋವಾದಿಂದ ಆಗಮಿಸಿದವರು ಸೇರಿದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 35 ಜನ ಹಾಗೂ ವೃದ್ಧೆಗೆ ಚಿಕಿತ್ಸೆ ನೀಡಿದ್ದ 7 ಜನ ವೈದ್ಯಕೀಯ ಸಿಬ್ಬಂದಿಯನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಯಾರಲ್ಲೂ ಸೋಂಕು ದೃಢ ಪಟ್ಟಿಲ್ಲ. ಹೀಗಾಗಿ ವೃದ್ಧೆಗೆ ಸೋಂಕು ಹರಡಿದ್ದು ಯಾರಿಂದ ಎಂಬುದು ಪತ್ತೆ ಮಾಡುವುದೇ ಜಿಲ್ಲಾಡಳಿತದ ಮುಂದಿರುವ ಸವಾಲು.

Advertisement

Udayavani is now on Telegram. Click here to join our channel and stay updated with the latest news.

Next