Advertisement

ಸಮ್ಮೆಳನಾಧ್ಯಕ್ಷರ ಮೆರವಣಿಗೆಗೆ ಸಿದ್ಧಗೊಂಡ ಕಲಾತಂಡ

10:23 AM Jan 03, 2019 | |

ಧಾರವಾಡ: ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ಅವರ ಭವ್ಯ ಮೆರವಣಿಗೆ ಜ. 4ರಂದು ಬೆಳಗ್ಗೆ 8:30 ಗಂಟೆಗೆ ಕರ್ನಾಟಕ ಕಾಲೇಜು ಮೈದಾನದಿಂದ ಆರಂಭವಾಗಲಿದ್ದು, ರಾಜ್ಯದ ವಿವಿಧ ಜಾನಪದ ಕಲಾತಂಡಗಳು, ಸ್ತಬ್ಧ ಚಿತ್ರಗಳು ಮತ್ತು ಸಾವಿರಾರು ವಿದ್ಯಾರ್ಥಿಗಳ ತಂಡ ಸಿದ್ಧಗೊಂಡಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ವ್ಯವಸ್ಥಿತವಾಗಿ ಮತ್ತು ಆಕರ್ಷಕವಾಗಿ ಜರುಗಲು ರಾಜ್ಯದ ಪ್ರಮುಖ ಜೀವಜಲಗಳ ಹೆಸರಿನಲ್ಲಿ ಒಟ್ಟು 14 ಘಟಕಗಳನ್ನು ರಚಿಸಲಾಗಿದೆ.

Advertisement

ಘಟಕ-1 ‘ಶಾಲ್ಮಲಾ’ದಲ್ಲಿ ಚಿತ್ರದುರ್ಗದ ಶಿವಕುಮಾರ ಚಳ್ಳಂಗಿ ತಂಡದ ಕಹಳೆ ವಾದನ, ಶಿವಮೊಗ್ಗದ ಟೇಕಪ್ಪ ಅಂಚೆ ತಂಡದ ಡೊಳ್ಳುಕುಣಿತ, ಧಾರವಾಡದ ಬಸಪ್ಪ ಹಂಚಿನಮನಿ ತಂಡದ ಜಗ್ಗಲಿಗೆ ಮೇಳ, ರಾಮನಗರದ ಜಾನಪದ ಚಟ್ಟಿ ಮೇಳ, ಕುಮಾರಯ್ಯ ತಂಡದ ಪೂಜಾ ಮತ್ತು ಪಟ. ಹಾಸನದ ಚಿಟ್‌ಮೇಳ ಹಾಗೂ ಧಾರವಾಡದ ಸೇಂಟ್‌ ಜೋಸೆಫ್‌ ಪ್ರೌಢಶಾಲೆ, ಆರ್‌ಎಲ್‌ಎಸ್‌ ಪ್ರೌಢಶಾಲೆ, ಜಯದೇವಿತಾಯಿ ಲಿಗಾಡೆ, ಕೆಸಿಡಿ, ಜೆಎಸ್ಸೆಸ್‌, ಕಿಟೆಲ್‌ ಹಾಗೂ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಘಟಕ -2 ‘ಮಲಪ್ರಭಾ’ದಲ್ಲಿ ಬೆಂಗಳೂರು ಗ್ರಾಮಾಂತರದ ರಾಜಶೇಖರ ದೇವನಹಳ್ಳಿ ಅವರ ನಗಾರಿ ವಾದನ, ವಿಜಯಪುರದ ರಮೇಶ ಕಾಕಂಡಕಿ ತಂಡದ ಸಂಭಾಳ ವಾದನ, ಗದಗ ಪ್ರಕಾಶ ಚಂದಣ್ಣವರ ತಂಡದ ಡೊಳ್ಳುಕುಣಿತ, ಬೆಂಗಳೂರು ನಗರ ಜಿಲ್ಲೆಯ ಮಾತೃಭೂಮಿ ಯುವಕ ತಂಡದ ಗೊರವರ ಕುಣಿತ ಮತ್ತು ಧಾರವಾಡದ ಕೆಎನ್‌ಕೆ, ವಿದ್ಯಾರಣ್ಯ, ಕರ್ನಾಟಕ ಹೈಸ್ಕೂಲ್‌, ಕೆ.ಇ. ಬೋರ್ಡ್‌, ಬಾಸೆಲ್‌ ಮಿಷನ್‌, ಆರ್‌ಎಲ್‌ಎಸ್‌ ಮತ್ತು ಸಿಎಸ್‌ಐ ಮಹಾವಿದ್ಯಾಲಯ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಘಟಕ-3 ‘ಘಟಪ್ರಭಾ’ದಲ್ಲಿ ಉಡುಪಿಯ ಲಕ್ಷ್ಮೀನಾರಾಯಣ ಚಂಡೆವಾದ್ಯ ಬಳಗದ ಮಹಿಳೆಯರ ಸಿಂಗಾರಿ ಮೇಳ, ಚಿಕ್ಕಬಳ್ಳಾಪುರದ ಗಂಗೂಲಪ್ಪ ತಂಡದ ಬುಡಬುಡಕಿ, ಯಾದಗಿರಿಯ ವಿಶ್ವನಾಥ ತೋಟ್ನಳ್ಳಿ ತಂಡದ ಹಲಗೆವಾದನ, ಧಾರವಾಡ ಪ್ರಕಾಶ ಮಳಗಿ ತಂಡದ ಜಗ್ಗಲಿಗೆ ಮೇಳ ಮತ್ತು ಧಾರವಾಡದ ಬುದ್ಧರಕ್ಕಿತ, ಗಾಂಧಿ ಹಿಂದಿ ಹೈಸ್ಕೂಲ್‌, ಬಾಸೆಲ್‌ ಮಿಷನ್‌, ಅಂಜುಮನ್‌, ಆಲೂರು ವೆಂಕಟರಾವ್‌ ಕಾಲೇಜು, ಕಿಟೆಲ್‌, ಮದೀನಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವರು.

ಘಟಕ-4 ‘ಕಾಳಿ’ಯಲ್ಲಿ ಬಳ್ಳಾರಿಯ ಮೈಲಾರ ಲಿಂಗೇಶ್ವರ ಹೆಜ್ಜೆಮೇಳ, ಜಡೆಕುಣಿತ, ಬೀದರ ಹನುಮಂತ ತಂಡದ, ಭೂತನೃತ್ಯ, ಧಾರವಾಡ ದುರ್ಗಾದೇವಿ ಜಗ್ಗಲಗಿ ತಂಡದ ಜಗ್ಗಲಿಗೆ ಮೇಳ ಮತ್ತು ಧಾರವಾಡದ ಸರಸಗಂಗಾ, ಆದರ್ಶ, ವನಿತಾ, ಶಾರದಾ, ಜೆಎಸ್‌ಎಸ್‌ ಸೇಂಟ್‌ ಜೋಸೆಫ್‌, ಎಚ್‌. ಎಂ. ಈಶ್ವರನ್‌ ಮತ್ತು ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಶಾಲೆ ವಿದ್ಯಾರ್ಥಿಗಳು ಪಾಲ್ಗೊಳ್ಳುವರು.

Advertisement

ಘಟಕ-5 ‘ಕೃಷ್ಣಾ’ದಲ್ಲಿ ಚಿಕ್ಕಮಗಳೂರು ದೇವಿರಮ್ಮ ಕಲಾ ತಂಡದ ಸುಗ್ಗಿ ಕುಣಿತ, ಧಾರವಾಡ ವೆಂಕಪ್ಪ ಪುಲಿಯವರ ಕರಡಿಮಜಲು, ಬೆಳಗಾವಿ ಶಂಕ್ರಪ್ಪ ಮುಗಳಿ ತಂಡದ ಮಹಿಳಾ ಗೊಂಬೆ, ಡೊಳ್ಳುಕುಣಿತ, ಚಾಮರಾಜನಗರದ ಬಾಲು ರಾಮಸಮುದ್ರ ಅವರ ಗೊರವರ ಕುಣಿತ ಮತ್ತು ಶಾರದಾ, ಚನ್ನಬಸವೇಶ್ವರ ಮಹಾಂತೇಶ, ಎಸ್‌.ಸಿ. ಶಿವಾಜಿ, ಅಡೆಸ್ಟ್‌, ಪ್ರಸೆಂಟೇಶನ್‌, ಎಲ್‌ಇಇಸ್‌ ಕಲಾ ಹಾಗೂ ಜಿಗಳೂರು ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸುವರು.

ಘಟಕ-6 ‘ತುಂಗಭದ್ರಾ’ದಲ್ಲಿ ಬಾಗಲಕೋಟೆಯ ಗಂಗಪ್ಪ ಕರಡಿ ಮಜಲು, ಕೊಪ್ಪಳದ ಕಂಠಿಬಸವೇಶ್ವರ ಕಲಾ ಸಂಘದ ಕರಡಿ ಮಜಲು, ಧಾರವಾಡದ ವಾಲ್ಮೀಕಿ ಜಾನಪದ ಮಹಿಳಾ ತಂಡದ ಮಹಿಳಾ ಡೊಳ್ಳುಕುಣಿತ, ತುಮಕೂರಿನ ಶ್ರೀಮತಿ ಲತಾ ತಂಡದ ಸಂಬಾಳ ವಾದನ ಮತ್ತು ಮೃತ್ಯುಂಜಯ ನ್ಯೂ ಹೈಸ್ಕೂಲ್‌, ಭಾರತ, ಸಂದೇಶ, ವಿ.ಎ. ಮತ್ತಿಕಟ್ಟಿ, ಪ್ರೀಜಮ್‌, ಓಂ ಹಾಗೂ ಮೃತ್ಯುಂಜಯ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುವರು.

ಘಟಕ-7 ‘ಕಾವೇರಿ’ಯಲ್ಲಿ ದಕ್ಷಿಣ ಕನ್ನಡದ ಗಿರಿ ಸಿರಿ ಜಾನಪದ ಕಲಾ ತಂಡದ ಸುಗ್ಗಿ ಕುಣಿತ, ಧಾರವಾಡದ ಮಲ್ಲಿಕಾರ್ಜುನ ಅಲೆಮಾರಿ ಕಲಾ ತಂಡದ ಕರಡಿ ಮಜಲು, ರಾಮಣ್ಣ ಕಾಳಿ ತಂಡದ ಮಹಿಳಾ ಗೊಂಬೆ, ಡೊಳ್ಳುಕುಣಿತ, ಮಾರುತಿ ಕರಡಿ ಸಂಘದ ಗೊರವರ ಕುಣಿತ ಮತ್ತು ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸುವರು.

ಘಟಕ-8 ‘ವರದಾ’ದಲ್ಲಿ ರಾಯಚೂರು ಜಿಲ್ಲೆಯ ಜ್ಯೋತಿ ಮಹಿಳಾ ಕಲಾ ತಂಡದ ಕರಡಿ ಮಜಲು, ಧಾರವಾಡ ಜಿಲ್ಲೆಯ ಸೇವಾಲಾಲ ಬಂಜಾರ ಮಹಿಳಾ ಸಂಘದ ಕರಡಿ ಮಜಲು, ಮಹಾಂತ ಒಳಮಲ್ಲದೇವಿ ಕಲಾ ಸಂಘದ ಮಹಿಳಾ ಡೊಳ್ಳು ಕುಣಿತ, ಅರ್ಜುನ ಮರೇವಾಡ ತಂಡದ ಸಂಬಾಳ ವಾದನ ಮತ್ತು ಹಜರತ್‌ ನಿಜಾಮುದ್ದೀನ್‌, ಎಚ್‌ಡಿಎನ್‌ಎಸ್‌ವಿಎಸ್‌, ಸುವರ್ಣಾ, ಬೆಸ್ಟ್‌, ಸೃಷ್ಟಿ, ಆರ್‌.ಎನ್‌. ಶೆಟ್ಟಿ ಹಾಗೂ ಅಂಜುಮನ್‌ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುವರು.

ಘಟಕ-9 ‘ನೇತ್ರಾವತಿ’ಯಲ್ಲಿ ಕೊಡಗು ಜಿಲ್ಲೆಯ ಶಾರದಾ ಕೆ.ಎಸ್‌. ಕೆಮಳೂರು ತಂಡದ ಕೊಡಗಿನ ನೃತ್ಯ, ಧಾರವಾಡ ಜಿಲ್ಲೆಯ ಮುಕ್ತುಂ ಹುಸೇನ್‌ ತಂಡದ ಕರಡಿಮೇಳ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ.

ಘಟಕ-10 ‘ಭೀಮಾ, ಘಟಕ-11 ‘ಶರಾವತಿ’, ಘಟಕ-12 ‘ಕುಮಾರಧಾರಾ’, ಘಟಕ-13 ಹೇಮಾವತಿ’, ಘಟಕ-14 ‘ಮಹಾದಾಯಿ’ಗಳಲ್ಲಿ ರಾಜ್ಯದ ವಿವಿಧ ಕಲಾ ಪ್ರಕಾರದ ತಂಡಗಳು ಭಾಗವಹಿಸಿ ಕಲೆಗಳ ಪ್ರದರ್ಶನ ನೀಡಲಿವೆ. ಸಮ್ಮೇಳನಾಧ್ಯಕ್ಷರು ಸೇರಿದಂತೆ ಕಸಾಪ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ತೆರೆದ ವಾಹನಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next