Advertisement
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ನಾಮಪತ್ರ ಸಲ್ಲಿಸಿ ಇಂದು ಪಂಡಿತ್ ಪುಟ್ಟರಾಜ ಗವಾಯಿಗಳು ಹಾಗೂ ಪಂಚಾಕ್ಷರಿ ಗವಾಯಿಗಳ ಗದ್ದುಗೆ ಆಶಿರ್ವಾದ ಪಡೆದಿದ್ದೇನೆ. ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ 28 ಸ್ಥಾನ ಗೆಲ್ಲುವ ಗುರಿ ನಮ್ಮದಾಗಿದೆ ಎಂದರು.
Related Articles
Advertisement
ದಿಂಗಾಲೇಶ್ವರ ಶ್ರೀಗಳು ಧಾರವಾಡದಿಂದ ಲೋಕಸಭಾ ಚುನಾವಣೆ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶ್ರೀರಾಮುಲು ದಿಂಗಾಲೇಶ್ವರ ಶ್ರೀಗಳು ನಮಗೆ ಗುರುಗಳು. ನಮಗೆಲ್ಲಾ ಮಾರ್ಗದರ್ಶನ, ಸಂಸ್ಕಾರ ಕೊಟ್ಟಿದಾರೆ. ಶ್ರೀಗಳ ಬಗ್ಗೆ ನಮಗೆ ಗೌರವವಿದೆ. ಧರ್ಮಕ್ಕಾಗಿ ನಿಲ್ಲುವ ವ್ಯಕ್ತಿ ದಿಂಗಾಲೇಶ್ವರ ಶ್ರೀಗಳು ಲೋಕಸಭಾ ಚುನಾವಣೆ ಸ್ಪರ್ಧಿಸಬೇಕೆ – ಬೇಡವೇ ಎಂಬ ವಿಚಾರವನ್ನು ಹಿರಿಯರು, ಶ್ರೀಗಳ ಜೊತೆ ಚರ್ಚೆ ಮಾಡಬೇಕು ಎಂದು ಹೇಳಿದರು.
ಶ್ರೀಗಳಿಗೆ ಸ್ಪರ್ಧೆ ಮಾಡಬೇಡಿ ಎಂದು ಹೇಳುವಷ್ಟು ದೊಡ್ಡವ ನಾನಲ್ಲ. ಅವರು ಸ್ಪರ್ಧೆಯ ವಿಚಾರಕ್ಕೆ ಸಮುದಾಯ, ಹಿರಿಯರು, ಅನೇಕ ಶ್ರೀಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಬಿ.ಎಸ್.ವೈ, ಪ್ರಹ್ಲಾದ್ ಜೋಷಿ, ಅನೇಕರು ಮಾತುಕತೆ ನಡೆಸಿದ್ದಾರೆ. ಗದಗ ಸೌಹಾರ್ದತೆ ಜಿಲ್ಲೆಯು ಜಾತಿ, ಧರ್ಮ, ಮತ, ಪಂಥ ಒಂದುಗೂಡಿಸಿದ ಫಕೀರೇಶ್ವರ ಮಠ. ಅಂತಹ ಮಠದ ದಿಂಗಾಲೇಶ್ವರ ಶ್ರೀಗಳು ಧರ್ಮಕ್ಕಾಗಿ ಜಯವಾಗಲಿ ಎನ್ನುತ್ತಾರೆ. ಎಲ್ಲರನ್ನೂ ಒಂದು ಗೂಡಿಸಿಕೊಂಡು ಹೋಗ್ತಾರೆ ಎಂಬ ವಿಶ್ವಾಸವಿದ್ದು, ಚುನಾವಣೆಯಿಂದ ಹಿಂದೆ ಸರಿಯಬಹುದು ಎಂಬ ಆತ್ಮವಿಶ್ವಾಸವಿದೆ ಎಂದು ಹೇಳಿದರು.