ಗದಗ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಬರುವುದಿಲ್ಲ ಎಂಬ ಕಾರಣಕ್ಕೆ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಾತಿ ನಿಂದನೆ ಆರೋಪ ಮಾಡಿದ್ದು ಖಂಡನೀಯ. ರಾಹುಲ್ ಗಾಂಧಿ ಅವರು ದೇಶದ ಜನರ ಕ್ಷಮೆಯಾಚಿಸಬೇಕೆಂದು ರಾಜ್ಯ ಒಬಿಸಿ ಕಾರ್ಯದರ್ಶಿ ರವಿಂದ್ರನಾಥ ದಂಡಿನ ಆಗ್ರಹಿಸಿದರು.
Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ನರೇಂದ್ರ ಮೋದಿಯವರು ಯಾರಿಗೂ ಅನ್ಯಾಯ ಮಾಡಿಲ್ಲ. ಅವರು ಯಾವುದೇ ಜಾತಿ, ಧರ್ಮ, ಬುಡಕಟ್ಟು ಜನಾಂಗವನ್ನಾಗಲಿ ನಿಂದಿಸಿ ರಾಜಕೀಯ ಮಾಡುವಂತ ವ್ಯಕ್ತಿಯಲ್ಲ. ಭಾರತದ 140 ಕೋಟಿ ಜನರ ಪ್ರತಿನಿ ಧಿಯಾಗಿ, ಪ್ರಧಾನ ಸೇವಕರಾಗಿ ಎಲ್ಲ ವರ್ಗದ ಜನರ ಸರ್ವತೋಮುಖ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಂದ ದೇಶ ಉದ್ಧಾರವಾಗಿದೆಯೇ ಹೊರತು ಹಾನಿಯಾಗಿಲ್ಲ. ಭಾರತ ವಿಶ್ವಗುರುವಾಗಿ, ಆರ್ಥಿಕವಾಗಿ ಐದನೇ ಶಕ್ತಿಯಾಗಿ ಜಗತ್ತಿನಲ್ಲಿ ಹೊರ ಹೊಮ್ಮಿದೆ. ಹೀಗಿದ್ದಾಗ್ಯೂ ಕಾಂಗ್ರೆಸ್‌ನವರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
Related Articles
Advertisement