ಮುಂಡರಗಿ: ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಾಲವಾಡಗಿ ಏತ ನೀರಾವರಿ ಯೋಜನೆಯಿಂದ ಮುಂಡರಗಿ- ಶಿರಹಟ್ಟಿ, ಗದಗ ಭಾಗದ 29 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅನುದಾನ ನೀಡಬಹುದೆಂಬ ನಿರೀಕ್ಷೆಯನ್ನು ಈ ಭಾಗದ ರೈತರು ಹೊಂದಿದ್ದಾರೆ.
ಈಗಾಗಲೇ ತಾಲೂಕಿನ ಬಹುದೊಡ್ಡ ಶಿಂಗಟಾಲೂರು ಏತ ನೀರಾವರಿ ಯೋಜನೆಯ ಸೂಕ್ಷ್ಮನೀರಾವರಿ ಕಾಮಗಾರಿಗಳಡಿ ರೈತರ ಹೊಲಗಳಿಗೆ ನೀರುಣಿಸಲು ಪೈಪ್‌ಲೈನ್ ಹಾಕುವುದರ ಮೂಲಕಪ್ರಾಯೋಗಿಕ ಪರೀಕ್ಷೆ ಕೂಡ ನಡೆಸಲಾಗುತ್ತಿದೆ. ಜತೆಗೆ ಇದೇ ಏತ ನೀರಾವರಿಯಿಂದ ಬಸಾಪೂರ,ಹಿರೇವಡ್ಡಟ್ಟಿ, ಡಂಬಳ, ಜಂತ್ಲಿ-ಶಿರೂರು, ಪೇಠಾಲೂರು ಕೆರೆಗಳು ಸೇರಿದಂತೆ ಮೂವತ್ತಕ್ಕಿಂತಲೂಹೆಚ್ಚು ಚೆಕ್ ಡ್ಯಾಂಗಳಿಗೆ ಪೈಪ್‌ಲೈನ್ ಮೂಲಕ ನೀರುತುಂಬಿಸಿದ್ದರಿಂದ ಈ ಭಾಗದಲ್ಲಿ ರೈತರು ನೀರಾವರಿಮೂಲಕ ಬೆಳೆ ಬೆಳೆಯುತ್ತಿದ್ದಾರೆ. ಅದರಂತೆಯೇ ತಾಲೂಕಿನ ತುಂಗಭದ್ರಾ ನದಿಯ ಹಮ್ಮಿಗಿ ಬ್ಯಾರೇಜ್‌ನಿಂದ ಜಾಲವಾಡಗಿ ಗ್ರಾಮದ ಕೆರೆ ಮೂಲಕ ಮುಂಡರಗಿ ತಾಲೂಕಿನ ಮುರುಡಿ, ಕೆಲೂರು, ಚಿಕ್ಕವಡ್ಡಟ್ಟಿ, ಕೆರೆಗಳು ಮತ್ತುಶಿರಹಟ್ಟಿ ತಾಲೂಕಿನ ಜಲ್ಲಿಗೇರಿ, ಕಡಕೋಳ,ಮಾಗಡಿ, ಸೊರಟೂರು ಕೆರೆಗಳು, ಗದಗ ತಾಲೂಕಿನ ಮುಳಗುಂದ, ಕಬಲಾದಕಟ್ಟಿ, ಮಲ್ಲಸಮುದ್ರ, ಕಣವಿ,ನೀಲಗುಂದ ಸೇರಿದಂತೆ ಒಟ್ಟು 29 ಕೆರೆಗಳಿಗೆ ನೀರುತುಂಬಿಸುವ ಯೋಜನೆಯ ಮರು ಪ್ರಸ್ತಾವನೆಯನ್ನುಜಲ ಸಂಪನ್ಮೂಲ ಇಲಾಖೆಗೆ ಅನುಮೋದನೆಗೆಕಳುಹಿಸಲಾಗಿದೆ.
ಈ ಮೊದಲಿನ ಪ್ರಸ್ತಾವನೆ ಇಲಾಖೆಯಬಾಕಿ ಕಾಮಗಾರಿಗಳ ಕಾರ್ಯಭಾರ ಅಧಿಕವಾಗಿರುವುದರಿಂದ 110.94 ಕೋಟಿ ರೂ.ಯೋಜನೆಯನ್ನು ಸದ್ಯಕ್ಕೆ ಮುಂದೂಡಲಾಗುತ್ತಿದೆಎಂದು ಸರಕಾರದ ಜಲಸಂಪನ್ಮೂಲ ಇಲಾಖೆಕಾರ್ಯದರ್ಶಿಗಳು 2019ರ ಜುಲೈ 15ರಂದುಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕನಿರ್ದೇಶಕರಿಗೆ ಪತ್ರ ಬರೆದಿದ್ದರು. ಆದರೆ ಮರುಪ್ರಸ್ತಾವನೆಯಂತೆ ಮುಂಡರಗಿ, ಶಿರಹಟ್ಟಿ, ಗದಗಭಾಗದ 29 ಕೆರೆ, ಚೆಕ್‌ಡ್ಯಾಂಗಳಿಗೆ ನೀರು ತುಂಬಿಸುವ197.05 ಕೋಟಿ ರೂ. ಮಾರ್ಪಡಿತ ಪ್ರಸ್ತಾವನೆಯನ್ನು2020ರ ಸೆಪ್ಟೆಂಬರ್‌ನಲ್ಲಿ ಆಡಳಿತಾತ್ಮಕ ಅನುಮೋದನೆಗೆ ಕಳುಹಿಸಲಾಗಿದೆ. ಹಾಗಾಗಿ ಜಾಲವಾಡಗಿ ಏತನೀರಾವರಿ ಯೋಜನೆಗೆ ಈ ಸಲ ಸಿಎಂ ಅನುದಾನ ನೀಡಬಹುದೆನ್ನುವ ಆಶಾಭಾವ ಇದೆ.
ಈ ಹಿಂದೆ 29 ಕೆರೆಗಳಿಗೆ ನೀರು ತುಂಬಿಸುವಜಾಲವಾಡಗಿ ಏತ ನೀರಾವರಿ ಯೋಜನೆ ಅನುದಾನ ಕೊರತೆಯಿಂದ ನನೆಗುದಿಗೆ ಬಿದ್ದಿತ್ತು. ಅಲ್ಲಿಂದಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಾರದೇ ರೈತರು ಮೀನಮೇಷ ಎಣಿಸುವಂತಾಗಿದೆ.ಜಾಲವಾಡಗಿ ಏತ ನೀರಾವರಿಯಿಂದ 29 ಕೆರೆಗಳಿಗೆನೀರು ತುಂಬಿಸಿದರೆ ಮುಂಡರಗಿ, ಶಿರಹಟ್ಟಿ, ಗದಗ ಭಾಗದ ಸಾವಿರಾರು ಏಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ದೊರೆಯಲಿದೆ. ಕೆರೆಗಳಿಗೆ ನೀರು ತುಂಬಿಸಿದರೆ ಶಾಶ್ವತ ಬರಗಾಲದಹಣೆಪಟ್ಟಿಯಿಂದ ಈ ಭಾಗದ ರೈತರು ಕಳಚಿಕೊಂಡು ನೀರಾವರಿ ಬೆಳೆ ಬೆಳೆಯಲು ಅನುಕೂಲವಾಗಲಿದೆ.
ಹು.ಬಾ.ವಡ್ಡಟ್ಟಿ