Advertisement
ಗದಗ ಜಿಲ್ಲೆಯ ಪ್ರಮುಖ ಮುಂಗಾರು ಬೆಳೆ ಹೆಸರು. ಆದ್ದರಿಂದ, ಕೃಷಿ ಇಲಾಖೆ ಕೂಡ ಹೆಸರು ಬೆಳೆಗೆ ಪ್ರಾಮುಖ್ಯತೆ ನೀಡಿ1,25,000 ಹೆಕ್ಟೇರ್ ಬಿತ್ತನೆ ಗುರಿ ನಿಗದಿ ಮಾಡಿಕೊಂಡಿತ್ತು. ಸದ್ಯ ರೋಹಿಣಿ ಮಳೆ ಕೈಕೊಟ್ಟ ಬೆನ್ನಲ್ಲೇ ಜಿಲ್ಲೆಯಲ್ಲಿ ಈವರೆಗೆ ಕೇವಲ 13,430 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹೆಸರು ಬಿತ್ತನೆಯಾಗಿದೆ.ಕೃಷಿ ಇಲಾಖೆ ಜಿಲ್ಲೆಯ ಆದ್ಯತೆ ಅನುಸಾರವಾಗಿ ಬಿತ್ತನೆ ಕ್ಷೇತ್ರದ ಗುರಿ ನಿಗದಿಪಡಿಸಿಕೊಂಡಿತ್ತು.
ಪಿಎಂ-ಕಿಸಾನ್ ಯೋಜನೆಯ ಇ-ಕೆವೈಸಿ ಮಾಡಿಕೊಂಡಿದ್ದು, 37,635 ರೈತರು ಇ-ಕೆವೈಸಿ ಮಾಡಿಸಬೇಕಿದೆ. ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ 11,651 ರೈತರು, ಶಿರಹಟ್ಟಿ ತಾಲೂಕಿನಲ್ಲಿ 8,888, ಗದಗ ತಾಲೂಕಿನಲ್ಲಿ 6,926, ಶಿರಹಟ್ಟಿಯಲ್ಲಿ 6,137
ಮತ್ತು ಮುಂಡರಗಿ ತಾಲೂಕಿನಲ್ಲಿ 3,879 ರೈತರು ಇ-ಕೆವೈಸಿ ಮಾಡಿಸಬೇಕಿದೆ.
Related Articles
Advertisement
ಮೇ ತಿಂಗಳ ಅಂತ್ಯದಲ್ಲಿ ಸೈಕ್ಲೋನ್ ಎಫೆಕ್ಟ್ನಿಂದಾಗಿ ಮುಂಗಾರು ಆರಂಭಕ್ಕೆ ತೊಂದರೆಯಾಗಿದೆ. ಇನ್ನೂ ಮೂರ್‍ನಾಲ್ಕು ದಿನಗಳ ನಂತರ ಮಳೆಯಾಗುವ ಸಂಭವವಿದ್ದು, ರೈತರು ಒಣಭೂಮಿಯನ್ನು ಬಿತ್ತನೆ ಮಾಡಬಾರದು. ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು. ಮುಂಗಾರು ಮಳೆ ತಡವಾಗಿದ್ದರಿಂದ ಕೃಷಿ ತಜ್ಞರ ಹಾಗೂ ಕೃಷಿ ಅಧಿಕಾರಿಗಳ ಸಲಹೆ ಪಡೆದು ಬಿತ್ತನೆ ಮಾಡಬೇಕು. ಇಲ್ಲವಾದಲ್ಲಿ ಬಿತ್ತಿದ ಬೆಳೆ ಕೈಗೆ ಬರದೆ ಆರ್ಥಿಕ ಸಂಕಷ್ಟಕ್ಕೆ ಎದುರಿಸಬೇಕಾಗುತ್ತದೆ.ತಾರಾಮಣಿ ಜಿ.ಎಚ್., ಜಂಟಿ ಕೃಷಿ ನಿರ್ದೇಶಕರು, ಗದಗ 941 ಕ್ವಿಂಟಲ್ ಬಿತ್ತನೆ ಬೀಜ ವಿತರಣೆ
2023-24ನೇ ಸಾಳಿನ ಮುಂಗಾರು ಹಂಗಾಮಿನಲ್ಲಿ 4,226 ಕ್ವಿಂಟಲ್ ಮೆಕ್ಕೆಜೋಳ ಬೇಡಿಕೆ ಪೈಕಿ 2,756 ಕ್ವಿಂಟಲ್ ದಾಸ್ತಾನಿದ್ದು, 504 ಕ್ವಿಂಟಲ್ ವಿತರಣೆಯಾಗಿದೆ. 1,853 ಕ್ವಿಂಟಲ್ ಹೆಸರು ಬೇಡಿಕೆ ಪೈಕಿ 579 ಕ್ವಿಂಟಲ್ ದಾಸ್ತಾನಿದ್ದು, 406 ಕ್ವಿಂಟಲ್ ವಿತರಣೆಯಾಗಿದೆ. ತೊದರಿ 25.9 ಕ್ವಿಂಟಲ್, ಶೇಂಗಾ 1.20 ಕ್ವಿಂಟಲ್, ಸಜ್ಜೆ 1.50 ಕ್ವಿಂಟಲ್ ಸೇರಿ 9,217 ಕ್ವಿಂಟಲ್ ಮುಂಗಾರು ಹಂಗಾಮಿನ ಬೀಜದ ಬೇಡಿಕೆಗನುಗುಣವಾಗಿ 3,761 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದ್ದು, ಆ ಪೈಕಿ ಈವರೆಗೆ 941.54 ಕ್ವಿಂಟಲ್ ವಿತರಣೆಯಾಗಿದೆ ಶೇ. 46ರಷ್ಟು ಮಳೆ ಕುಂಠಿತ
2023ರ ಜನವರಿ ಆರಂಭದಿಂದ ಈವರೆಗೆ 148.5 ಎಂಎಂ ಮಳೆಯಾಗಬೇಕಿತ್ತು. ಈವರೆಗೆ ಕೇವಲ 79.6 ಮಿ.ಮೀ.ನಷ್ಟು ಮಳೆಯಾಗಿದ್ದು, ಶೇ. 46ರಷ್ಟು ಮಳೆ ಕುಂಠಿತಗೊಂಡಿದೆ. ಗದಗ ತಾಲೂಕಿನಲ್ಲಿ ಶೇ. 53ರಷ್ಟು, ಮುಂಡರಗಿ ತಾಲೂಕಿನಲ್ಲಿ ಶೇ. 48ರಷ್ಟು, ನರಗುಂದ ತಾಲೂಕಿನಲ್ಲಿ ಶೇ. 37ರಷ್ಟು, ರೋಣ ತಾಲೂಕಿನಲ್ಲಿ ಶೇ. 39ರಷ್ಟು, ಶಿರಹಟ್ಟಿ ತಾಲೂಕಿನಲ್ಲಿ ಶೇ. 62ರಷ್ಟು, ಗಜೇಂದ್ರಗಡ ತಾಲೂಕಿನಲ್ಲಿ ಶೇ. 47ರಷ್ಟು ಹಾಗೂ ಲಕ್ಷ್ಮೇ ಶ್ವರ ತಾಲೂಕಿನಲ್ಲಿ ಶೇ. 57ರಷ್ಟು ಮಳೆ ಕುಂಠಿತಗೊಂಡಿದೆ. ಅರುಣಕುಮಾರ ಹಿರೇಮಠ