Advertisement

ಗದಗ ಜಿಲ್ಲೆಯಲ್ಲಿ 70 ಜನರಿಗೆ ಕೋವಿಡ್ ಸೋಂಕು

03:03 PM Oct 01, 2020 | sudhir |

ಗದಗ: ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 70 ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಅದರೊಂದಿಗೆ 116 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9108ಕ್ಕೆ ಏರಿಕೆಯಾಗಿದೆ. ಆ ಪೈಕಿ ಈವರೆಗೆ 8,407 ಜನರು ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದಂತೆ 570 ಜನರು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಗದಗ-40, ಮುಂಡರಗಿ-6, ನರಗುಂದ-3, ರೋಣ-8, ಶಿರಹಟ್ಟಿ-10, ಹೊರಜಿಲ್ಲೆಯ ಮೂವರಿಗೆ ಸೋಂಕು ಖಚಿತವಾಗಿದೆ. ಈ ನಡುವೆ ಮತ್ತೆ ಇಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದು, ಈವರೆಗೆ ಜಿಲ್ಲೆಯಲ್ಲಿ ಒಟ್ಟು 131 ಜನರು ಬಲಿಯಾದಂತಾಗಿದೆ. ಮುಂಡರಗಿ ಪಟ್ಟಣ್ಣದ 59 ವರ್ಷದ ಪುರುಷ, ಗದಗ ತಾಲೂಕಿನ ಹೊಂಬಳ ನಿವಾಸಿ 67 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿ ಕಾರಿ ಎಂ. ಸುಂದರೇಶ್‌ ಬಾಬು ತಿಳಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next