Advertisement

Udupi ಜಿ. ಶಂಕರ್‌ ಆರೋಗ್ಯ ಸುರಕ್ಷಾ ಕಾರ್ಡ್‌ ಡಿ. 5ರಿಂದ ನವೀಕರಣ

12:26 AM Dec 02, 2023 | Team Udayavani |

ಮಲ್ಪೆ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗ, ಮಾಹೆ ವಿಶ್ವವಿದ್ಯಾನಿಲಯದ ಸಹಕಾರದೊಂದಿಗೆ ಜಿ. ಶಂಕರ್‌ ಆರೋಗ್ಯ ಸುರಕ್ಷಾ ಕಾರ್ಡ್‌ ನವೀಕರಣ ಮತ್ತು ಹೊಸ ಕಾರ್ಡುಗಳ ನೋಂದಣಿ ಡಿ. 5ರಂದು ಆರಂಭವಾಗಲಿದೆ. ಮಣಿಪಾಲ ಸಮೂಹ ಆಸ್ಪತ್ರೆಗಳಿಗೆ ಮಾತ್ರ ಈ ಯೋಜನೆ ಸೀಮಿತವಾಗಿದ್ದು ಕಡಿಮೆ ವರಮಾನವಿರುವ ಕುಟುಂಬಗಳಿಗೆ ಈ ಯೋಜನೆ ವರದಾನವಾಗಲಿದೆ.

Advertisement

ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ ಮಣಿಪಾಲ ಆಸ್ಪತ್ರೆಯ ಶೇ. 50, ಉಡುಪಿ ಟಿಎಂಎ ಪೈ ಆಸ್ಪತ್ರೆಯಲ್ಲಿ ಶೇ. 20, ಮಂಗಳೂರು ಅತ್ತವರ ಆಸ್ಪತ್ರೆಯಲ್ಲಿ ಶೇ. 50, ಮಂಗಳೂರು ಅಂಬೇಡ್ಕರ್‌ ಸರ್ಕಲ್‌ ಕೆಎಂಸಿ ಆಸ್ಪತ್ರೆಯಲ್ಲಿ ಶೇ. 25, ಕಾರ್ಕಳ ಡಾ| ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಶೇ. 20, ಕಟೀಲು ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯಲ್ಲಿ ಶೇ. 50 ರಿಯಾಯಿತಿ ಇರುತ್ತದೆ. ಆರೋಗ್ಯ ಸುರûಾ ಕಾರ್ಡಿನ ಸದಸ್ಯನು ಒಳರೋಗಿಯಾಗಿ ದಾಖಲಾದಲ್ಲಿ ಯಾವುದೇ ನಿರ್ಬಂಧವಿಲ್ಲದೆ ಶೇ. 35 ರಿಯಾಯಿತಿ ಪಡೆಯುವ ಸೌಲಭ್ಯ ಈ ಕಾರ್ಡಿನಲ್ಲಿರುತ್ತದೆ.

ನೋಂದಣಿಗೆ ಒಳಪಡುವ ಎಲ್ಲ ಸದಸ್ಯರ ಆಧಾರ್‌ ಕಾರ್ಡ್‌ ಪ್ರತಿಯೊಂದಿಗೆ ಡಿ. 5ರಿಂದ 25ರೊಳಗಾಗಿ ಮೊಗವೀರ ಯುವ ಸಂಘಟನೆಯ ಜಿಲ್ಲಾ ಕಚೇರಿ, ಮಾಧವ ಮಂಗಲ ಸಮುದಾಯ ಭವನ, ಶ್ಯಾಮಿಲಿ ಸಭಾಂಗಣದ ಎದುರು, ಅಂಬಲಪಾಡಿ, ಉಡುಪಿ ಅಥವಾ ಮೊಗವೀರ ಯುವ ಸಂಘಟನೆಯ ವಿವಿಧ ಘಟಕಗಳನ್ನು ಸಂಪರ್ಕಿಸಿ ಈ ಯೋಜನೆಯನ್ನು ನೋಂದಾಯಿಸಬಹುದಾಗಿದೆ.

ಒಂದು ಕುಟುಂಬ ಅಥವಾ ಕುಟುಂಬದ ಸದಸ್ಯರು ಯಾವುದೇ ಒಂದು ಘಟಕದಲ್ಲಿ ರಿಯಾಯಿತಿ ಸೌಲಭ್ಯ ಯೋಜನೆಯನ್ನು ನೋಂದಾಯಿಸಿ ಕೊಳ್ಳಬಹುದು. ಒಂದಕ್ಕಿಂತ ಹೆಚ್ಚು ಘಟಕಗಳಲ್ಲಿ ನೋಂದಾಯಿಸಿಕೊಂಡರೆ ಅಂತಹ ವ್ಯಕ್ತಿಯ ಅಥವಾ ಕುಟುಂಬದ ರಿಯಾಯಿತಿ ಸೌಲಭ್ಯ ಯೋಜನೆಯ ಸದಸ್ಯತ್ವವನ್ನು ರದ್ದು ಪಡಿಸಲಾಗುವುದು ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next