Advertisement
ಕೆಲ ದಿನಗಳ ಹಿಂದಷ್ಟೇ ರಷ್ಯಾದಲ್ಲಿ ನಡೆದಿದ್ದ ವಿಫಲ ದಂಗೆಯ ಬೆನ್ನಲ್ಲೇ ಈ ಮಾತುಕತೆ ನಡೆದದ್ದು ಮಹತ್ವ ಪಡೆದಿದೆ. ರಷ್ಯಾ-ಉಕ್ರೇನ್ ಕಾಳಗ, ಅದನ್ನು ಪರಿಹರಿಸಬೇಕಾದ ದಾರಿಯ ಬಗ್ಗೆ ಮಾತುಕತೆ ವೇಳೆ ಪ್ರಸ್ತಾಪವಾಗಿದೆ. ಬಿಕ್ಕಟ್ಟು ಪರಿಹಾರದ ಕುರಿತು ತೆಗೆದುಕೊಳ್ಳಬೇಕಾದ ರಾಜಕೀಯ ಮತ್ತು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳಲು ಉಕ್ರೇನ್ ಹಿಂದೇಟು ಕುರಿತು ಗಮನಸೆಳೆಯಲಾಯಿತು ಎಂದು ಹೇಳಿದೆ.ದಂಗೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೈಗೊಂಡಿದ್ದ ಕ್ರಮಗಳನ್ನು ಪುಟಿನ್, ಮೋದಿಗೆ ವಿವರಿಸಿದರು. ಶಾಂಘೈ ಸಹಕಾರ ಒಕ್ಕೂಟ(ಎಸ್‌ಸಿಒ) ಮತ್ತು ಜಿ20 ಒಕ್ಕೂಟದಲ್ಲಿ ಉಭಯ ದೇಶಗಳ ಸಹಕಾರ ಕುರಿತು ಚರ್ಚಿಸಲಾಯಿತು ಎಂದು ಕ್ರೆಮ್ಲಿನ್ ತಿಳಿಸಿದೆ.
ನಮ್ಮ ಅತ್ಯಂತ ಮುಖ್ಯ ಸ್ನೇಹಿತ ಪ್ರಧಾನಿ ಮೋದಿ ಮೇಕ್ ಇನ್ ಇಂಡಿಯಾ ಯೋಜನೆ ಆರಂಭಿಸಿದರು. ಇದು ನಿಜವಾಗಿಯೂ ಭಾರತದ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಪುಟಿನ್ ಶ್ಲಾ ಸಿದರು.