Advertisement

ನಿಗಮ – ಮಂಡಳಿಗಳ ನಿರ್ದೇಶಕ,ಸದಸ್ಯರ ಆಯ್ಕೆ ಮತ್ತಷ್ಟು ವಿಳಂಬ?

11:19 PM Sep 17, 2024 | Team Udayavani |

ಬೆಂಗಳೂರು: ರಾಜ್ಯದ ವಿವಿಧ ನಿಗಮ- ಮಂಡಳಿಗಳ ಸದಸ್ಯರು ಮತ್ತು ನಿರ್ದೇಶಕರ ಆಯ್ಕೆಯೂ ವಿಳಂಬವಾಗುವ ಸ್ಪಷ್ಟ ಲಕ್ಷಣಗಳಿದ್ದು, ಇದೇ ನಿಗಮ-ಮಂಡಳಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯ ಮುಂದುವರಿದ ಭಾಗವಾಗುತ್ತಿದೆ.

Advertisement

ಈ ಹಿಂದೆ ನಿಗಮ-ಮಂಡಳಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ವೇಳೆ ಪಕ್ಷದ ವಿವಿಧ ಹಂತಗಳಲ್ಲಿ ಮ್ಯಾರಥಾನ್‌ ಸಭೆಗಳು ನಡೆದವು. ವಿಳಂಬದ ಬಗ್ಗೆ ಟೀಕೆ- ಟಿಪ್ಪಣಿ ವ್ಯಕ್ತವಾದವು. ಹಲವು ತಿಂಗಳುಗಳ ಅನಂತರ ಅದಕ್ಕೆ ಮುಹೂರ್ತ ಕೂಡಿಬಂತು. ಈಗ ಸದಸ್ಯರು ಹಾಗೂ ನಿರ್ದೇಶಕರ ಆಯ್ಕೆ ವಿಚಾರದಲ್ಲೂ ಅದೇ ಸರ್ಕಸ್‌ ಪುನರಾವರ್ತನೆಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ.

ಈಚೆಗೆ ಸಮಿತಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ| ಜಿ. ಪರಮೇಶ್ವರ ನೇತೃತ್ವದಲ್ಲಿ ಎರಡನೇ ಸುತ್ತಿನ ಸಭೆ ನಡೆದಿತ್ತು. ಈ ವೇಳೆ ಸದಸ್ಯರಿಂದ ಆಕಾಂಕ್ಷಿಗಳ ಪಟ್ಟಿಯನ್ನು ಸಂಗ್ರಹಿಸಲಾಗಿತ್ತು. ಹೀಗೆ ಸಂಗ್ರಹಿಸಲಾದ ಪಟ್ಟಿಯಲ್ಲಿ ಸಂಸದರು ಮತ್ತು ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿಗಳು ಇನ್ನೂ ಪಟ್ಟಿಯನ್ನು ಸಮಿತಿಯ ಸದಸ್ಯರಿಗೆ ನೀಡಿಲ್ಲದಿರುವುದು ಗೊತ್ತಾಗಿದೆ. ವಿವಿಧ ನಿಗಮ-ಮಂಡಳಿ ಗಳ ಒಟ್ಟಾರೆ 1,100ಕ್ಕೂ ಅಧಿಕ ಸದಸ್ಯರು ಮತ್ತು ನಿರ್ದೇಶಕರನ್ನು ಈ ಸಮಿತಿಯು ಆಯ್ಕೆ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next