Advertisement

ಅಫ್ಘಾನ್‌ ಶಾಂತಿ, ಸುವ್ಯವಸ್ಥೆಗೆ ಭಾರತ ಮತ್ತಷ್ಟು ನೆರವು

07:30 AM Oct 25, 2017 | Team Udayavani |

ಹೊಸದಿಲ್ಲಿ: ಆಂತರಿಕ ಯುದ್ಧದಿಂದ ತತ್ತರಿಸಿರುವ ಅಫ್ಘಾನಿಸ್ತಾನದಲ್ಲಿ ಶಾಂತಿ, ಸ್ಥಿರತೆ, ಭದ್ರತೆಗಳನ್ನು ಸ್ಥಾಪಿಸುವ ಸಂಬಂಧ ಅಗತ್ಯ ನೆರವನ್ನು ನೀಡಲು ಭಾರತ ಒಪ್ಪಿದೆ. ಮಂಗಳವಾರ ತಮ್ಮನ್ನು ಭೇಟಿ ಮಾಡಿದ ಅಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರಿಗೆ ಪ್ರಧಾನಿ ಮೋದಿ ಈ ಭರವಸೆ ನೀಡಿದ್ದಾರೆ. 

Advertisement

ಇದರಲ್ಲಿ ಪ್ರಮುಖವಾಗಿ ಅಫ್ಘಾನಿಸ್ಥಾನದೊಳಗೆ ನುಸುಳುವ ಭಯೋತ್ಪಾದಕರಿಗೆ ಸ್ವರ್ಗ ಎನಿಸಿ ರುವ ಎಲ್ಲ ರಹದಾರಿಗಳಿಗೆ ತಡೆ ಹಾಕಲು ಬೇಕಾದ ಅಗತ್ಯ ನೆರವನ್ನು ನೀಡುವ ವಿಚಾರದಲ್ಲಿ ಭಾರತ ಒಪ್ಪಿಗೆ ಸೂಚಿಸಿದೆ. ಜತೆಗೆ, ಅಫ್ಘಾನಿಸ್ತಾನದ ಸಾವಿರಾರು ಸೈನಿಕರಿಗೆ ಭಾರತದಲ್ಲಿ ಮಿಲಿಟರಿ ತರಬೇತಿ ನೀಡಲು ಸಮ್ಮತಿಸಿದೆ. 

ಇನ್ನು, ಆರೋಗ್ಯ, ಕೃಷಿ, ಮೂಲಸೌಕರ್ಯ ಅಭಿವೃದ್ಧಿ, ಕೌಶಲಾಭಿವೃದ್ಧಿ, ಸಾಮರ್ಥ್ಯ ವರ್ಧನೆ ಮುಂತಾದ ಕ್ಷೇತ್ರಗಳಲ್ಲಿ ಅಫ್ಘಾನಿಸ್ತಾನಕ್ಕೆ ಭಾರತ ನೆರವಿನ ಹಸ್ತ ಚಾಚಲು ಸಮ್ಮತಿಸಿ¨ ಯಲ್ಲದೆ, ಆಫ್ಘಾನಿಸ್ತಾನದ ರೈತರ ಬೆಳೆಗಳು ಭಾರತೀಯ ಮಾರುಕಟ್ಟೆಗಳನ್ನು ನೇರವಾಗಿ ಪ್ರವೇಶಿಸಲು ಅನುಕೂಲವಾಗುವಂತೆ ವಿಮಾನ ಯಾನ ಸೌಕರ್ಯವನ್ನು ನೀಡುವ ಬಗ್ಗೆ ಹಾಗೂ ಭೂ ಮಾರ್ಗವಾಗಿ ಉಭಯ ದೇಶಗಳ ನಡುವೆ ಸಾಗಾಣಿಕೆಯಾಗುವ ಸರಕುಗಳ ತಪಾಸಣೆಗೆ ಎರಡೂ ದೇಶಗಳ ಗಡಿಗಳಲ್ಲಿ ಚೆಕ್‌ ಪೋಸ್ಟ್‌ ಸ್ಥಾಪಿಸಲು ನಿರ್ಧರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next