ಔರೈಯಾ : ಉತ್ತರಪ್ರದೇಶದಲ್ಲಿ ಮೂವರು ಯುವಕರು ಮಾಡಬಾರದ್ದನ್ನು ಮಾಡಿ ಬೈಕ್ ಸವಾರಿ ಮಾಡುತ್ತಿದ್ದಾಗ ಸಿಕ್ಕಿಬಿದ್ದು, ಜೈಲು ಸೇರಿದ್ದಾರೆ.
ಬೈಕ್ ನಂಬರ್ ಪ್ಲೇಟ್‌ನಲ್ಲಿ ನೋಂದಣಿ ಸಂಖ್ಯೆ ಇರಬೇಕಾದಲ್ಲಿ ”ಬೋಲ್ ದೇನಾ ಪಾಲ್ ಸಾಹೇಬ್ ಆಯೆ ಥೇ” (ಅವರಿಗೆ ಹೇಳಿ ಪಾಲ್ ಸಾಹೇಬ್ ಬಂದಿದ್ದಾರೆ ಎಂದು )” ಬರೆದು ಜೈಲು ಕಂಬಿ ಎಣಿಸಬೇಕಾಗಿದೆ.ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಈ ರೀತಿ ಬರಹ ಬರೆದ್ ಬೈಕ್ ಮತ್ತು ಬಂಧಿತ ಯುವಕರ ಫೋಟೋಗಳನ್ನು ಔರೈಯಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ವರ್ಮಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಹನಿಗವನದ ರೂಪದಲ್ಲೇ ಪ್ರಕಟಿಸಿದ್ದಾರೆ. ‘ಪಾಲ್’ ಸಾಹೇಬ್ ಅವರಿಗೆ ಯಾವ ಹಾಡನ್ನು ಅರ್ಪಿಸಲು ನೀವು ಬಯಸುತ್ತೀರಿ? ಎಂದು ಲಾಕಪ್ ನಲ್ಲಿ ಮೂವರು ಯುವಕರು ಕುಳಿತಿರುವ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಪ್ರಸಿದ್ಧ ಬಾಲಿವುಡ್ ಚಲನಚಿತ್ರಗಳ ಸಾಲುಗಳನ್ನು ಕಾರುಗಳು ಮತ್ತು ಟ್ರಕ್‌ಗಳ ಹಿಂಭಾಗದಲ್ಲಿ ಬರೆಯುವುದು ತುಂಬಾ ಸಾಮಾನ್ಯ. ಅದು ಮೋಜಿಗಾಗಿ ಬರೆಯಲಾಗುತ್ತದೆ, ಹಲವರ ಗಮನವನ್ನೂ ಸೆಳೆಯುತ್ತದೆ. ಆದಾಗ್ಯೂ, ನೋಂದಣಿ ಫಲಕದ ಮೇಲೆ ಯಾವುದೇ ಅನಗತ್ಯ ಬರಹ ಬರೆಯಲು ಕಾನೂನಿನಲ್ಲಿ ಅವಕಾಶವಿಲ್ಲ.