ಬೆಂಗಳೂರು: ನಗರದ ಗಾಂಧಿ ಬಜಾರ್ ನಲ್ಲಿರುವ ಟೆಂಪಲ್ ಆಫ್ ಸಕ್ಸಸ್ ಎಂಬ ಹೆಸರಿನ ಅಧ್ಯಾತ್ಮಿಕ ಸಂಸ್ಥೆಯ ಸಾಯಿದತ್ತ ರಘುನಾಥ್ ಗುರೂಜಿಯವರು ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇದನ್ನೂ ಓದಿ:ಸಚಿವ ಜೈಶಂಕರ್ ಭೇಟಿ; ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಮೊದಲ ಹಿಂದೂ ದೇವಾಲಯ
ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಗುರೂಜಿಯವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಅವರು ನಿಧನರಾಗಿರುವುದಾಗಿ ಮೂಲಗಳು ತಿಳಿಸಿವೆ. ರಘುನಾಥ್ ಗುರೂಜಿಯವರ ಅಂತ್ಯಕ್ರಿಯೆ ಸೆಪ್ಟೆಂಬರ್ 2ರಂದು ಮಣಿಪಾಲದಲ್ಲಿ ನಡೆಯಲಿದೆ ಎಂದು ವರದಿ ವಿವರಿಸಿದೆ.
ಬೆಂಗಳೂರಿನ ಬಸವನಗುಡಿ ವಾಣಿ ವಿಲಾಸ ರಸ್ತೆಯಲ್ಲಿರುವ ಟೆಂಪಲ್ ಆಫ್ ಸಕ್ಸಸ್ ಬಳಿ ಇಂದು (ಸೆ.01) ಗುರೂಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಭಕ್ತರಿಗೆ ಮತ್ತು ಅನುಯಾಯಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ಮುಗುತ್ತಿಯವರಾದ ಗುರೂಜಿ ಅಪಾರ ಶಿಷ್ಯರನ್ನು ಹೊಂದಿದ್ದಾರೆ. ತಾವು ಯುವಕರಾಗಿದ್ದ ವೇಳೆ ಕೆಲವು ಕಾಯಿಲೆಯಿಂದ ರಘುನಾಥ್ ಅವರು ಬಳಲುತ್ತಿದ್ದು, ಯಾವುದೇ ವೈದ್ಯರು, ಔಷಧದಿಂದ ಅದು ಗುಣವಾಗಿರಲಿಲ್ಲವಾಗಿತ್ತು. ನಂತರ ಗುರೂಜಿ ಅಮೃತ್ ಎನ್ನುವ ಚಿಕಿತ್ಸೆ ಮೂಲಕ ಖುದ್ದು ಪರಿಹಾರ ಕಂಡುಕೊಂಡಿದ್ದರು. ಈ ಮೂಲಕ ಅವರು ಹಳೆಯ ಚಿಕಿತ್ಸಾ ಪದ್ಧತಿಯನ್ನು ಪುನರುಜ್ಜೀವನಗೊಳಿಸಿ, ಅಮೃತ್ ಚಿಕಿತ್ಸೆ ನೀಡಲು ಆರಂಭಿಸಿದ್ದರು.
1999ರಲ್ಲಿ ಬೆಂಗಳೂರಿನಲ್ಲಿ ಟೆಂಪಲ್ ಆಫ್ ಸಕ್ಸಸ್ ಆರಂಭಿಸುವ ಮೂಲಕ ನಿರ್ಗತಿಕರಿಗೆ ನೆರವು ನೀಡುವ ಸಂಸ್ಥೆಯಾಗಿ ಬೆಳೆದಿತ್ತು.