ಮಂಗಳೂರು: ಕೋವಿಡ್-19 ವೈರಸ್ ಕಾರಣದಿಂದ ಗುರುವಾರ ಇಲ್ಲಿ ಮೃತಪಟ್ಟ ಮಹಿಳೆಯ ಅಂತ್ಯಕ್ರಿಯೆ ನಡೆಸಲು ಪೇಚಾಡಬೇಕಾದ ಪರಿಸ್ಥಿತಿ ನಡೆಯಿತು. ಮೃತ ಮಹಿಳೆಯ ಅಂತ್ಯಕ್ರಿಯೆ ನಡೆಸಲು ಜನರು ವಿರೋಧ ನಡೆಸದ್ದು, ನಂತರ ಬಿ ಸಿ ರೋಡ್ ನ ಕೈಕುಂಜೆಯಲ್ಲಿಅಂತ್ಯಕ್ರಿಯೆ ಮಾಡಲಾಯಿತು.
ಮೃತಮಹಿಳೆ ಕೋವಿಡ್ ಸೋಂಕಿತೆಯಾದ ಕಾರಣ ಸರಕಾರಿ ಮಾರ್ಗಸೂಚಿಗಳ ಅನುಗುಣವಾಗಿ ಅಂತ್ಯಕ್ರಿಯೆ ನಡೆಸಲು ರಾತ್ರಿಯ ವೇಳೆ ಮಂಗಳೂರಿನ ಪಚ್ಚನಾಡಿನ ಸ್ಮಶಾನಕ್ಕೆ ಕೊಂಡೊಯ್ಯಲಾಗಿತ್ತು. ಆದರೆ ಅಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಸೇರಿದ ಸ್ಥಳೀಯರು ಅಂತ್ಯಸಂಸ್ಕಾರಕ್ಕೆ ಅಡ್ಡಿ ಮಾಡಿದರು.
ಬೋಳೂರು, ನಂದಿಗುಡ್ಡೆ, ಬಳಿಕ ಮೂಡುಶೆಡ್ಡೆ ಸ್ಮಶಾನದಲ್ಲಿ ಶವ ಸುಡಲು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.
ವಿರೋಧದ ನಡುವೆಯೂ ಅಂತ್ಯಕ್ರಿಯೆ
ಮಂಗಳೂರಿನಲ್ಲಿ ಜನರ ವಿರೋಧ ಕಂಡುಬಂದ ಹಿನ್ನಲೆ ತಡರಾತ್ರಿ ಬಿ.ಸಿ.ರೋಡಿನ ಕೈಕುಂಜೆಯಲ್ಲಿ ಸಿದ್ದತೆ ಮಾಡಲಾಯಿತು. ಇಲ್ಲೂ ಸಾಕಷ್ಷಟು ಜನ ಸೇರಿ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ ಪೊಲೀಸರು ಬಿಗು ಬಂದೋಬಸ್ತ್ ಮಾಡಿ ಸ್ಥಳೀಯರ ವಿರೋಧದ ನಡುವೆಯೂ ಅಂತ್ಯಕ್ರಿಯೆ ಮಾಡಿದರು.
75 ವರ್ಷದ ಮಹಿಳೆ ಬಂಟ್ವಾಳದ ನಿವಾಸಿಯಾಗಿದ್ದು, ನಿನ್ನೆಯಷ್ಟೇ ಕೋವಿಡ್-19 ಸೋಂಕು ತಾಗಿರುವುದು ಖಚಿತವಾಗಿತ್ತು.