Advertisement

ಪಂಚಭೂತಗಳಲ್ಲಿ ಲೀನವಾದ ಸಿಂದಗಿ ಶಾಸಕ ಎಂ.ಸಿ.ಮನಗೂಳಿ

03:15 PM Jan 29, 2021 | Team Udayavani |

ವಿಜಯಪುರ: ಗುರುವಾರ ನಿಧನರಾಗಿದ್ದ ಮಾಜಿ ಸಚಿವ ಹಾಗೂ ಸಿಂದಗಿ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಶುಕ್ರವಾರ ನೆರವೇರಿತು.

Advertisement

ಸಿಂದಗಿ ಪಟ್ಟಣದಲ್ಲಿನ ತಮ್ಮದೇ ಅಧ್ಯಕ್ಷತೆಯಲ್ಲಿದ್ದ ಸಿ.ಎಂ. ಮನಗೂಳಿ  ಮಹಾವಿದ್ಯಾಲಯದ ಆವರಣದಲ್ಲಿ ಮನಗೂಳಿ ಮಠದ ಶ್ರೀಗಳ ನೇತೃತ್ವದಲ್ಲಿ ಲಿಂಗಾಯತ ಧಾರ್ಮಿಕ ಸಂಸ್ಕಾರದ ಮೂಲಕ ಅಂತ್ಯ ಸಂಸ್ಕಾರ ನೆರವೇರಿತು.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ..! ಪ್ರಯಾಣದ ವೇಳೆ ಕಳ್ಳತನವಾದಲ್ಲಿ ಪರಿಹಾರ

ಪಂಚಮಸಾಲಿ ಹರಿಹರ ಪೀಠದ ವಚನಾನಂದಶ್ರೀ, ಕಡಕೋಳ ಮಡಿವಾಳ ಶ್ರೀ, ಸಿದ್ಧಬಸವ ಕಬೀರಶ್ರೀ, ಬಂಥನಾಳ ಯರನಾಳದ ಸಂಗನಬಸವ ಶ್ರೀಗಳು, ಶ್ರೀಗಳು, ಸಿಂದಗಿ ಸಾರಂಗಶ್ರೀ, ಮನಗೂಳಿ ಶ್ರೀಗಳು, ಬಬಲೇಶ್ವರ ಡಾ.ಮಹಾದೇವ ಶ್ರೀಗಳು, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎಚ್.ಡಿ.ರೇವಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ‌ ಖಂಡ್ರೆ, ಎಚ್.ಕೆ.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಎ.ಎಸ್.ಪಾಟೀಲ ನಡಹಳ್ಳಿ, ಡಾ.ಅಜಯಸಿಂಗ್, ಪಾಟೀಲ, ಎಂ.ವೈ.ಪಾಟೀಲ, ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ಅಪ್ಪು ಪಟ್ಟಣಶಟ್ಟಿ ಡಾ.ಪಿ.ಎಂ. ನಾಡಗೌಡ, ರಮೇಶ ಭೂಸನೂರ, ಶರಣಪ್ಪ ಸುಣಗಾರ, ರಾಜು ಆಲಗೂರ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಇತರರು ಶಾಸಕ ಮನಗೂಳಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿ, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

Advertisement

ಸರ್ಕಾರದ ಪರವಾಗಿ ಪೊಲೀಸರು ಕುಶಾಲ ತೋಪು ಸಿಡಿಸಿ ಗೌರವ ಸಮರ್ಪಿಸಿದರು.

ಇದನ್ನೂ ಓದಿ:ಅಶ್ವಥ್ ನಾರಾಯಣ, ಮಾಧುಸ್ವಾಮಿ ಜವಾಬ್ದಾರಿ ಹುದ್ದೆ ನಿಭಾಯಿಸುವುದು ಸೂಕ್ತವಲ್ಲ: ಸದನ ಸಮಿತಿ

ದೇವೇಗೌಡರ ಸಮಕಾಲೀನರಾಗಿದ್ದ ಎಂ.ಸಿ. ಮನಗೂಳಿ ಅವರು ನಮ್ಮ ಕುಟುಂಬದ ಹಿರಿಯರ ಹಾಗಿದ್ದರು. ಅವರನ್ನು ಕಳೆದುಕೊಂಡ ನಾವು ಇದೀಗ ಅನಾಥ ಭಾವ ಅನುಭವಿಸುತ್ತಿದ್ದೇವೆ. ಸಜ್ಜನ ರಾಜಕೀಯ ನಾಯಕನನ್ನು ಕಳೆದುಕೊಂಡು ಜೆಡಿಎಸ್ ಪಕ್ಷ ಕೂಡ ಬಡವಾಗಿದೆ ಎಂದು‌ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶ್ರದ್ಧಾಂಜಲಿ ಸಭೆಯಲ್ಲಿ ಮನಗೂಳಿ ಅವರ ಗುಣಗಾನ ಮಾಡಿದರು.

ಸಾಮಾನ್ಯ ಕೃಷಿ ಕುಟುಂಬದಿಂದ ರಾಜಕೀಯಕ್ಕೆ ಬಂದ ಅವರು ಗಳಿಸಿದ ಆಸ್ತಿ ಏನು ಎಂಬುದು ನಿನ್ನೆಯಿಂದ ಅವರ ದರ್ಶನಕ್ಕೆ ಬರುತ್ತಿರುವ ಜನಸ್ತೋಮವೇ ಸಾಕ್ಷಿ. ಕಳೆದ ಚುನಾವಣೆಯಲ್ಲಿ ಪುತ್ರರನ್ನು ಸ್ಪರ್ಧೆಗೆ ಇಳಿಸುವ ಅವರ ಇಚ್ಛೆ ಹೊಂದಿದ್ದರೂ ನಾನೇ ಅವರಿಗೆ ಟಿಕೆಟ್ ನೀಡಿದ್ದೆ. ಕ್ಷೇತ್ರದ ಜನ ಆಶೀರ್ವದಿಸಿದ ಕಾರಣಕ್ಕೆ ಅವರು ಮಂತ್ರಿಯಾದರು. ಅಲಮೇಲ ತಾಲೂಕ ಕೇಂದ್ರವನ್ನಾಗಿ ಮಾಡಿಸಿದರು. ತೋಟಗಾರಿಕೆ ಕಾಲೇಜು ಸ್ಥಾಪನೆ ಕನಸು ಕಂಡಿದ್ದರು. ಅವರ ಪ್ರಾಮಾಣಿಕತೆ, ನಿಷ್ಠೆ, ಅಧಿಕಾರಕ್ಕಾಗಿ ಪಕ್ಷ ದ್ರೋಹದ ಬಗೆಯದೇ ರಾಜಕೀಯ ಬದ್ಧತೆ ತೋರಿದರು. ಅವರ ಆಶಯ ಈಡೇರಿಸುವ ಹೊಣೆ ಅವರ ಮಕ್ಕಳ ಮೇಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next