Advertisement

ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ

02:09 PM Jan 16, 2021 | Team Udayavani |

ಹುಣಸೂರು: ರಾಮ ಜನ್ಮಭೂಮಿ ಅಯೋಧ್ಯೆಯಲ್ಲ ರಾಮಮಂದಿರ ನಿರ್ಮಾಣ ನಿಧಿಗೆ ಶಾಸಕ ಎಚ್‌.ಪಿ. ಮಂಜುನಾಥ್‌ ಒಂದು ಲಕ್ಷ ರೂ. ಚೆಕ್‌ ನೀಡುವ ಮೂಲಕ ಮಾದಳ್ಳಿ ಮಠದ ಸಾಂಬಸದಾಶಿವ ಸ್ವಾಮೀ ಜಿಯವರೊಡಗೂಡಿ ಹಣ ಸಂಗ್ರಹಣೆಗೆ ಚಾಲನೆ ನೀಡಿದರು.

Advertisement

ಶುಕ್ರವಾರ ಹುಣಸೂರಿನ ಜೆಎಲ್‌ಬಿರಸ್ತೆಯ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ ನಂತರ ಚೆಕ್‌ ಹಸ್ತಾಂತರಿಸಿದ ಶಾಸಕ ಮಂಜುನಾಥ್‌ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಪಂ ಚವೇ ಕಂಡ ಕನಸು. ಪ್ರತಿಯೊಬ್ಬ ಭಾರತೀಯನ ಅಸ್ಮಿ ತೆಯು ಹೌದು. ಮಂದಿರ ನಿರ್ಮಾಣದ ಮೂಲಕ ವಾದರೂ ಗಾಂಧೀಜಿಯವರ ರಾಮರಾಜ್ಯದ ಕನಸು ಈಡೇರಲಿ ಎಂದು ಆಶಿಸಿದರು.

ಮಾದಳ್ಳಿಮಠದ ಸಾಂಬಸದಾಶಿವಸ್ವಾಮೀಜಿ ಆಶೀರ್ವಚನ ನೀಡಿ, ಆದರ್ಶ ಪುರುಷ ರಾಮನ ಮಂದಿರ ನಿರ್ಮಾಣವೆಂಬುದು ಪ್ರತಿಯೊಬ್ಬ ಹಿಂದುವಿನ ಸದಾಶಯವಾಗಿದೆ. ಭವ್ಯ ರಾಮಮಂದಿರದ ನಿರ್ಮಾಣಕ್ಕೆ   ಎಲ್ಲರೂ ತನು, ಮನ, ಧನ ನೀಡುವ ಮೂಲಕ ಸಾರ್ಥಕಗೊಳಿಸಿರೆಂದು ಮನವಿ ಮಾಡಿದರು. ಇದೇ ವೇಳೆ ನಂದಿನಿ ಸಿಲ್ಕ್ ಮಾಲೀಕ ದಿನೇಶ್‌ 10 ಸಾವಿರ ರೂ. ಚೆಕ್‌ ನೀಡಿದರು. ಸಂಘಚಾಲಕ ಮÖ  ದೇವ್‌ಬಾಗಲ್‌, ಅಭಿಯಾನ ಪ್ರಮುಖ್‌ ಸಚಿನ್‌, ಸಹಪ್ರಭಾರಿ ಸೂರಜ್‌, ಶ್ರೀರಾಮಸೇನೆಯ ಅನಿಲ್‌, ಗಿರೀಶ್‌, ಯೋಗಾನಂದಕುಮಾರ್‌, ವಿ.ಎನ್‌.ದಾಸ್‌, ಆನಂದ್‌, ಗಣೇಶ್‌, ನಗರಸಭಾ ಸದಸ್ಯರಾದ ಸ್ವಾಮಿಗೌಡ, ಕೃಷ್ಣರಾಜಗುಪ್ತ, ಮನು ಇತರರಿದ್ದರು.

ಇದನ್ನೂ ಓದಿ:ನೂತನ ಕೃಷಿ ನೀತಿಗಳಿಗೆ ಐಎಂಎಫ್ ಮೆಚ್ಚುಗೆ

ಪಾಂಡುರಂಗ ದೇವಾಲಯದಲ್ಲಿ ಗಾವಡಗೆರೆ ಮಠದ ನಟರಾಜಸ್ವಾಮೀಜಿ ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳಸೋಮಶೇಖರ್‌ ಹಾಗೂ ಪ್ರಭಾರಿ ಅಶ್ವತ್‌ ನಾರಾಯಣ್‌ ನೇತೃತ್ವದಲ್ಲಿ ಪ್ರತ್ಯೇಕವಾಗಿ ನಡೆದ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರು, ನಗರ ಬಿಜೆಪಿ ಅಧ್ಯಕ್ಷ ಹಾಗೂ ಅಭಿಯಾನದ ಸಹ ಪ್ರಮುಖ್‌ ಗಣೇಶ್‌ಕುಮಾರಸ್ವಾಮಿ ನಿಧಿಗೆ 20 ಸಾವಿರ ರೂ. ಚೆಕ್‌ ಹಸ್ತಾಂತರಿಸಿದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ಫೆ.5ರವರೆಗೆ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ಬದಿ ಗಿಟ್ಟು ಪ್ರತಿಯೊಬ್ಬ ಕಾರ್ಯಕರ್ತರು ಪ್ರತಿ ಗ್ರಾಮಗಳಲ್ಲಿ ನಿಧಿ ಸಂಗ್ರಹಣೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆಂದು ಪ್ರಕಟಿಸಿದರು. ಈ ವೇಳೆ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ನಾಗಣ್ಣ ಗೌಡ, ಮಹಿಳಾ ಅಧ್ಯಕ್ಷೆ ಸವಿತಾ ಚೌಹಾನ್‌, ಮುಖಂಡ ರಾದ ಮಹೇಶ್‌,ಮುದ್ದುರಾಮ್‌, ಸೂರೇ ಗೌಡ, ಮೀನಾಕ್ಷಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next