Advertisement
ವಾಹನ ಓಡಾಟ ಕಷ್ಟಈ ರಸ್ತೆಯಲ್ಲಿ ಅಲ್ಲಲ್ಲಿ ಜಲ್ಲಿ ಟಾರುಗಳು ಕಿತ್ತು ಹೋಗಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣಗೊಂಡಿದ್ದು ವಾಹನ ಓಡಾಟ ನಡೆಸುವುದೇ ಕಷ್ಟ ಸಾಧ್ಯವಾಗಿದೆ.ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ಈ ಭಾಗದ ಜನ ಕಾಲ್ನಡಿಗೆಯಲ್ಲಿ ಸಂಚಾರ ನಡೆಸುತ್ತಿದ್ದಾರಾದರೂ ಅದೂ ಸಂಕಟವೆನಿಸಿದೆ.
ಈ ರಸ್ತೆಗೆ ಡಾಮರೀಕರಣಗೊಂಡು ಹಲವು ವರ್ಷಗಳು ಕಳೆದಿದ್ದು ಆ ಬಳಿಕ ಮತ್ತೆ ತೇಪೆ ಹಾಕುವ ಕಾಮಗಾರಿ ಈವರೆಗೂ ನಡೆದಿಲ್ಲ.ರಸ್ತೆಯುದ್ದಕ್ಕೂ ಭಾರೀ ಗಾತ್ರದ ಹೊಂಡಗಳಿದ್ದು ಆ ಗುಂಡಿಗಳಲ್ಲಿ ವಾಹನ ಚಲಾಯಿಸಬೇಕಾಗಿದೆ.ರಸ್ತೆಗೆ ಹಾಕಲಾದ ಜಲ್ಲಿ ಟಾರು ಎಲ್ಲವೂ ಎದ್ದು ಹೋಗಿದ್ದು ಬರೀ ಮಣ್ಣು ಹಾಗೂ ಕೆಸರು ತುಂಬಿ ಹೋಗಿದೆ. ಪೇಟೆಗೆ ಹತ್ತಿರದ ಮಾರ್ಗ
ಬೋಳ ಪರಿಸರದ ಗ್ರಾಮಸ್ಥರು ಈ ಪಂಚಾಯತ್ ರಸ್ತೆಯ ಮೂಲಕ ಹಾದು ಹೋಗಿ ಸಚ್ಚೇರಿಪೇಟೆಯನ್ನು ತಲುಪಲು ಇದು ಹತ್ತಿರದ ಮಾರ್ಗವಾದ ಕಾರಣ ಹೆಚ್ಚಿನ ಗ್ರಾಮಸ್ಥರು ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಈ ರಸ್ತೆಯ ದುರವಸ್ಥೆಯ ಪರಿಣಾಮವಾಗಿ ಗ್ರಾಮಸ್ಥರು ಸುಮಾರು 7-8 ಕಿ.ಮೀ ಕಾಲು ನಡಿಗೆಯಲ್ಲೇ ಸಂಚಾರ ನಡೆಸುವಂತಾಗಿದೆ.ಆದರೆ ನಡೆದಾಡಲೂ ಆಗದೆ ಪರದಾಡಬೇಕಾಗಿದೆ.
Related Articles
ಈ ರಸ್ತೆಯಲ್ಲಿ ಬಸ್ಸು ಸೌಕರ್ಯವಿಲ್ಲದ ಪರಿಣಾಮ ಈ ಭಾಗದ ರಸ್ತೆಯಲ್ಲಿ ಸಾಗುವ ಮಂದಿ ಹೆಚ್ಚಾಗಿ ಬಾಡಿಗೆ ವಾಹನಗಳನ್ನು ಅವಲಂಬಿಸಿದ್ದು ರಿಕ್ಷಾವಾಲಾರಿಗೆ ಬಹು ಬೇಡಿಕೆ.ರಸ್ತೆ ಹದಗೆಟ್ಟ ಪರಿಣಾಮ ಯಾವುದೇ ಬಾಡಿಗೆ ವಾಹನಗಳು ರಿಕ್ಷಾಗಳು ಬೇಕಾದರೆ ಕಾಡಿ ಬೇಡಿ ಕರೆತರಬೇಕಾದ ಸ್ಥಿತಿಯೊದಗಿದೆ ಎಂಬುದುಗ್ರಾಮಸ್ಥರ ಅಳಲು.
Advertisement
ದ್ವಿಚಕ್ರಗಳ ಸರ್ಕಸ್ಗ್ರಾಮಸ್ಥರು ಈ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಬಳಸಿಕೊಳ್ಳುತ್ತಿದ್ದುನ ಕೆಟ್ಟ ರಸ್ತೆಯ ಪರಿಣಾಮ ಇಲ್ಲಿ ಅಪಘಾತ ನಿರಂತರವಾಗಿದೆ.ಬೃಹತ್ ಗಾತ್ರದ ಹೊಂಡದಲ್ಲಿ ಎದ್ದು ಬಿದ್ದು ಏಳುವ ಸನ್ನಿವೇಶ ಇಲ್ಲಿ ಮಾಮೂಲು.ಡಾಮಾರು ಕಳೆದುಕೊಂಡ ರಸ್ತೆಯ ಜಲ್ಲಿಯ ಹೊಡೆತಕ್ಕೆ ಟಯರ್‌ಗಳು ಹೊಡೆದ ನಿದರ್ಶನಗಳೂ ಇವೆ.ಪಡೆದ ಬಾಡಿಗೆಗಿಂತ ಹೆಚ್ಚಿನ ವೆಚ್ಚವನ್ನು ಗ್ಯಾರೇಜ್ ಗಳಿಗೆ ಹಾಕುವಂತಾಗಿದೆ ಎಂದು ವಾಹನ ಚಾಲಕರ ಅಳಲು. ಇಲಾಖೆ ಸ್ಪಂದಿಸಬೇಕಾಗಿದೆ
ಈ ರಸ್ತೆಯ ದುರವಸ್ಥೆಯ ಬಗ್ಗೆ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಹಾಗೂ ಇತರೆಡೆಗಳಲ್ಲಿ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದು ದುರಸ್ಥಿಯ ಪ್ರಯತ್ನ ನಡೆಯುತ್ತಿದೆಯೆಂಬ ಉತ್ತರ ಕೇಳಿ ಬರುತ್ತಿದೆ.ಕೂಡಲೇ ಅ ಕಾರಿಗಳು ಜನಪ್ರತಿನಿ ಗಳು ಈ ರಸ್ತೆಯ ಕುರಿತು ಕ್ರಮ ಕೈಗೊಂಡು ಸಂಪೂರ್ಣ ಡಾಮರೀಕರಣ ಇಲ್ಲವೇ ರಸ್ತೆಯ ಹೊಂಡವನ್ನು ಮುಚ್ಚುವ ಕಾರ್ಯಕ್ಕೆ ಮನಮಾಡಬೇಕಾಗಿದೆ.ಅಪಘಾತಗಳಿಗೆ ಎಡೆ ಮಾಡಿಕೊಡುವ ಈ ರಸ್ತೆ ಶೀಘ್ರ ದುರಸ್ಥಿಯನ್ನು ಕಾಣಬೇಕಾಗಿದೆ.