Advertisement
ಈ ಹಿಂದೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಅಗತ್ಯ ಸಾಮಗ್ರಿ ಹೊರತುಪಡಿಸಿ ಇತರೆ ಎಲ್ಲ ಪ್ರಕಾರದ ಲಗೇಜುಗಳಿಗೂ ದರ ವಿಧಿಸಲಾಗುತ್ತಿತ್ತು. ಸದ್ಯ ಲಗೇಜು ಸಾಗಣೆ ನಿಯಮ ಪರಿಷ್ಕರಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ಪ್ರಯಾಣಿಕರೊಬ್ಬರು 30 ಕೆಜಿವರೆಗಿನ ಲಗೇಜನ್ನು ಉಚಿತವಾಗಿ ಕೊಂಡೊಯ್ಯಬಹುದು.
Related Articles
Advertisement
ಇನ್ನು ಪ್ರಯಾಣಿಕರು ತಮ್ಮ ಜತೆ ನಾಯಿಯನ್ನು ಕೊಂಡೊಯ್ಯುವಾಗ ಒಬ್ಬ ವಯಸ್ಕನಂತೆ ಪರಿಗಣಿಸಿ, ಪೂರ್ಣಪ್ರಮಾಣದ ಟಿಕೆಟ್, ನಾಯಿ ಮರಿ ಇದ್ದರೆ ಅರ್ಧ ಟಿಕೆಟ್ ದರ ಪಡೆಯಬೇಕು. ಸಾಮಾನ್ಯ, ವೇಗದೂತ, ನಗರ, ಹೊರವಲಯ ಬಸ್‌ಗಳಲ್ಲಿ ಮಾತ್ರ ಸಾಗಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಈ ಮೊದಲು ಕೂಡ ನಾಯಿಗಳನ್ನು ಕೊಂಡೊಯ್ಯಲು ಅವಕಾಶ ಇತ್ತು.