Advertisement

ಸರ್ಕಾರಕ್ಕೆ ಬೆಳೆ ಹಾನಿ ಸಂಪೂರ್ಣ ವರದಿ

02:34 PM Oct 18, 2020 | Suhan S |

ತೆಲಸಂಗ: ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿದ ಗಾಳಿ-ಮಳೆಯಿಂದಾದ ಬೆಳೆ ಹಾನಿಯ ಕುರಿತು ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಅಥಣಿ ತಾಲೂಕು  ಸಹಾಯಕ ಕೃಷಿ ನಿರ್ದೇಶಕಿ ಜಯಶ್ರೀ ಹಿರೇಮಠ ಹೇಳಿದರು.

Advertisement

ತಾಲೂಕಿನ ವಿವಿಧ ಗ್ರಾಮಕ್ಕೆ ತೆರಳಿ ಬೆಳೆ ಹಾನಿ ಪ್ರದೇಶ ವೀಕ್ಷಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬೆನ್ನು ಬಿಡದೆ ಸುರಿದ ಮಳೆಗೆ ಕಬ್ಬು ನೆಲಕ್ಕುರುಳಿದ ಬಗ್ಗೆ ರೈತರ ದೂರಿನನ್ವಯ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಲ್ಲದೆ ಒಣ ಬೇಸಾಯವನ್ನೇ ಆಧಾರವಾಗಿಟ್ಟು ಜೀವನ ನಡೆಸುತ್ತಿದ್ದ ತೊಗರಿ ಬೆಳೆಗಾರರಿಗೆ ನಷ್ಟವಾಗಿದ್ದು ಕಂಡುಬರುತ್ತಿದೆ. ನೀರು ನಿಂತು ನೆಲದಲ್ಲಿನ ತೊಗರಿ ಸಂಪೂರ್ಣ ಹಾನಿಗೊಳಗಾಗಿದೆ. ಇದೆಲ್ಲದರಸಂಪೂರ್ಣ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ತೆಲಸಂಗ ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ಮಾತನಾಡಿ, ತೆಲಸಂಗ ಹೋಬಳಿಯಲ್ಲಿ ತೊಗರಿ ಬೆಳೆಗಾರರ ಸಂಖ್ಯೆ ಹೆಚ್ಚು ಇದೆ. ಸದ್ಯ ವಿಪರೀತ ಮಳೆಯಿಂದ ನೀರು ನಿಂತಿದ್ದರ ಪರಿಣಾಮತೊಗರಿಗೆ ಹಾನಿಯಾಗಿದ್ದು ಕಂಡುಬರುತ್ತಿದೆ. ರೈತರು ಆತಂಕ ಪಡಬೇಕಿಲ್ಲ. ಬೆಳೆ ಹಾನಿ ಬಗ್ಗೆ ಕೃಷಿ ಇಲಾಖೆಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಇದರ ನಿಮಿತ್ತವೇ ಪ್ರತ್ಯಕ್ಷವಾಗಿ ಬೆಳೆಗಳನ್ನು ವೀಕ್ಷಣೆ ಮಾಡುತ್ತಿದ್ದೇವೆ. ಮುಂದೆ ಸರ್ಕಾರದ ಸೂಚನೆಯಂತೆ ನಡೆದುಕೊಳ್ಳುತ್ತೇವೆ ಎಂದರು. ಗ್ರಾಮ ಲೆಕ್ಕಾಧಿಕಾರಿ ಬಿ.ಜಿ. ಇರಕಾರ, ಕೃಷಿ ಸಹಾಯಕರಾದ ಕೆ.ಡಿ. ಹುಣಸಿಕಟ್ಟಿ, ಪಿ.ಎಂ. ವಾಲಿ, ಕಾಮಗೊಂಡ ಇನ್ನಿತರರಿದ್ದರು.

ರೈತರ ಹಿತ ಕಾಪಾಡುವುದು ನಮ್ಮ ಕರ್ತವ್ಯ. ಸರ್ಕಾರ ರೈತರಿಗಾಗಿಸೂಚಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಲ್ಲದೆ, ಅತಿಯಾದಮಳೆಯಿಂದಾಗಿ ರೈತರಿಗಾದ ನಷ್ಟದ ಸತ್ಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. – ಜಯಶ್ರೀ ಹಿರೇಮಠ, ಸಹಾಯಕ ಕೃಷಿ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next