Advertisement
ನಗರದಲ್ಲಿ ಈಗಾಗಲೇ 2,500ಕ್ಕೂ ಹೆಚ್ಚಿನ ಎಲ್‌ಇಡಿ ಬೀದಿದೀಪ ಅಳವಡಿಕೆ ಕೆಲಸ ಪೂರ್ಣಗೊಂಡಿದೆ. ಸದ್ಯ ತಣ್ಣೀರುಬಾವಿ ಸುತ್ತಮುತ್ತ ಎಲ್‌ಇಡಿ ಬೀದಿ ದೀಪ ಅಳವಡಿಕೆ ಕಾರ್ಯ ನಡೆಯುತ್ತಿದೆ. ಮಂಗಳೂರಿನ ಬೀಚ್ ಪ್ರದೇಶದಲ್ಲಿರುವ ಬೀದಿ ದೀಪಗಳು ನಿರ್ವಹಣೆ ಸರಿಯಿಲ್ಲ ಎಂಬ ದೂರುಗಳು ಬರುತ್ತಿದ್ದವು. ಸಮುದ್ರದ ಉಪ್ಪಿನಾಂಶದಿಂದಾಗಿ ಬೀದಿ ದೀಪಗಳಲ್ಲಿ ತುಕ್ಕು ಹಿಡಿದು ಆಗಾಗ್ಗೆ ಸಮಸ್ಯೆ ಉಂಟಾಗುತ್ತಿತ್ತು. ಈ ನಿಟ್ಟಿನಲ್ಲಿ ಬೀಚ್ ಪ್ರದೇಶದಲ್ಲಿ ಎಲ್‌ಇಡಿ ಅಳವಡಿಸುವ ಕೆಲಸಕ್ಕೆ ಮೊದಲು ಆದ್ಯತೆ ನೀಡಲಾಗಿದೆ. ಅದೇ ರೀತಿ ಇತರ ವಾರ್ಡ್‌ಗಳಲ್ಲಿಯೂ ಕಾಮಗಾರಿ ಸಾಗುತ್ತಿದೆ.
ಸ್ಮಾರ್ಟ್‌ಸಿಟಿ ವತಿಯಿಂದ ಮಂಗಳೂರು ನಗರದಲ್ಲಿ ಎಲ್ಲ ವಾರ್ಡ್ ಗಳಲ್ಲಿ ಸೇರಿ ಒಟ್ಟು 67,000 ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಕಳೆದ ಮಾರ್ಚ್‌ನಿಂದ ಆರಂಭಗೊಂಡ ಕಂಬಗಳ ಸಮೀಕ್ಷೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಹೊಸದಾಗಿ ಅಳವಡಿಸಲಾಗುವ ಎಲ್‌ಇಡಿ ಬಲ್ಬ್ ಗಳನ್ನು ನಗರದ ರಸ್ತೆಗಳಿಗೆ ಅನುಗುಣವಾಗಿ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ನಗರದ ಜನನಿಬಿಡ ರಸ್ತೆ, ಒಳರಸ್ತೆ, ಸದಾ ವಾಹನ ಸಂಚಾರದ ರಸ್ತೆ ಹೀಗೆ ವಿವಿಧ ಪ್ರಾಕಾರಗಳಲ್ಲಿ ವಿಂಗಡಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ವೈಜ್ಞಾನಿಕ ರೀತಿಯಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಬಲ್ಬ್ ಗಳನ್ನು ಅಳವಡಿಸಲಾಗುತ್ತದೆ. ಈ ವರ್ಷಾಂತ್ಯಕ್ಕೆ ಎಲ್‌ಇಡಿ ಬೀದಿ ದೀಪ ಅಳವಡಿಕೆ ಪೂರ್ಣಗೊಳಿಸುವ ಇರಾದೆ ಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 7 ವರ್ಷಗಳ ಕಾಲ ಬೀದಿ ದೀಪಗಳ ನಿರ್ವಹಣೆಯ ಈಗಾಗಲೇ ಟೆಂಡರ್ ವಹಿಸಿಕೊಂಡಿರುವ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಇದನ್ನೂ ಓದಿ:ದಲಿತ ಬಾಲಕ ದೇವಸ್ಥಾನ ಪ್ರವೇಶ ಪ್ರಕರಣ |ಅಸ್ಪೃಶ್ಯತೆ ಮುಕ್ತ ಗ್ರಾಮಕ್ಕಾಗಿ ಜನತೆ ಪ್ರತಿಜ್ಞೆ
Related Articles
ಮಂಗಳೂರಿನ ಎಲ್‌ಇಡಿ ಬೀದಿ ದೀಪಗಳುಳ್ಳ ವಿದ್ಯುತ್ ಕಂಬಗಳಿಗೆ ಮುಂದಿನ ದಿನಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲು ಚಿಂತನೆ ನಡೆಯುತ್ತಿದೆ. ಈ ರೀತಿ ಸ್ಮಾರ್ಟ್ ಮೀಟರ್ ಅಳವಡಿಸಿದರೆ ಎಲ್‌ಇಡಿ ಬಲ್ಬ್ಗಳ ಮೇಲ್ವಿಚಾರಣೆ ನಡೆಸಲು ಸುಲಭವಾಗುತ್ತದೆ. ಮೀಟರ್ ರೀಡಿಂಗ್, ಯಾವ ಪ್ರದೇಶದಲ್ಲಿ ಲೈಟ್ ಉರಿಯುತ್ತಿಲ್ಲ, ಯಾವ ಕಂಬದಲ್ಲಿ ಬಲ್ಬ್ ಸರಿಯಿಲ್ಲ ಎಂಬಿತ್ಯಾದಿ ಮಾಹಿತಿಯನ್ನು ಜಿಪಿಎಸ್ ಆಧಾರಿತವಾಗಿ ಮೊಬೈಲ್‌ನಲ್ಲಿಯೇ ಪಡೆಯಲು ಸಾಧ್ಯವಾಗುತ್ತದೆ. ಸ್ಮಾರ್ಟ್ ಮೀಟರ್ ಅಳವಡಿಸುವ ಕುರಿತು ಸ್ಮಾರ್ಟ್‌ಸಿಟಿ, ಸ್ಥಳೀಯಾಡಳಿತದಿಂದ ಮೆಸ್ಕಾಂನ ಅನುಮತಿ ಪಡೆಯುವ ಕೆಲಸ ನಡೆಯುತ್ತಿದೆ.
Advertisement
ಮತ್ತಷ್ಟು ವೇಗನಗರದಲ್ಲಿ ಈಗಾಗಲೇ ಅಳವಡಿಸಿದ ಬೀದಿ ದೀಪಗಳನ್ನು ಎಲ್‌ಇಡಿ ಬೀದಿದೀಪಗಳಾಗಿ ಬದಲಾಯಿಸುವ ಕೆಲಸ ಸ್ಮಾರ್ಟ್‌ಸಿಟಿ ವತಿಯಿಂದ ನಡೆಯುತ್ತಿದೆ. ಈಗಾಗಲೇ ನಗರದಲ್ಲಿ 2,500 ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟ ವೇಗ ನೀಡಲಾಗುತ್ತದೆ. ಎಲ್‌ಇಡಿ ಬೀದಿ ದೀಪ ಅಳವಡಿಕೆಯಿಂದ ವಿದ್ಯುತ್ ದರದ ಹೊರೆ ಕಡಿಮೆಯಾಗಲಿದೆ.
-ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್