Advertisement

ಸ್ಮಾರ್ಟ್‌ ಅಂಡರ್‌ ಪಾಸ್: ಒಂದು ಭಾಗದ ರಸ್ತೆ ಕಾಮಗಾರಿ ಪೂರ್ಣ

11:18 PM May 21, 2020 | Sriram |

ಮಂಗಳೂರು: ನಗರದ ಪುರಭವನ ಮುಂಭಾಗ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಪಾದ ಚಾರಿಗಳ ಅಂಡರ್‌ ಪಾಸ್‌ ನಿರ್ಮಾಣದ ಒಂದು ಭಾಗದ ಕಾಮಗಾರಿ ಪೂರ್ಣ ಗೊಂಡು, ಇನ್ನೊಂದು ರಸ್ತೆಯ ಕೆಳಭಾಗದಲ್ಲಿ ಕಾಮಗಾರಿ ಬುಧ ವಾರ ದಿಂದ ಆರಂಭಗೊಂಡಿದೆ.

Advertisement

ಕ್ಲಾಕ್‌ಟವರ್‌- ಎ.ಬಿ.ಶೆಟ್ಟಿ ಸರ್ಕಲ್‌ ನಡುವಿನ ಎರಡೂ ರಸ್ತೆಗಳ ಅಡಿಯಲ್ಲಿ ಈ ಅಂಡರ್‌ಪಾಸ್‌ ಹಾದು ಹೋಗಲಿದ್ದು, ಮೊದಲ ಹಂತದಲ್ಲಿ ಒಂದು ರಸ್ತೆಯ ಅಡಿಭಾಗದಲ್ಲಿ ಕಾಮಗಾರಿ ಪೂರ್ಣಗೊಂಡು, ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗ ರಸ್ತೆಯಲ್ಲಿ ಕಾಮಗಾರಿ ಈಗ ಆರಂಭವಾಗಿದೆ. ಸದ್ಯ ಈ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ, ಇನ್ನೊಂದು ಭಾಗದ ರಸ್ತೆ ಮುಚ್ಚಲಾಗಿದೆ.

ಅಂಡರ್‌ಪಾಸ್‌ ರಸ್ತೆಯ ಎರಡೂ ಬದಿ ಸಹಿತ ಒಟ್ಟು 35 ಮೀ. ಉದ್ದ, 11.5 ಮೀ. ಅಗಲವಿರುತ್ತದೆ. ಪಾದಚಾರಿಗಳು ಸಾಗಲು ಒಳಭಾಗದಲ್ಲಿ 10 ಮೀ. ಅಗಲದ ಸ್ಥಳ ಲಭ್ಯವಾಗಲಿದೆ.

ಇದು ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಭಾಗದ ರಸ್ತೆಯಿರುವ ಮಿನಿ ವಿಧಾನಸೌಧ ಮುಂಭಾಗದಿಂದ ಪುರಭವನ ಎಡಭಾಗದ ರಸ್ತೆಯ ಅಂಚಿನಲ್ಲಿರುವ ಹಳೆಯ ತಾಜ್‌ಮಹಲ್‌ ಹೊಟೇಲ್‌ ಮುಂಭಾಗದವರೆಗೆ ಇರುತ್ತದೆ. ಇದು ಒಟ್ಟು 6 ಕೋ.ರೂ.ವೆಚ್ಚದ ಕಾಮಗಾರಿ.

ಮಳೆಗಾಲಕ್ಕೆ ಕಿರಿಕಿರಿ
ಅಂಡರ್‌ಪಾಸ್‌ನ ಇನ್ನೊಂದು ಭಾಗದಲ್ಲಿ ಕಾಮಗಾರಿ ಆರಂಭಗೊಂಡಿದ್ದ ರಿಂದಾಗಿ ಮಿನಿ ವಿಧಾನಸೌಧದ ಮುಂ ಭಾಗದಲ್ಲಿ ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆಯಿದೆ.

Advertisement

ರಸ್ತೆಗಳ ಅಡಿಯಲ್ಲಿ ಅಂಡರ್‌ಪಾಸ್‌ ಕಾಮಗಾರಿ ಮುಗಿದ ಬಳಿಕ ಪುರಭವನ ಮುಂಭಾಗದ ಗಾಂಧೀ ಪಾರ್ಕ್‌ನಲ್ಲಿ ಕಾಮಗಾರಿ ಆರಂಭವಾಗಲಿದೆ. ಪಾರ್ಕ್‌ ಅಭಿವೃದ್ಧಿಗೂ ಉದ್ದೇಶಿಸಲಾಗಿದೆ.

2ನೇ ಹಂತದ ಅಂಡರ್‌ಪಾಸ್‌ ಕಾಮಗಾರಿ
ಸ್ಮಾರ್ಟ್‌ಸಿಟಿ ಯೋಜನೆಯಡಿ ಪುರಭವನದ ಮುಂಭಾಗದಲ್ಲಿ ಅಂಡರ್‌ಪಾಸ್‌ನ ಒಂದನೇ ಹಂತದ ಕಾಮಗಾರಿ ಪೂರ್ಣ ವಾಗಿ ಇದೀಗ ಮತ್ತೂಂದು ರಸ್ತೆಯಲ್ಲಿ ಕಾಮಗಾರಿ ಆರಂಭವಾಗಿದೆ. ರೈಲು ನಿಲ್ದಾಣ ಹಾಗೂ ಇತರ ಭಾಗಗಳಿಂದ ಆಗಮಿಸಿ ರಸ್ತೆ ದಾಟುವ ಪಾದಚಾರಿಗಳಿಗೆ ಇದು ಅನುಕೂ ಲವಾಗಲಿದೆ.
-ಮಹಮ್ಮದ್‌ ನಝೀರ್‌, ವ್ಯವಸ್ಥಾಪಕ ನಿರ್ದೇಶಕರು,
ಸ್ಮಾರ್ಟ್‌ ಸಿಟಿ ಲಿ. ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next