Advertisement
ಈ ಸಮುದಾಯ ಅಡುಗೆಮನೆಯು ಸ್ವರೂಪ್ ರಾಣಿ ನೆಹರು ಆಸ್ಪತ್ರೆಯ ಕ್ಯಾಂಪಸ್‌ನಲ್ಲಿದ್ದು ನಂದಿ ಸೇವಾ ಸಂಸ್ಥಾನ ನಿರ್ವಹಿಸಲಿದೆ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಜನರನ್ನು ಬೆಂಬಲಿಸಲು ಉತ್ತರ ಪ್ರದೇಶ ಸರ್ಕಾರ ಈ ಯೋಜನೆಯ ಘೋಷಿಸಿದೆ. ನಂದಿ ಸೇವಾ ಸಂಸ್ಥಾನದ ಪ್ರಕಾರ, ತಮ್ಮ ಎಸ್‌ಆರ್‌ಎನ್ ಆಸ್ಪತ್ರೆಗೆ ಬರುವವರಿಗೆ ಮತ್ತು ಆಹಾರದ ಬಗ್ಗೆ ಚಿಂತೆ ಮಾಡುವವರಿಗೆ ‘ಮಾ ಕಿ ರಸೋಯಿ’ ಉಪಯುಕ್ತವಾಗಿದೆ. ಈ ಮಾ ಕಿ ರಸೋಯ್‌ಯಲ್ಲಿ ಸಿಗುವ ಊಟದಲ್ಲಿ ದಾಲ್, ನಾಲ್ಕು ರೊಟ್ಟಿ, ತರಕಾರಿ ಪಲ್ಯಗಳು, ಅನ್ನ, ಸಲಾಡ್ ಮತ್ತು ಸಿಹಿತಿಂಡಿ ಒಳಗೊಂಡಿದೆ ಇದಿಷ್ಟು ಬಗೆಗಳಿಗೆ ವಿಧಿಸಿರುವ ಮೊತ್ತ ಮಾತ್ರ ಕೇವಲ 9 ರೂಪಾಯಿ.
ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ ಸಿಎಂ ಯೋಗಿ ಆಸ್ಪತ್ರೆಯ ಸೌಲಭ್ಯಗಳನ್ನು ಪರಿಶೀಲಿಸಿದರು ಮತ್ತು ಉಪಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಹಾಜರಿದ್ದವರಿಗೆ ವೈಯಕ್ತಿಕವಾಗಿ ಆಹಾರ ನೀಡಿದರು. ಮಹಾಕುಂಭದ ಸಮಯದಲ್ಲಿ ಸಂದರ್ಶಕರು, ನಿವಾಸಿಗಳಿಗೆ ಕೈಗೆಟುಕುವ ಮತ್ತು ಪೌಷ್ಟಿಕಾಂಶದ ಊಟವನ್ನು ಖಾತ್ರಿಪಡಿಸುವಲ್ಲಿ ಈ ಯೋಜನೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಉದ್ಘಾಟನೆಯ ನಂತರ, ಕೈಗಾರಿಕಾ ಅಭಿವೃದ್ಧಿ ಸಚಿವ ನಂದಗೋಪಾಲ್ ಗುಪ್ತಾ ಅವರು ಸಿಎಂಗೆ ಅಲ್ಲಿ ಆಹಾರದ ಗುಣಮಟ್ಟ, ನೈರ್ಮಲ್ಯ ಮಾನದಂಡಗಳು ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.
Related Articles
Advertisement
ಮಹಾಕುಂಭಮೇಳ ಮಾಹಿತಿ ಪ್ರಸಾರಕ್ಕಾಗಿ “ಕುಂಭವಾಣಿ’ ಎಫ್ಎಂ ಮಹಾಕುಂಭಮೇಳ ಕಾರ್ಯಕ್ರಮದ ಮಾಹಿತಿ ಪ್ರಸಾರ ಮಾಡುವ ಸಲುವಾಗಿ ಪ್ರಸಾರ ಭಾರತಿ “ಕುಂಭವಾಣಿ” ಎಂಬ ಎಫ್ಎಂ ರೇಡಿಯೋ ಚಾನೆಲ್‌ನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಕುಂಭವಾಣಿಯು ಪ್ರತಿ ಹಳ್ಳಿಗಳಿಗೂ ತಲುಪಿ ಜನರಿಗೆ ಮಾಹಿತಿ ನೀಡಲಿದೆ. ಮೇಳದಲ್ಲಿ ಭಾಗಿಯಾಗಲು ಸಾಧ್ಯವಾಗದವರಿಗೆ ಮಾಹಿತಿ ನೀಡುವ ಮೂಲಕ ಜನಪ್ರಿಯತೆ ಗಳಿಸಲಿದೆ’ ಎಂದು ಹೇಳಿದ್ದಾರೆ. ಒಟಿಟಿ ಆಧರಿತವಾಗಿರುವ ಈ ಚಾನೆಲ್ ಜ.10ರಿಂದ ಜ.26ರವರೆಗೆ ಲಭ್ಯವಿರಲಿದೆ.