Advertisement

ನಿತೀಶ್ ಸಂಪುಟದಲ್ಲಿ ಬಿಜೆಪಿ ಮೇಲುಗೈ; ಇಬ್ಬರು ಡಿಸಿಎಂ, ಸುಶೀಲ್ ಮೋದಿಗಿಲ್ಲ ಸಚಿವ ಸ್ಥಾನ

08:40 AM Nov 17, 2020 | keerthan |

ಪಾಟ್ನಾ: ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಮತ್ತೊಮ್ಮೆ ಅಧಿಕಾರ ವಹಿಸಿಕೊಂಡಿದ್ದಾರೆ. ಬಿಜೆಪಿ ಸಹಯೋಗದೊಂದಿಗೆ ಸರ್ಕಾರ ರಚಿಸಿರುವ ನಿತೀಶ್ ಕುಮಾರ್ ಸೋಮವಾರ ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಿತೀಶ್ ಕುಮಾರ್ ಜೊತೆ 13 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಬಿಜೆಪಿ ಇಲ್ಲಿ ಮೇಲಗೈ ಸಾಧಿಸಿದೆ.

Advertisement

ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿತ್ತು. ಬಿಜೆಪಿ 74 ಸ್ಥಾನಗಳನ್ನು , ಜೆಡಿಯು 43 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಚುನಾವಣಾ ಪೂರ್ವ ಒಪ್ಪಂದದಂತೆ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಗೆ ಬಿಟ್ಟುಕೊಟ್ಟ ಬಿಜೆಪಿ ಸಚಿವ ಸಂಪುಟದಲ್ಲಿ ಹಿಡಿತ ಸಾಧಿಸಿದೆ.

ಇಬ್ಬರು ಡಿಸಿಎಂ; ಸುಶೀಲ್ ಮೋದಿಗಿಲ್ಲ ಸ್ಥಾನ

ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಸುಶೀಲ್ ಮೋದಿ ಅವರಿಗೆ ಈ ಬಾರಿ ಸ್ಥಾನ ನೀಡಲಾಗಿಲ್ಲ. ಬದಲಾಗಿ ಅವರಿಗೆ ಕೇಂದ್ರ ಮಟ್ಟದಲ್ಲಿ ಉತ್ತಮ ಸ್ಥಾನಮಾನ ನೀಡಲಾಗುವುದು ಎಂದು ಬಿಜೆಪಿ ಉಸ್ತುವಾರಿ ದೇವೆಂದ್ರ ಫಡ್ನವೀಸ್ ಹೇಳಿದ್ದಾರೆ.

ಇದನ್ನೂ ಓದಿ:ಜೈಲಿನ ಕೈದಿಗಳು ತಯಾರಿಸಿದ ಹವಾಯಿ ಚಪ್ಪಲಿ ಸದ್ಯದಲ್ಲೇ ಕೇರಳ ಮಾರುಕಟ್ಟೆ ಪ್ರವೇಶ

Advertisement

ಬಿಹಾರದಲ್ಲಿ ಈ ಬಾರಿ ಇಬ್ಬರಿಗೆ ಡಿಸಿಎಂ ಹುದ್ದೆ ನೀಡಲಾಗಿದೆ. ಬಿಜೆಪಿಯ ತಾರಕಿಶೋರ್ ಪ್ರಸಾದ್ ಮತ್ತು ರೇಣುದೇವಿ ಅವರು ನಿತೀಶ್ ಕುಮಾರ್ ಜೊತೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರನ್ನು ಡಿಸಿಎಂ ಮಾಡಲಾಗುತ್ತದೆ ಎನ್ನಲಾಗಿದೆ.

ನಿತೀಶ್ ಸಂಪುಟದ ಸದಸ್ಯರು

ತಾರಕಿಶೋರ್ ಪ್ರಸಾದ್ (ಬಿಜೆಪಿ)

ರೇಣು ದೇವಿ (ಬಿಜೆಪಿ)

ಬಿಜೇಂದ್ರ ಪ್ರಸಾದ್ ಯಾದವ್ (ಜೆಡಿಯು)

ಅಶೋಕ್ ಕುಮಾರ್ ಚೌಧರಿ (ಜೆಡಿಯು)

ಮೇವಾ ಲಾಲ್ ಚೌಧರಿ (ಜೆಡಿಯು)

ಶೀಲಾ ಮಂಡಲ್ (ಜೆಡಿಯು)

ಸಂತೋಷ್ ಮಾಂಜಿ (ಎಚ್‌ಎಎಂ)

ಮುಖೇಶ್ ಸಹಾನಿ (ವಿಐಪಿ)

ಮಂಗಲ್ ಪಾಂಡೆ (ಬಿಜೆಪಿ)

ಅಮರೇಂದ್ರ ಪ್ರತಾಪ್ ಸಿಂಗ್ (ಬಿಜೆಪಿ)

ರಾಂಪ್ರಿತ್ ಪಾಸ್ವಾನ್ (ಬಿಜೆಪಿ)

ಜೀವೇಶ್ ಮಿಶ್ರಾ (ಬಿಜೆಪಿ)

ರಾಮ್ ಸೂರತ್ ರೈ (ಬಿಜೆಪಿ)

Advertisement

Udayavani is now on Telegram. Click here to join our channel and stay updated with the latest news.

Next