ಹೊಸದಿಲ್ಲಿ: ಸತತ 16ನೇ ದಿನ ತೈಲ ಬೆಲೆಯೇರಿಕೆ ಯಾಗಿದೆ. ಜೂ.7ರಂದು ಸರಕಾರಿ ತೈಲ ಕಂಪೆನಿಗಳು ಮತ್ತೆ ದೈನಂದಿನ ಬೆಲೆ ಪರಿಷ್ಕರಣೆ ಆರಂಭಿಸಿದ ಅನಂತರ ಬೆಲೆಯೇ ರುತ್ತಲೇ ಹೋಗಿದೆ ವಿನಾ ಒಮ್ಮೆಯೂ ಇಳಿದಿಲ್ಲ.
ಸೋಮವಾರ ಪೆಟ್ರೋಲ್ ಬೆಲೆ ಲೀ.ಗೆ 34 ಪೈಸೆ ಏರಿ 82.15 ರೂ.ಗೆ ಮುಟ್ಟಿತು. ಇನ್ನು ಡೀಸೆಲ್ ಬೆಲೆ 55 ಪೈಸೆ ಏರಿ 74.98 ರೂ.ಗೆ ಮುಟ್ಟಿತು.
16 ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ವೊಂದಕ್ಕೆ 8.60 ರೂ.ನಷ್ಟು ಏರಿದೆ. ಡೀಸೆಲ್ ಬೆಲೆ 9.02 ರೂ. ಏರಿದೆ. ಕೊರೊನಾ ವೈರಸ್ ಹಾವಳಿ ಆರಂಭವಾದ ಅನಂತರ ಕಚ್ಚಾ ತೈಲದ ಬೆಲೆಯಿಳಿಯಿತು. ಆದ್ದರಿಂದ ಆಮದು ವೆಚ್ಚ ಕಡಿಮೆಯಾಯಿತು. ಈ ಸಂದರ್ಭದಲ್ಲಿ ಸರಕಾರ ಆಮ ದಿನ ಅಬಕಾರಿ ಸುಂಕ ಏರಿಸಿತು.
ಈಗ ತೈಲೋತ್ಪಾದಕ ದೇಶಗಳು ಸಹಜವಾಗಿ ಬೆಲೆಯೇರಿಸಲು ಶುರು ಮಾಡಿವೆ. ಆದ್ದರಿಂದ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಬೆಲೆ ವ್ಯತ್ಯಾಸ ಭರಿಸಲು ಬೆಲೆಯೇರಿಕೆ ಆರಂಭಿಸಿವೆ.