Advertisement

ದೇಶದಲ್ಲಿ ಸತತ 17ನೇ ಬಾರಿಗೆ ಏರಿಕೆಯಾದ ಪೆಟ್ರೋಲ್ ಮತ್ತು ಡಿಸೇಲ್ ದರ

02:12 PM Jun 23, 2020 | Mithun PG |

ನವದೆಹಲಿ: ಭಾರತದಲ್ಲಿ ಮತ್ತೊಮ್ಮೆ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಾಗಿದೆ. ದೈನಂದಿನ ಪರಿಷ್ಕರಣೆಯ ಭಾಗವಾಗಿ ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರ (23-06-20200) ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಸಿದ್ದು,  ಜೂನ್ 7 ರಿಂದ ಸತತ 17 ನೇ ಭಾರೀ ಇಂಧನ ದರ  ಹೆಚ್ಚಳವಾಗಿದೆ.

Advertisement

ದೇಶಾದ್ಯಂತ ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 18-20 ಪೈಸೆ ಹೆಚ್ಚಿಸಿದ್ದರೆ, ಡೀಸೆಲ್ ದರ ಸುಮಾರು 55 ಪೈಸೆ ಏರಿಕೆಯಾಗಿದೆ.

ಇಂದಿನ ಪರಿಷ್ಕರಣೆಯ ನಂತರ, ರಾಷ್ಟ್ರ ರಾಜಧಾನಿದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 79.76 ರೂ. ಆಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ ಗೆ 79.40 ರೂ.ಗೆ ಏರಿದೆ.

ಜೈಪುರದಲ್ಲಿ  ಪೆಟ್ರೋಲ್ ಬೆಲೆ ಲೀಟರ್ ಗೆ 87 ರೂ. ಮತ್ತು ಡೀಸೆಲ್ ಬೆಲೆ 80.36 ರೂ. ಏರಿಕೆಯಾಗಿದೆ.  ಮಾತ್ರವಲ್ಲದೆ ಡೀಸೆಲ್ ದರ ಲೀಟರ್ ಗೆ  80 ರೂ. ಗಳನ್ನು ಮುಟ್ಟಿದ ಏಕೈಕ ನಗರ ಇದು. ಮುಂಬಯಿಯಲ್ಲಿ, ಹೊಸ ಏರಿಕೆಯ ನಂತರ ಪೆಟ್ರೋಲ್ ಬೆಲೆ ಲೀಟರ್‌ಗೆ 86.54 ರೂ.ಗೆ ಮತ್ತು ಡೀಸೆಲ್ ಬೆಲೆ ಕೂಡ ಪ್ರತಿ ಲೀಟರ್‌ಗೆ 77.76 ರೂ.ಗೆ ಲಭ್ಯವಿದೆ.

Advertisement

ದೇಶದಲ್ಲಿ 10 ಪ್ರಮುಖ ನಗರಗಳು ಒಂದು ಲೀಟರ್ ಪೆಟ್ರೋಲ್ ಗೆ 80 ರೂ. ಪಾವತಿಸುತ್ತಿದೆ. ಕೋಲ್ಕತ್ತಾ (81.45 / ರೂ), ಮುಂಬೈ (86.54 ರೂ), ಚೆನ್ನೈ (83.04 ರೂ), ನೋಯ್ಡಾ (80.45 ರೂ), ಬೆಂಗಳೂರು (82.35 ರೂ). ಭುವನೇಶ್ವರ (80.32 ರೂ ), ಹೈದರಾಬಾದ್ (82.79 ರೂ), ಜೈಪುರ (87.01 ರೂ), ಲಕ್ನೋ (80.55 ರೂ ) ಪಾಟ್ನಾ (82.85 ರೂ) ಮತ್ತು ತಿರುವನಂತಪುರಂ (81.48 ರೂ).

ಜೂನ್ 7 ರಿಂದ ಸತತ ಹೆಚ್ಚಳದಿಂದಾಗಿ ಪೆಟ್ರೋಲ್ ಬೆಲೆ ಒಟ್ಟು 8.5 ರೂ ಮತ್ತು ಡೀಸೆಲ್ ದರವನ್ನು 10 ರೂ.ಗೆ ಏರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next