Advertisement

Udupi Video Case: ಎಫ್‌ಎಸ್‌ಎಲ್‌ ವರದಿ ನಿರೀಕ್ಷೆಯಲ್ಲಿ ಸಿಐಡಿ

10:07 AM Aug 18, 2023 | Team Udayavani |

ಉಡುಪಿ: ಪ್ಯಾರಾ ಮೆಡಿಕಲ್‌ ಕಾಲೇಜಿನ ಬಾಲಕಿಯರ ಶೌಚಾಲಯದಲ್ಲಿ ನಡೆದಿದೆ ಎನ್ನ ಲಾದ ವೀಡಿಯೋ ಪ್ರಕರಣದ ಎಫ್‌ಎಸ್‌ಎಲ್‌ ವರದಿಯ ನಿರೀಕ್ಷೆಯಲ್ಲಿ ಸಿಐಡಿ ಪೊಲೀಸರು ಇದ್ದಾರೆ.

Advertisement

ಈಗಾಗಲೇ ಉಡುಪಿಯಲ್ಲಿ ಪ್ರಕರಣದ ತನಿಖೆ ನಡೆಸಿ, ಹೇಳಿಕೆಯನ್ನು ಸಿಐಡಿ ಅಧಿಕಾರಿಗಳು ದಾಖಲಿಸಿದ್ದಾರೆ. ಮೂರು ವಾರಗಳ ಹಿಂದೆ ವಿದ್ಯಾರ್ಥಿನಿಯರ ಮೊಬೈಲ್‌ ಫೋನ್‌ಗಳನ್ನು ಬೆಂಗಳೂರಿಗೆ ಎಫ್‌ಎಸ್‌ಎಲ್‌ ವರದಿಗಾಗಿ ಕಳುಹಿಸಲಾಗಿತ್ತು.

ಬೆಂಗಳೂರಿನಲ್ಲಿ ವೀಡಿಯೋ ಫೋಟೋ ಹಿಂಪಡೆಯಲಾಗದಿದ್ದರೆ ಫೋನ್‌ಗಳನ್ನು ಗುಜರಾತ್‌ನ ಫಾರೆನ್ಸಿಕ್‌ ಸೈನ್ಸ್ ಲ್ಯಾಬೊರೇಟರಿಗೆ ರವಾನಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next