Advertisement

ಇಂಧನ ದರ ಹೆಚ್ಚಳ ಖಂಡಿಸಿ ಕರವೇ ಕಾರ್ಯಕರ್ತರ ನಿರಶನ

03:25 PM Feb 06, 2021 | Team Udayavani |

ಲಿಂಗಸುಗೂರು: ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಬೆಲೆ ಹೆಚ್ಚಳ ಖಂಡಿಸಿ ಕರವೇ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ದಿನದಿಂದ ದಿನಕ್ಕೆ ಜನಸಾಮಾನ್ಯರ ದಿನಬಳಕೆ ವಸ್ತುಗಳ ಗಗನಕ್ಕೇರುತ್ತಲೇ ಇವೆ. ಅವುಗಳಲ್ಲಿ ಜೀವನಾಶ್ಯಕ ಎನಿಸುವಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಅಗತ್ಯವಾಗಿರುವ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲದ ಬೆಲೆಗಳು ಈ ಭಾರಿ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಏರಿಕೆ ಮಾಡಿದೆ.

Advertisement

ಇದರಿಂದ ಸಾರಿಗೆ ಬಸ್‌ ದರ ಹೆಚ್ಚಿದ್ದು, ಜನಸಾಮಾನ್ಯರಿಗೆ ತೊಂದರೆ ಎದುರಿಸುವಂತಾಗಿದೆ. ಬಡವರಿಗೆ ವರದಾನವಾಗುವಂತಹ ಯೋಜನೆಗಳನ್ನು ಸರ್ಕಾರ ರೂಪಿಸಬೇಕೆ ಹೊರತು ಬಡವರಿಗೆ ಹೊರೆಯಾಗುವಂತಹ ಕಾರ್ಯಕ್ಕೆ ಮುಂದಾಗದಿರುವುದು ದುರಂತವೇ ಸರಿ.

ಇದನ್ನೂ ಓದಿ:ಬೈಕ್‌ ಸವಾರರಿಗೆ ಹೆಲ್ಮೆಟ್ ವಿತರಣೆ

ಅಗತ್ಯ ವಸ್ತುಗಳ ಬೆಲೆ ಕಡಿಮೆಗೊಳಿಸುವತ್ತ ಕೇಂದ್ರ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು. ಕರವೇ ಅಧ್ಯಕ್ಷ ಜಿಲಾನಿಪಾಷಾ, ಶಿವರಾಜ ನಾಯಕ, ಅಜೀಜ್‌ ಪಾಷಾ, ಚಂದ್ರು ನಾಯಕ, ರವಿಕುಮಾರ ಬರಗುಡಿ, ಹನುಮಂತ ನಾಯಕ, ಜಮೀರ್‌ ಖಾನ್‌, ಅಲ್ಲಾವುದ್ದೀನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next