ದೇವನಹಳ್ಳಿ: ಕೃಷಿ ಭೂಮಿ ರೈತರ ಪ್ರಯೋಗ ಶಾಲೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ತಾಲೂಕಿನ ಬೆಟ್ಟಕೋಟೆ ಗ್ರಾಮದ ಚನ್ನೇಗೌಡ ಅವರೇ ಸಾಕ್ಷಿ. ತಮಗೆ ಸೇರಿದ 2 ಎಕರೆ ಜಮೀನಿನಲ್ಲಿ ತೈವಾನ್ ಪಿಂಕ್ ತಳಿಯ ಸೀಬೆ (ಚೇಪೆ ಹಣ್ಣು) ಬೆಳೆದು ಆದಾಯ ಕಂಡು ಕೊಂಡಿದ್ದಾರೆ.
Advertisement
ಸಮೃದ್ಧವಾಗಿ ಬೆಳೆದಿರುವ ಸೀಬೆ ಹಣ್ಣಿನ ತೋಟ ನೋಡುಗರ ಬಾಯಿಯಲ್ಲಿ ನೀರೂರಿಸುತ್ತದೆ. ಹೆಚ್ಚು ನೀರು ಬಯಸದ ಸೀಬೆ ಬಯಲು ಸೀಮೆಗೆ ಹೇಳಿ ಮಾಡಿಸಿದ ಬೆಳೆ ಎನ್ನುತ್ತಾರೆ.
Related Articles
Advertisement
ಒಂದು ಸಸಿಗೆ 120 ರೂ.ನಂತೆ ಕೋಲ್ಕತ್ತಾದಿಂದ ಖರೀದಿ
ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸೌಲಭ್ಯ ಪಡೆದು 2 ಎಕರೆಯಲ್ಲಿ ಚನ್ನೇಗೌಡ ತೈವಾನ್ ಪಿಂಕ್ ತಳಿಯ ಸೀಬೆ ಬೆಳೆದಿದ್ದಾರೆ.
ಸಸಿಗಳನ್ನು ಕೋಲ್ಕತ್ತ ನಗರದಿಂದ ಪ್ರತಿ ಸಸಿಗೆ 120 ರೂ.ನಂತೆ ಹಣ ಪಾವತಿಸಿ 1500 ಸಸಿಗಳನ್ನು ಡೋರ್ ಡೆಲವರಿ ಪಡೆದಿದ್ದಾರೆ. ನರೇಗಾ ಯೋಜನೆಯಡಿ 2022-23ನೇ ಸಾಲಿನಲ್ಲಿ ಕೂಲಿ ವೆಚ್ಚ 96,000 ಹಾಗೂ ಪ್ರದೇಶ ವಿಸ್ತರಣೆಗೆ 40,000 ಸಾಮಗ್ರಿ ವೆಚ್ಚವನ್ನು ನರೇಗಾ ಯೋಜನೆಯಡಿ ಕಲ್ಪಿಸಲಾಗಿದೆ. ಹಾಗೆಯೇ ಸಸಿಗಳನ್ನು 2ಗಿ2.5 ಞ2 ಮೀ. ಅಂತರದ ಅಧಿಕ ಸಾಂದ್ರಪದ್ಧತಿಯಲ್ಲಿ ನಾಟಿ ಮಾಡಿ ಆರೈಕೆ ಮಾಡಬೇಕಿದೆ. ಈ ಸಸಿಗಳಿಗೆ ಈಗ 1.8 ವರ್ಷ ಆಗಿದ್ದು ಅಲ್ಪ ನೀರು ಇರುವ ಕಾರಣದಿಂದ ಸಸಿಗಳಿಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದ್ದಾರೆ. ಕಳೆದ 9 ತಿಂಗಳಿಂದ ಪಿಂದೆಯನ್ನು ಕಿತ್ತು ಹಾಕಿದ್ದರು. 3 ತಿಂಗಳ ಹಿಂದೆಯಷ್ಟೇ ಬೆಳೆದ ಪಿಂದೆಯನ್ನು ಉಳಿಸಿಕೊಂಡಿ¨ªಾರೆ. ಸೀಬೆ ಹಣ್ಣನ್ನು ಉಜಿ ನೊಣ ಹಾಗೂ ಕೀಟ ಗಳಿಂದ ರಕ್ಷಿಸಿಕೊಳ್ಳಲು ಸ್ಪಾಂಜ್ ಅಳವಡಿಸಿದ್ದಾ ರೆ. ಇದರಿಂದ ಕಾಯಿ ಹಾಳಾಗುವುದು ಕಡಿಮೆ ಆಗಿದೆ. ಹಾಗೆಯೇ ಪಕ್ಷಿಗಳ ಕಾಟದಿಂದಲೂ ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಅನುಕೂಲ ಎಂದು ರೈತ ಚನ್ನೇಗೌಡ “ಉದಯವಾಣಿ’ಗೆ ತಿಳಿಸಿದ್ದಾರೆ. ಬೆಂ.ಗ್ರಾಮಾಂತರ ಜಿಲ್ಲೆಯ ತೋಟಗಾರಿಕಾ ಬೆಳೆಗಳಾದ ಮಾವು, ಗುಲಾಬಿ, ಸೀಬೆ, ದ್ರಾಕ್ಷಿ, ನುಗ್ಗೆ ಉತ್ತೇಜಿಸಲು ಮಹಾತ್ಮ ಗಾಂಧಿ
ನರೇಗಾ ಯೋಜನೆ ಯಡಿ ಸಣ್ಣ ರೈತರಿಗೆ ಜೀವಿತಾವಧಿ ಯಲ್ಲಿ 5 ಲಕ್ಷ ರೂ.ವರೆಗೂ ಸಹಾಯಧಾನ ನೀಡಲಾಗುವುದು.
●ಡಾ. ಅನುರಾಧಾ, ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ. *ಎಸ್.ಮಹೇಶ್