Advertisement
ಅಗ್ಗವಾದ ಮಾವಿನಹಣ್ಣುಬೇಸಗೆಯ ಆರಂಭದಲ್ಲಿ 120ಕ್ಕೆ ಮಾರಾಟವಾಗುತ್ತಿದ್ದ ಮಲ್ಲಿಕ ಅನಂತರ ಕೆಜಿ 1ಕ್ಕೆ 160 – 180 ರೂ.ಗೆ ಮಾರಾಟವಾಗುತ್ತಿತ್ತು. ಇದೀಗ 80 – 100 ರೂ.ಗೆ ದೊರೆಯುತ್ತಿದೆ. 160 – 180 ರೂ. ಇದ್ದ ಮಲಗೋವಾ ಈಗ 100 – 120 ರೂ., 100 – 120 ರೂ. ದರವಿದ್ದ ಚಿತ್ತೂರು ನೀಲಂ ಈಗ 50- 80 ರೂ.ಗೆ ಸಿಗುತ್ತಿದೆ. ಮಲ್ಲಿಕ, ಮಲಗೋವಾ ಮಾವಿನಹಣ್ಣು ಇನ್ನು ಸ್ವಲ್ಪ ದಿನವಷ್ಟೇ ಪೂರೈಕೆಯಾಗಲಿದ್ದು, ಅನಂತರ ಸುಮಾರು 2 ತಿಂಗಳವರೆಗೆ ನೀಲಂ ಮಾತ್ರ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುತ್ತದೆ. ಹಣ್ಣು ಹಂಪಲುಗಳಲ್ಲಿ ಖರ್ಜೂರ ಆವಕವಾದರೆ, 50- 60 ರೂ.ಗೆ ಸಿಗುತ್ತಿದ್ದ ಮುಸುಂಬೆ ಈಗ 100 – 110 ರೂ. ದರವಾಗಿದೆ. ಬಾಳೆಹಣ್ಣು ಸಾಕಷ್ಟು ದೊರೆಯುತ್ತದೆ.
200 ರೂ.ಗೆ ಮಾರಾಟವಾಗುತ್ತಿದ್ದ ಬ್ರೊಕೋಲಿ ಈಗ 150 ರೂ., ಲೈಟ್ಟಿಸ್ ಮತ್ತು ಸೆಲೆರಿ 120 ರೂ., ಚೈನೀಸ್ ಕ್ಯಾಬೇಜ್ 80 ರೂ., ರೆಡ್ ಮತ್ತು ಯೆಲ್ಲೋ ಕ್ಯಾಪ್ಸಿಕಂ 100 ರೂ., ಬೇಬಿ ಪೊಟ್ಯಾಟೋ 50 ರೂ., ಚೆರಿ ಟೊಮ್ಯಾಟೋ ಪ್ಯಾಕ್ ಗೆ 40 ರೂ., ಜುಕುನಿ 120, ಐಸ್‌ಪರ್ಕ್ 120 ರೂ., ಚೈನೀಸ್ ಕುಕುಂಬರ್ 60 ರೂ., ರೆಡ್ ಕ್ಯಾಬೇಜ್ 60 ರೂ. ಹೀಗೆ ಸುಮಾರು 50ಕ್ಕೂ ಹೆಚ್ಚು ಬಗೆಯ ಚೈನೀಸ್ ತರಕಾರಿಗಳು ದೊಡ್ಡ ದೊಡ್ಡ ಮಳಿಗೆಗಳಲ್ಲಿ ಮಾತ್ರ ಸಿಗುತ್ತವೆ. ಗೋವಾ ಮಶ್ರೂಂ (ಅಣಬೆ), ಬೇಬಿ ಕಾರ್ನ್ಗೆ ಉಡುಪಿಯಲ್ಲಿ ಸಾಕಷ್ಟು ಬೇಡಿಕೆಯಿದೆ.
Related Articles
ಮಳೆಗಾಲವಾದ್ದರಿಂದ ವ್ಯಾಪಾರ ಕಡಿಮೆಯಿದೆ. ದಿನದಿಂದ ದಿನಕ್ಕೆ ತರಕಾರಿಗಳ ಬೆಳೆ, ಪೂರೈಕೆ ಆಧಾರದಲ್ಲಿ ದರ ನಿಗದಿಪಡಿಸಲಾಗುತ್ತದೆ. ಎಲವೊಂದು ತರಕಾರಿಗಳಿಗೆ ಬೆಲೆ ಕಡಿಯಾದರೆ, ಕೆಲವೊಂದಕ್ಕೆ ದರ ಹೆಚ್ಚಾಗಿದೆ. ತರಕಾರಿ ಬೆಳೆಯುವಲ್ಲಿ ಮಳೆ ವಿಪರೀತವಿದ್ದರೆ, ಯಾವಾಗಲೂ ತರುವ ಲಾರಿ, ವ್ಯಾನ್ ಸಿಗದಿದ್ದರೆ ದರದಲ್ಲಿ ವ್ಯತ್ಯಾಸಗಳಾಗುತ್ತವೆ. ಬಸ್ ಮೂಲಕ ತರಕಾರಿ ಪೂರೈಸಿದರೆ ದರ ಹೆಚ್ಚಳವಾಗುತ್ತದೆ.
– ಅಬ್ದುಲ್ ರಹೀಂ, ವ್ಯಾಪಾರಿ, ವಿಶ್ವೇಶ್ವರಯ್ಯ ತರಕಾರಿ/ಹಣ್ಣುಹಂಪಲು ಮಾರುಕಟ್ಟೆ ಉಡುಪಿ
Advertisement
ಸ್ಪರ್ಧಾತ್ಮಕ ದರದಲ್ಲಿ ಮಾರಾಟ ದೊಡ್ಡ ಮಳಿಗೆಗಳು ಸ್ಪರ್ಧಾತ್ಮಕ ದರದಲ್ಲಿ ತರಕಾರಿ/ಹಣ್ಣು ಹಂಪಲುಗಳನ್ನು ಮಾರಾಟ ಮಾಡುವುದರಿಂದ ಸಾಮಾನ್ಯ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ದೊರೆಯುತ್ತವೆ. ಸುಮಾರು ಶೇ. 40 – 50ರ ವರೆಗೂ ದರಗಳಲ್ಲಿ ವ್ಯತ್ಯಾಸಗಳಾಗುತ್ತವೆ.
– ಶ್ರೀಕಾಂತ್ ಹೆಗ್ಡೆ, ತರಕಾರಿ/ಹಣ್ಣು ಪೂರೈಕೆದಾರರು ಉಡುಪಿ.