Advertisement

Tata Trusts; ಅಧ್ಯಕ್ಷರಾಗಿ ನೋಯೆಲ್ ಟಾಟಾ ಸರ್ವಾನುಮತದಿಂದ ನೇಮಕ

02:26 PM Oct 11, 2024 | Team Udayavani |

ಮುಂಬಯಿ: ಇಲ್ಲಿ ನಡೆದ ಸಭೆಯಲ್ಲಿ ಟಾಟಾ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೋಯೆಲ್ ಟಾಟಾ(Noel Tata)ಅವರನ್ನು ಶುಕ್ರವಾರ(ಅಕ್ಟೋಬರ್ 11)ಸರ್ವಾನುಮತದಿಂದ ನೇಮಕ ಮಾಡಲಾಯಿತು.

Advertisement

ರತನ್ ಟಾಟಾ ಅವರು ವಿಧಿವಶರಾದ ಬಳಿಕ ಯಾರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ರತನ್ ಟಾಟಾ  ಮಲ ಸಹೋದರ ನಿರೀಕ್ಷೆಯಂತೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಟಾಟಾ ಗ್ರೂಪ್‌ನ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್‌ನಲ್ಲಿ 66% ಪಾಲನ್ನು ಹೊಂದಿರುವ ಟಾಟಾ ಟ್ರಸ್ಟ್ಸ್, ಗುಂಪಿನ ಆಡಳಿತದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ರತನ್ ಟಾಟಾ ಅವರ ಅಂತಿಮ ಸಂಸ್ಕಾರದ ಒಂದು ದಿನದ ನಂತರ ನೋಯೆಲ್ ಟಾಟಾ ಅವರನ್ನು ನೇಮಿಸಲಾಗಿದೆ. ಮಂಡಳಿಯ ಸಭೆಯು ರತನ್ ಟಾಟಾ ಅವರಿಗೆ ಗೌರವ ಸಲ್ಲಿಸಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವುದನ್ನೂ ಜತೆಯಾಗಿ ಮಾಡಿದೆ.

ಹಲವು ವರ್ಷಗಳ ಕಾಲ ಟಾಟಾ ಟ್ರಸ್ಟ್ ಮತ್ತು ಟಾಟಾ ಗ್ರೂಪ್ ಅನ್ನು ಮುನ್ನಡೆಸಿದ್ದ ರತನ್ ಟಾಟಾ ಅವರು ವಿವಾಹವಾಗಿರಲಿಲ್ಲ, ಮಾತ್ರವಲ್ಲದೆ ಟ್ರಸ್ಟ್‌ಗೆ ತಮ್ಮ ಸ್ಥಾನಕ್ಕೆ ಉತ್ತರಾಧಿಕಾರಿ ಯಾರು ಎಂಬುದನ್ನು ಹೆಸರಿಸಿರಲಿಲ್ಲ. ಪರಿಣಾಮವಾಗಿ, ನಾಯಕತ್ವವನ್ನು ನಿರ್ಧರಿಸಲು ಮಂಡಳಿಯು ಸಭೆ ಸೇರಿ ವರ್ಷಗಳ ಕಾಲ ಟ್ರಸ್ಟ್‌ಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದ ನೋಯೆಲ್ ಟಾಟಾ ಅವರು ಜವಾಬ್ದಾರಿ ವಹಿಸಿಕೊಳ್ಳಲು ಆಯ್ಕೆಯಾಗಿ ಪರಿಗಣಿಸಲ್ಪಟ್ಟಿದ್ದಾರೆ.

Advertisement

ಯಾರು ನೋಯೆಲ್ ಟಾಟಾ ?
ನೋಯೆಲ್ ಟಾಟಾ ಅವರು ರತನ್ ಟಾಟಾ ಅವರ ಸಾಕು ತಂದೆ ನಾವಲ್ ಟಾಟಾ ಅವರ ಎರಡನೇ ಪತ್ನಿ ಸಿಮೋನ್ ಪುತ್ರ. ನೋಯೆಲ್ ಅವರ ಮಕ್ಕಳಾದ ಲಿಯಾ (39), ಮಾಯಾ (36), ಮತ್ತು ನೆವಿಲ್ಲೆ (32), ಟಾಟಾ ಟ್ರಸ್ಟ್‌ನ ಅಂಗಸಂಸ್ಥೆಗಳು ಸೇರಿದಂತೆ ಐದು ಪ್ರಮುಖ ಟ್ರಸ್ಟ್‌ಗಳ ಟ್ರಸ್ಟಿಗಳಾಗಿ ಸೇರ್ಪಡೆಗೊಂಡಿದ್ದಾರೆ.

ರತನ್ ಟಾಟಾ ಟ್ರಸ್ಟ್ ಟಾಟಾ ಗ್ರೂಪ್‌ನ ದತ್ತಿ ಮತ್ತು ಪ್ರಮುಖ ಆರ್ಥಿಕ ಚಟುವಟಿಕೆಗಳೆರಡನ್ನೂ ನಿರ್ವಹಿಸುವ ಈ ಟ್ರಸ್ಟ್‌ಗಳಲ್ಲಿ ಟಾಟಾ ಸನ್ಸ್‌ ಸಮೂಹದ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಟ್ರಸ್ಟ್‌ಗಳಲ್ಲಿ ಅವರ ಪಾತ್ರವನ್ನು ಕೇವಲ ಸಾಂಕೇತಿಕವಾಗಿದೆಯಾದರೂ ಭವಿಷ್ಯದ ಆಡಳಿತವನ್ನು ರೂಪಿಸಲು ಅವಶ್ಯಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next