ಬೇಕಾಗುವ ಸಾಮಗ್ರಿ:
ಹದವಾದ ಇಬ್ಬುಡ್ಲ- 1, ಬೆಲ್ಲದ ಚೂರು- 2 ಕಪ್, ಏಲಕ್ಕಿ ಹುಡಿ- 1 ಚಮಚ, ಕಾಳುಮೆಣಸಿನ ಹುಡಿ- 1 ಚಮಚ.
ತಯಾರಿಸುವ ವಿಧಾನ:
ಇಬ್ಬುಡ್ಲದ ಸಿಪ್ಪೆ ತೆಗೆದು ಮಿಕ್ಸಿಜಾರ್‌ನಲ್ಲಿ ಹಾಕಿ ನಯವಾಗಿ ರುಬ್ಬಿ ತೆಗೆಯುವ ಮೊದಲು ಬೆಲ್ಲ ಹಾಕಿ ರುಬ್ಬಿ ತೆಗೆದು ಪಾತ್ರೆಗೆ ಹಾಕಿ ಏಲಕ್ಕಿ ಹುಡಿ, ಕಾಳುಮೆಣಸಿನ ಹುಡಿ ಹಾಕಿ ಬೇಕಾದಷ್ಟು ತೆಳ್ಳಗೆ ಮಾಡಿ ತಣಿಸಿ ಕುಡಿಯಿರಿ. ಇಬ್ಬುಡ್ಲ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೋಳು ಮಾಡಿ ಬೆಲ್ಲ , ಏಲಕ್ಕಿ ಬೆರೆಸಿ ತಿನ್ನಬಹುದು. ಸ್ವಲ್ಪ ಅವಲಕ್ಕಿ ಹಾಕಿ ಸವಿದರೆ ಹೊಟ್ಟೆ ತಣ್ಣಗಾಗುವುದು. ಅಲ್ಲದೆ ಹೊಟ್ಟೆ ತುಂಬುವುದು. ಇಬ್ಬುಡ್ಲ ತರಿ ತರಿಯಾಗಿ ಪರಿಮಳಯುಕ್ತ ಸಿಹಿ ಆಗಿರುವುದು. ಇದಕ್ಕೆ ಬೆಲ್ಲದ ಬದಲು ಸಕ್ಕರೆ ಹಾಕಿ ಸವಿದರೆ ಸ್ವಾದಿಷ್ಟವಾಗುವುದು.
Advertisement
ನೇರಳೆ ಹಣ್ಣಿನ ಪಾನಕಬೇಕಾಗುವ ಸಾಮಗ್ರಿ:
ನೇರಳೆಹಣ್ಣು-20, ಬೆಲ್ಲದ ಹುಡಿ-1/2 ಕಪ್/ಸಕ್ಕರೆ, ಉಪ್ಪಿನ ಹುಡಿ ಚಿಟಿಕೆ.
ತಯಾರಿಸುವ ವಿಧಾನ:
ನೇರಳೆಹಣ್ಣು ತೊಳೆದು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಹಿಚುಕಿ ಬೀಜ ಬೇರ್ಪಡಿಸಿರಿ. ಬೆಲ್ಲದ ಹುಡಿ, ಉಪ್ಪು ಹಿಚುಕಿದ ನೇರಳೆಹಣ್ಣು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ರುಬ್ಬಿ ತೆಗೆಯಿರಿ. ಫ್ರಿಜ್ ನಲ್ಲಿಟ್ಟು ತಂಪು ಮಾಡಿ ಕುಡಿಯಿರಿ. ನೇರಳೆ ಹಣ್ಣಿನ ಪಾನಕ (ಬೀಜ) ಮಧುಮೇಹಿಗಳಿಗೆ ಉತ್ತಮ ಪಾನೀಯ.
ಬೇಕಾಗುವ ಸಾಮಗ್ರಿ:
ಸಿಪ್ಪೆ ತೆಗೆದ ಸೋರೆಕಾಯಿ ಹೋಳು- 3 ಕಪ್, ಬೆಲ್ಲ- 2 ಕಪ್, ಏಲಕ್ಕಿ ಹುಡಿ- 1 ಚಮಚ.
ತಯಾರಿಸುವ ವಿಧಾನ:
ಸೋರೆಕಾಯಿ ಹೋಳು ಬೇಯಿಸಿ ತಣಿಸಿರಿ. ಬೆಲ್ಲ , ಬೇಯಿಸಿದ ಸೋರೆಕಾಯಿ ಮಿಕ್ಸಿ ಪಾತ್ರೆಗೆ ಹಾಕಿ ನಯವಾಗಿ ರುಬ್ಬಿ ತೆಗೆದು ಪಾತ್ರೆಗೆ ಹಾಕಿ ಏಲಕ್ಕಿ ಹುಡಿ ಹಾಕಿ ಬೆರೆಸಿ ತಣಿಸಿ ಕುಡಿಯಿರಿ. ಜಾಂಡೀಸ್ ಕಾಯಿಲೆಯವರಿಗೆ ಉತ್ತಮ ಪಾನಿಯ ಎಸ್. ಜಯಶ್ರೀ ಶೆಣೈ