Advertisement

Feb 10-12 : ಉಡುಪಿಯಲ್ಲಿ ಫ‌ಲಪುಷ್ಪ ಪ್ರದರ್ಶನಕ್ಕೆ ಕ್ಷಣಗಣನೆ

11:00 PM Feb 09, 2018 | Karthik A |

ಉಡುಪಿ: ಜಿಲ್ಲಾಡಳಿತ, ಜಿ.ಪಂ., ತೋಟಗಾರಿಕೆ ಇಲಾಖೆ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು, ಉಡುಪಿ ಜಿಲ್ಲಾ ಕೃಷಿಕ ಸಮಾಜ ಇವರ ಸಹಯೋಗದಲ್ಲಿ ದೊಡ್ಡಣ್ಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ರೈತ ಸೇವಾ ಕೇಂದ್ರದ (ಪುಷ್ಪ ಹರಾಜು) ಆವರಣದಲ್ಲಿ ಫೆ. 10ರಿಂದ 12ರ ವರೆಗೆ ಉಡುಪಿ ಜಿಲ್ಲಾಮಟ್ಟದ ಫ‌ಲಪುಷ್ಪ ಪ್ರದರ್ಶನ ಹಾಗೂ ರೈತ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಫೆ. 10ರ ಅಪರಾಹ್ನ 3 ಗಂಟೆಗೆ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಫ‌ಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ ಎಂದು ಉಡುಪಿ ಜಿ.ಪಂ. ಸಿಇಒ ಶಿವಾನಂದ ಕಾಪಶಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ತೋಟಗಾರಿಕೆ ಇಲಾಖಾಧಿಕಾರಿ ಭುವನೇಶ್ವರಿ ಉಪಸ್ಥಿತರಿದ್ದರು.

Advertisement

ಸಾವಯವ ತಾರಸಿ ತೋಟ ವಿಶೇಷಾಕರ್ಷಣೆ
ದೊಡ್ಡಣಗುಡ್ಡೆಯಲ್ಲಿರುವ ತೋಟಗಾರಿಕೆ ಇಲಾಖೆಯ ಕಟ್ಟಡದ ತಾರಸಿಯಲ್ಲಿ ಸಾವಯವ ಕೃಷಿ ನಡೆಸಲಾಗುತ್ತಿದ್ದು, ಇದು ವಿಶೇಷ ಆಕರ್ಷಣೆಯಾಗಿದೆ. ಎಸ್‌ಎಲ್‌ಆರ್‌ಎಂನವರು ಸಾವಯವ ತರಕಾರಿ ತೋಟವನ್ನು ನಿರ್ವಹಿಸುತ್ತಿದ್ದಾರೆ. ಸರಿಸುಮಾರು 350 ಸೆಗಣಿ ಮಿಶ್ರಿತ ಬುಟ್ಟಿಗಳನ್ನು ಇಟ್ಟು ವಿವಿಧ ತರಕಾರಿ ಬೆಳೆಗಳನ್ನು ತಾರಸಿಯಲ್ಲಿಯೇ ಬೆಳೆಸಲಾಗಿದೆ. ಇದರ ವೀಕ್ಷಣೆ, ಖರೀದಿಗೂ ಅವಕಾಶ ಕಲ್ಪಿಸಲಾಗಿದೆ.


ಫ‌ಲಪುಷ್ಪಗಳ ವಿಶೇಷ ಆಕರ್ಷಣೆಗಳು

12 ಅಡಿ ಎತ್ತರದ ಶಿವಲಿಂಗಮೂರ್ತಿಗೆ ಕೆಂಪು, ಬಿಳಿ, ಹಳದಿ, ಗುಲಾಬಿ ಬಣ್ಣದ 3,100 ಗುಲಾಬಿ ಹೂವುಗಳ ಹಾಗೂ 75 ಕೆ.ಜಿ. ಚೆಂಡು ಹಾಗೂ ಸೇವಂತಿಗೆ ಪುಷ್ಪಗಳಿಂದ ಅಲಂಕಾರ.

5 ಅಡಿ ಎತ್ತರದ ನಂದಿ ಮೂರ್ತಿಗೆ 3,600 ಜರ್ಬೆರಾ ಹೂವುಗಳಿಂದ ಅಲಂಕಾರ.

ವಿವಿಧ ಪ್ರಾಣಿಗಳಿಗೆ 4,000 ಕಾರ್ನೇಷನ್‌ ಹೂವುಗಳಿಂದ, 1,000 ಆಲ್‌ಸ್ಟ್ರೋಮೇರಿಯನ್‌ ಲಿಲ್ಲಿ ಹೂವುಗಳಿಂದ ಮತ್ತು 25 ಕೆ.ಜಿ. ಮೆರಿಗೋಲ್ಡ್‌ ಕ್ರೈಸಾಂತೆಮಮ್‌ ಪುಷ್ಪಗಳಿಂದ ಆನೆ, ಚಿಟ್ಟೆ ಹಾಗೂ ಹುಲಿಗಳ ಆಕೃತಿಗೆ ಪುಷ್ಪ ಜೋಡಣೆ.

Advertisement

ವಿವಿಧ ಜಾತಿಯ ಪಾಪಸು ಕಳ್ಳಿಗಳ ಅಲಂಕಾರಿಕ ಜೋಡಣೆ ಹಾಗೂ ವರ್ಟಿಕಲ್‌ ಗಾರ್ಡನ್‌.

016 ಜಾತಿಯ ವಾರ್ಷಿಕ ಹಾಗೂ ಬಹುವಾರ್ಷಿಕ ವಿವಿಧ ಅಲಂಕಾರಿಕ ಪುಷ್ಪ ಕುಂಡಗಳ ಪ್ರದರ್ಶನ. 

ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಬೆಳೆಸಿದ ಗಿಡಗಳ ಪ್ರದರ್ಶನ ಹಾಗೂ ಇಲಾಖಾ ದರದಲ್ಲಿ ಮಾರಾಟ.

ಮಟ್ಟುಗುಳ್ಳ ಹಾಗೂ ಉಡುಪಿ ಮಲ್ಲಿಗೆ ಬೆಳೆ ಸಂಗ್ರಹಾಲಯ ವೀಕ್ಷಣೆಗೆ ಅವಕಾಶ.

ಉಡುಪಿ ಹೂವುಗಳು, ಕ್ಯಾಕ್ಟಸ್‌ಗಳ ಪ್ರದರ್ಶನ, ಗಿಡಗಳ ಮಾರಾಟ ಇರಲಿದೆ.


Advertisement

Udayavani is now on Telegram. Click here to join our channel and stay updated with the latest news.

Next