Advertisement

ಫ್ರೂಟ್‌ ಇರ್ಫಾನ್‌ ಕೊಲೆ ಆರೋಪಿ ಸೆರೆ : ದಯಾನಾಯಕ್‌ ನೇತೃತ್ವದ ತಂಡದಿಂದ ಕಾರ್ಯಾಚರಣೆ

11:37 AM Nov 26, 2020 | sudhir |

ಮುಂಬೈ: ರಿಯಲ್‌ ಎಸ್ಟೇಟ್‌ ಉದ್ಯಮಿ ಫ್ರೂಟ್‌ ಇರ್ಫಾನ್‌ನನ್ನು ಈ ವರ್ಷ ಆಗಸ್ಟ್‌ನಲ್ಲಿ ಹುಬ್ಬಳ್ಳಿಯಲ್ಲಿ ಕೊಲೆ ಮಾಡಿದ ಉತ್ತರಪ್ರದೇಶದ ಅನೂಪ್‌ ಸಿಂಗ್‌ನನ್ನು (24) ಮುಂಬೈನ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಬಂಧಿಸಿದೆ.

Advertisement

ಉತ್ತರಪ್ರದೇಶದ ಬಲರಾಮಪುರದ ನಿವಾಸಿ ಗೊಲು ಅಲಿಯಾಸ್‌ ಅಂಕುರ್‌ ಸಿಂಗ್‌ ಅಲಿಯಾಸ್‌ ಅನೂಪ್‌ ಸಿಂಗ್‌ ಸುಪಾರಿ ಪಡೆದು
ಫ್ರೂಟ್‌ ಇರ್ಫಾನ್‌ನನ್ನು ಆ.6ರಂದು ಹತ್ಯೆ ಮಾಡಿದ್ದ. ಈ ಘಟನೆ ಬಳಿಕ ಸತತವಾಗಿ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ ಅನೂಪ್‌ನನ್ನು ಖಚಿತ ಸುಳಿವಿನ ಮೇಲೆ ದಯಾನಾಯಕ್‌ ನೇತೃತ್ವದ ಎಟಿಎಸ್‌ ತಂಡ ಮಂಗಳವಾರ ಸಂಜೆ ಅಂಧೇರಿಯಲ್ಲಿ ಬಲೆಗೆ ಬೀಳಿಸಿತ್ತು. ಬಲಿಯಾದ ಉದ್ಯಮಿಯ ಎದೆಗೆ ಗುಂಡು ಹಾರಿಸಿರುವುದಾಗಿ ಅನೂಪ್‌ ವಿಚಾರಣೆ ವೇಳೆ
ಒಪ್ಪಿದ್ದರು. ಅನೂಪ್‌ 2016ರಲ್ಲೇ ಒಮ್ಮೆ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಅವನನ್ನು ಮುಂಬೈನ ಅರ್ಥರ್‌ ರಸ್ತೆಯ ಬಂಧಿಖಾನೆಯಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ:ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಮೈಕ್ರೋಮ್ಯಾಕ್ಸ್: ನೋಟ್-1 Sold Out, 1B ಇಂದು ಬಿಡುಗಡೆ

ಅಲ್ಲೇ ಆತನಿಗೆ ನಿಪುಣ ಶೂಟರ್‌ಗಳ ಸಂಪರ್ಕ ಬಂದಿದ್ದು, ಜೈಲಿನಿಂದ ಬಿಡುಗಡೆಯಾದ ಕೂಡಲೇ ಇರ್ಫಾನ್‌ ಹತ್ಯೆಗೆ ಸುಪಾರಿ ಪಡೆದಿದ್ದ ಎಂದು ಪೊಲೀಸ್‌ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next