Advertisement

ಇಂದಿನಿಂದ ಹೈ.ಕ ಭಾಗದಲ್ಲಿ ಶಾಲಾ ಪ್ರಾರಂಭೋತ್ಸವ

06:43 AM Jun 10, 2019 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಸಿಲಿನ ಪ್ರಖರತೆ ಕಡಿಮೆಯಾದ ಕಾರಣ ಪ್ರಾಥಮಿಕ ಶಾಲೆಗಳ ಪ್ರಾರಂಭೋತ್ಸವ ಜೂ.14ರ ಬದಲಿಗೆ ಜೂ.10ರಿಂದ ಆಗಲಿದೆ. ಈಗಾಗಲೇ ಮೇ 29ರಿಂದ ಪ್ರೌಢ ಶಾಲೆಗಳು ಆರಂಭಗೊಂಡಿವೆ.

Advertisement

ರಾಜ್ಯಾದ್ಯಂತ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳು ಮೇ 29ರಿಂದ ಪ್ರಾರಂಭಗೊಂಡಿದ್ದು, ಪೂರ್ವ ನಿಗದಿಯಂತೆ ಜಿಲ್ಲೆಯಲ್ಲೂ ತರಗತಿಗಳು ಆರಂಭಗೊಳ್ಳಬೇಕಿತ್ತು. ಆದರೆ, ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ ದಾಖಲಾದ ಕಾರಣ ಮಕ್ಕಳ ಆರೋಗ್ಯದ ದೃಷ್ಟಿಯಿಂದಾಗಿ ಪ್ರಾಥಮಿಕ ಶಾಲೆಗಳ ಬೇಸಿಗೆ ರಜೆಯನ್ನು ಜೂ.14ರ ವರೆಗೆ ವಿಸ್ತರಿಸಲಾಗಿತ್ತು.

ಇದೀಗ ಜಿಲ್ಲಾದ್ಯಂತ ಮಳೆಯಾಗಿದ್ದರಿಂದ ಬಿಸಿಲಿನ ಧಗೆ ಕಡಿಮೆಯಾಗಿದ್ದು, ನಾಲ್ಕು ದಿನ ಮುಂಚಿತವಾಗಿ ಶಾಲೆಗಳು ಆರಂಭಿಸುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

10 ದಿನಗಳ ರಜೆ ಅವಧಿಯ ದಿನಗಳನ್ನು ಪ್ರತಿ ಶನಿವಾರ ಪೂರ್ಣದಿನವಾಗಿ ಮತ್ತು ಮಧ್ಯಂತರ ದಸರಾ ರಜೆ ಅವಧಿಯಲ್ಲಿ ಸರಿದೂಗಿಸಿಕೊಳ್ಳುವಂತೆ ಶಾಲೆಗಳಿಗೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next