Advertisement

ಇಂದಿನಿಂದ ಜನಜಾಗೃತಿ ಪಾದಯಾತ್ರೆ

07:10 AM Jan 12, 2019 | Team Udayavani |

ದಾವಣಗೆರೆ: ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವ ಹಾಗೂ ಸಹಜ ಶಿವಯೋಗದ ಅಂಗವಾಗಿ ಇಂದಿನಿಂದ 17ರವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

Advertisement

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಪ್ರತಿದಿನ ಬೆಳಗ್ಗೆ 7.30ರಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ಶನಿವಾರ ವಿರಕ್ತಮಠದಿಂದ ಪ್ರಾರಂಭವಾಗುವ ಪಾದಯಾತ್ರೆಯನ್ನು ಮೇಯರ್‌ ಶೋಭಾ ಪಲ್ಲಾಗಟ್ಟೆ ಉದ್ಘಾಟಿಸುವರು. ವಿರಕ್ತಮಠದಿಂದ ಪ್ರಾರಂಭವಾಗುವ ಪಾದಯಾತ್ರೆ ಮದಕರಿನಾಯಕ ವೃತ್ತ, ಸ್ವಾಗೇರಪೇಟೆ, ಕಾಯಿಪೇಟೆ, ವಿಜಯಲಕ್ಷ್ಮಿ ರಸ್ತೆಯ ಮೂಲಕ ವಿರಕ್ತಮಠಕ್ಕೆ ವಾಪಸ್ಸಾಗಲಿದೆ. ಭಾನುವಾರ ವಿರಕ್ತಮಠ- ಹಳೇಪೇಟೆ- ಗಾಂಧಿನಗರ- ವಿರಕ್ತಮಠ, ಸೋಮವಾರ ಬಂಬೂಬಜಾರ್‌ನ ಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣ ಮಂಟಪದಿಂದ ಪ್ರಾರಂಭ, 15ರಂದು ವಿನೋಬ ನಗರದ ಶಂಭುಲಿಂಗ ದೇವಸ್ಥಾನದಿಂದ ಪ್ರಾರಂಭವಾಗಿ ಈಡಿಗರ ವಿದ್ಯಾರ್ಥಿ ನಿಲಯದಲ್ಲಿ ಮುಕ್ತಾಯಗೊಳ್ಳಲಿದೆ. 16ರಂದು ಎಸ್‌ಪಿಎಸ್‌ ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ 17ರಂದು ಕೆಟಿಜೆ ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಸಂಚರಿಸಲಿದೆ. ಹೆಚ್ಚಿನ ಮಾಹಿತಿಗೆ ಮೊ: 99455-72979, 90089-40914, 90197-38735ಗೆ ಸಂಪರ್ಕಿಸಲು ಪ್ರಕಟಣೆ ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next