ಪೋರ್ಟ್‌ಗೆ ಸಂಸ್ಥೆ ನಡೆಸಲು ಸಾಧ್ಯವಿಲ್ಲದಂತಾಗಿದ್ದು, ಇದರಿಂದ ಹನುಮಾನ್ ಸಂಸ್ಥೆಯಲ್ಲಿ ದುಡಿಯುತ್ತಿರುವ ನೌಕರರ ಸಂಸಾರ ಬೀದಿಗೆ ಬೀಳುವ ಆತಂಕದಲ್ಲಿದೆ ಎಂದು ಹನುಮಾನ್ ಟ್ರಾನ್ಸ್‌ಪೊàರ್ಟ್ ಕಂಪೆನಿಯ ನೌಕರರ ಸಂಘದ ಅಧ್ಯಕ್ಷ ರಾಜ್‌ಸಾಬ್ ಹೇಳಿದರು.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹನುಮಾನ್ ಸಂಸ್ಥೆಯ ಆಡಳಿತ ನಿರ್ದೇಶಕರು ಆ. 8 ರಂದು ಕಾರ್ಮಿಕರ ಸಭೆ ಕರೆದು ಸಂಸ್ಥೆ ನಷ್ಟದಲ್ಲಿದ್ದು, ಇನ್ನು ಮುಂದೆ ನಡೆಸಲು ಸಾಧ್ಯವಿಲ್ಲ. ಸಂಸ್ಥೆ ಮುಚ್ಚುವ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದು, ಇದರಿಂದ 800 ರಿಂದ 1,000 ಕಾರ್ಮಿಕರು ಅತಂತ್ರರಾಗಿದ್ದಾರೆ. ಸರಕಾರಕ್ಕೆ ನಮ್ಮ ಮೇಲೆ ಕಳಕಳಿಯಿದ್ದರೆ ನರ್ಮ್ ಬಸ್ ಸಮಯ ಪಾಲನೆ ಮಾಡಲಿ, ಇಲ್ಲದಿದ್ದರೆ ನಿಲ್ಲಿಸಲಿ. ಇಲ್ಲದಿದ್ದರೆ ಖಾಸಗಿ ಸಹಿತ ಎಲ್ಲ ಬಸ್‌ಗಳನ್ನು ರಾಷ್ಟ್ರೀಕರಣ ಮಾಡಲಿ. ಅದು ಸಾಧ್ಯವಾಗದಿದ್ದಲ್ಲಿ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿರುವ ನಮಗೆ ಕಸ ಗುಡಿಸುವ ಸರಕಾರಿ ಕೆಲಸವಾದರೂ ನೀಡಲಿ ಎಂದರು. ರಾಜ್ಯದಲ್ಲಿ ಹಲವು ಆತ್ಮಹತ್ಯೆ ನಡೆಯುತ್ತಿದ್ದು, ಈಗ ಉಡುಪಿಯಲ್ಲಿ ರಾಜಕೀಯ ಪೈಪೋಟಿ, ಗುದ್ದಾಟದಿಂದಾಗಿ ಬಡ ಕಾರ್ಮಿಕರು ಸಂಕಷ್ಟದಲ್ಲಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಖಾಸಗಿ ಬಸ್ ನೌಕರರ ಆತ್ಮಹತ್ಯೆ ನಡೆದರೆ ಅಚ್ಚರಿಯಿಲ್ಲ. ಬಡ ಕಾರ್ಮಿಕರ ಮನವಿಯನ್ನು ಪರಿಶೀಲಿಸಿ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ನ್ಯಾಯ ಒದಗಿಸಿ. ನಮ್ಮ ಮನವಿ ತಿರಸ್ಕರಿಸಿದರೆ ನೌಕರರೆಲ್ಲ ಸೇರಿ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಉಪಾಧ್ಯಕ್ಷ ಶೈಲೇಂದ್ರ ಶೆಟ್ಟಿ ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರಾದ ರಾಮಚಂದ್ರ, ದೇವರಾಜ ಎಂ. ಎನ್. ಉಪಸ್ಥಿತರಿದ್ದರು.