Advertisement

ಸಭಾಭವನದಿಂದಪಾರ್ಕಿಂಗ್‌ ಸಮಸ್ಯೆ,ಶಬ್ದ ಮಾಲಿನ್ಯ;ಮುಚ್ಚಲುಪುರಸಭೆಸೂಚನೆ

12:42 PM May 26, 2018 | |

ಮೂಡಬಿದಿರೆ: ಮಾಸ್ತಿ ಕಟ್ಟೆಯ ಸಭಾಭವನವೊಂದರಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಬಳಸುವ ಧ್ವನಿವರ್ಧಕ ಗಳಿಂದ ಪರಿಸರದಲ್ಲಿ ಶಬ್ದಮಾಲಿನ್ಯ, ಉಂಟಾಗುವುದರಿಂದ ಬಗ್ಗೆ ಪುರಸಭೆಯು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಪುರಸಭೆಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಭಾಭವನವನ್ನು ಮುಚ್ಚುವಂತೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರು ನೋಟಿಸ್‌ ನೀಡಿದ್ದಾರೆ.

Advertisement

ಸಭಾಭವನದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು ಈ ವೇಳೆ ಧ್ವನಿವರ್ಧಕಗಳ ಶಬ್ದ ಜೋರಾಗಿ ಕೇಳಿ ಬರುತ್ತಿದ್ದು, ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ಅಲ್ಲಿ ಸಮಾರಂಭ ನಡೆಯುವ ಸಂದರ್ಭ ಅಧಿಕ ವಾಹನಗಳನ್ನು ನಿಲ್ಲಿಸಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತಿರುವ ಹಿನ್ನೆಲೆಯಲ್ಲಿ ಪುರಸಭೆಗೆ ದೂರು ನೀಡಿದ್ದರು. ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರು ದೂರುದಾರರನ್ನು ಪುರಸಭೆಗೆ ಕರೆಸಿ ಪುರಸಭೆಯ ಸಿಬಂದಿ ಜತೆ ಚರ್ಚಿಸಿ ಸಭಾಭವನವನ್ನು ಮುಚ್ಚುವಂತೆ ಸಂಬಂಧಪಟ್ಟವರಿಗೆ ಸೂಚಿಸಿ ಕ್ರಮಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಪುರಸಭಾ ಕಂದಾಯ ಅಧಿಕಾರಿ ಧನಂಜಯ, ಮ್ಯಾನೇಜರ್‌ ಸೂರ್ಯ ಕಾಂತ ಖಾರ್ವಿ, ಪರಿಸರ ಅಭಿಯಂತೆ ಶಿಲ್ಪಾ, ಸಿಬಂದಿ ಸುಧೀಶ್‌ ಹೆಗ್ಡೆ ಸಭಾಭವನಕ್ಕೆ ಸಂಬಂಧಪಟ್ಟ ಅಶೋಕ್‌ ಮತ್ತು ಹಲವು ನಾಗರಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next