Advertisement

ಲೆಬನಾನ್ ಪ್ರಧಾನಿ ನಿಗೂಢ ನಾಪತ್ತೆ, ರಾಜೀನಾಮೆ: ಶೀಘ್ರವೇ ಲೆಬನಾನ್ ಗೆ!

04:14 PM Nov 13, 2017 | Team Udayavani |

ಬೈರುತ್ : ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಲೆಬನಾನ್ ಪ್ರಧಾನಿ ಸಾದ್ ಹ್ಯಾರಿರಿ ತನ್ನ ಬಗ್ಗೆ ಹಬ್ಬರುವ ಊಹಾಪೋಹಗಳ ವರದಿಯನ್ನು ತಳ್ಳಿಹಾಕಿದ್ದಾರೆ. ಅಲ್ಲದೇ ತಾನು ಶೀಘ್ರವಾಗಿ ಲೆಬನಾನ್ ಗೆ ಮರಳುವುದಾಗಿ ತಿಳಿಸಿದ್ದಾರೆ.

Advertisement

ಕಳೆದ ವಾರ ವಿದೇಶ ಪ್ರವಾಸದ ಭಾಗವಾಗಿ ಮೊದಲು ರಾಜಕೀಯ ಆಶ್ರಯದಾತ ಸೌದಿ ಅರೇಬಿಯಾಗೆ ಭೇಟಿ ನೀಡಿದ್ದರು. ಆದರೆ ಮರುದಿನವೇ ಅನಿರೀಕ್ಷಿತವಾಗಿ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಸೌದಿ ರಾಜಧಾನಿ ರಿಯಾದ್ನಲ್ಲಿ ವೀಡಿಯೋ ಸಂದೇಶವೊಂದರಲ್ಲಿ ಪ್ರಕಟಿಸಿದ್ದರು. ಇದೀಗ ರಾಜೀನಾಮೆ ನೀಡಿದ 8 ದಿನಗಳ ಬಳಿಕ ಸೌದಿ ಅರೇಬಿಯಾ ರಾಜಧಾನಿ ರಿಯಾದ್ ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಪ್ರತಿಕ್ರಿಯೆ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಭಾನುವಾರ ಫೂಚರ್ ಟಿವಿ ಜತೆ ಮಾತನಾಡಿದ ಅವರು, ಸೌದಿ ಅರೇಬಿಯಾದಲ್ಲಿ ನಾನು ಮುಕ್ತವಾಗಿದ್ದೇನೆ. ನನಗೆ ಪೂರ್ಣಪ್ರಮಾಣದ ಸ್ವಾತಂತ್ರ್ಯ ಇದೆ. ಆದರೆ ನನ್ನ ಕುಟುಂಬವನ್ನೂ ನೋಡಬೇಕೆಂಬ ಹಂಬಲವಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಲೆಬನಾನ್ ಗೆ ಮರಳುವ ಯೋಚನೆಯೂ ಇದೆ ಎಂದು ತಿಳಿಸಿದ್ದಾರೆ.ನಾನೇನು ತಿಂಗಳುಗಳ ಬಗ್ಗೆ ಮಾತನಾಡುತ್ತಿಲ್ಲ, ಕೆಲವು ದಿನಗಳಲ್ಲಿಯೇ ಲೆಬನಾನ್ ಗೆ ವಾಪಸ್ ಆಗುವುದಾಗಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಸೌದಿ ಅರೇಬಿಯಾದಲ್ಲಿ ಭಾರಿ ಭ್ರಷ್ಟಾಚಾರ ವಿರೋಧಿ ಸಮರದ ನೆಪದಲ್ಲಿ ರಾಜಮನೆತನದ ಹಲವು ರಾಜಕುಮಾರರನ್ನು ಬಂಧಿಸಿ ಜೈಲಿಗೆ ತಳ್ಳಲಾಗಿದೆ. ಲೆಬನಾನ್‌ನಲ್ಲಿ ನೆಲೆಸಿರುವ ಸೌದಿಯ ಶ್ರೀಮಂತ ಉದ್ಯಮಿಗಳು ಕೂಡಲೇ ಸೌದಿಗೆ ಹಿಂದಿರುಗಬೇಕೆಂದು ಸೌದಿ ದೊರೆ ಗುರುವಾರ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ  ಯುದ್ಧ ಕಾರ್ಮೋಡದ ಪರಿಸ್ಥಿತಿ ತಲೆದೋರಲಿದೆ ಎಂದು ವಿಶ್ಲೇಷಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next