Advertisement
ಬಿಎನ್‌ಸಿಎಪಿ ರೇಟಿಂಗ್: ಭಾರತದಲ್ಲಿ ಆರಂಭಿಸಿರುವ ಎನ್‌ಸಿಎಪಿಗೆ ಭಾರತ್ ನ್ಯೂ ಕಾರ್ ಅಸೆಸೆ¾ಂಟ್ ಪ್ರೋಗ್ರಾಂ(ಬಿಎನ್‌ಸಿಎಪಿ) ಎಂದು ನಾಮಕರಣ ಮಾಡಲಾಗಿದೆ. ಅ.1ರಿಂದ ಕಾರ್ಯಚಟುವಟಿಕೆ ಆರಂಭವಾಗಲಿದೆ. ವಾಹನದ ಸುರಕ್ಷತೆಯ ಕುರಿತು ಇದು ರೇಟಿಂಗ್ ನೀಡಲಿದೆ.
ಇದು ಗರಿಷ್ಠ ಎಂಟು ಪ್ರಯಾಣಿಕರು ಕುಳಿತುಕೊಳ್ಳಬಹುದಾದ ಅಥವಾ ಗರಿಷ್ಠ 3.5 ಟನ್ ತೂಕದ ಕಾರುಗಳ ಸುರಕ್ಷತೆಯ ಸಾಮರ್ಥ್ಯವನ್ನು ಅಳೆಯಲಿದೆ. ಜಪಾನ್, ಅಮೆರಿಕದಂತಹ ಗುಣಮಟ್ಟದ ಶ್ರೇಣಿಯಲ್ಲಿಯೇ ಭಾರತದ ರಸ್ತೆ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಬಿಎನ್‌ಸಿಎಪಿ ಜಾರಿಗೆ ತರಲಾಗಿದೆ. ಹೇಗೆ ಮಾಪನ?
ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮುನ್ನ ಕಾರಿನ ಪ್ರಂಟಲ್ ಇಂಪ್ಯಾಕ್ಟ್ ಟೆಸ್ಟ್, ಸೈಡ್ ಇಂಪ್ಯಾಕ್ಟ್ ಟೆಸ್ಟ್ ಮತ್ತು ಪೋಲ್ ಸೈಡ್ ಇಂಪ್ಯಾಕ್ಟ್ ಟೆಸ್ಟ್ ನಡೆಸಲಾಗುತ್ತದೆ. ಅಂದರೆ ಕಾರಿನ ಮುಂಭಾಗ, ಬದಿ ಮತ್ತು ಹಿಂಭಾಗ ಢಿಕ್ಕಿ ಹೊಡೆಸಿ, ಪರೀಕ್ಷೆ ನಡೆಸಲಾಗುತ್ತದೆ. ಅನಂತರ ದಕ್ಷತೆ ಆಧಾರದ ಮೇಲೆ ರೇಟಿಂಗ್ ನೀಡಲಾಗುತ್ತದೆ. ಗರಿಷ್ಠ 5 ಸ್ಟಾರ್‌ಗಳವರೆಗೆ ಬಿಎನ್‌ಸಿಎಪಿ ರೇಟಿಂಗ್ ನೀಡಲಿದೆ. ಈ ಸುರಕ್ಷತಾ ರೇಟಿಂಗ್ ಗಮನಿಸಿ ಗ್ರಾಹಕರು ಕಾರುಗಳನ್ನು ಖರೀದಿಸುತ್ತಾರೆ.