Advertisement
ಹೊಸದಿಲ್ಲಿಯ ಕೆಡಿ ಜಾಧವ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಲೀಗ್‌ನಲ್ಲಿ 6 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಜ. 17 ಮತ್ತು 18ರಂದು ಸೆಮಿಫೈನಲ್ ಮತ್ತು ಜ. 19ರಂದು ಫೈನಲ್ ಪಂದ್ಯ ನಡೆಯಲಿದೆ. ಕೂಟದ ಒಟ್ಟಾರೆ ಪ್ರಶಸ್ತಿ ಮೊತ್ತ 15 ಕೋಟಿ ರೂ. ಆಗಿರಲಿದೆ.
ಅಮೀರ್ ಖಾನ್ ನಟಿಸಿದ, ಕುಸ್ತಿಪಟು ಜೀವನಾಧಾರಿತ ಸಿನಿಮಾ “ದಂಗಲ್’ ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಗಳಿಕೆ ಮಾಡಿದೆ. ಈ ದಂಗಲ್ ಜ್ವರ ಸೋಮವಾರದಿಂದ ಆರಂಭವಾಗಲಿರುವ ಪ್ರೊ ಕುಸ್ತಿ ಲೀಗ್‌ನ 2ನೇ ಆವೃತ್ತಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸಿನಿಮಾದ ಪ್ರಭಾವದಿಂದ ಹೆಚ್ಚಿನ ಅಭಿಮಾನಿಗಳು ಕ್ರೀಡಾಂಗಣಕ್ಕೆ ಲಗ್ಗೆ ಇಡುವ ನಿರೀಕ್ಷೆ ಇದೆ. ಖ್ಯಾತ ಮಹಿಳಾ ಕುಸ್ತಿಪಟುಗಳಾದ ಬಬಿತಾ ಮತ್ತು ಗೀತಾ ಅವರನ್ನು ರೂಪಿಸಿದ ಮಹಾವೀರ್ ಸಿಂಗ್ ಜೀವನಾಧಾರಿತವಾಗಿ ಸಿನಿಮಾ ಇದಾಗಿದೆ.