Advertisement
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ಯಾತ್ರೆಯ ನೇತೃತ್ವ ವಹಿ ಸಿದ್ದು, 150 ದಿನಗಳ ಕಾಲ ಪಾದಯಾತ್ರೆ ನಡೆಸುವರು. ಅಷ್ಟೇ ಅಲ್ಲ, ವಾಸ್ತವ್ಯಕ್ಕಾಗಿ ರೂಪಿಸಿರುವ ಕಂಟೈನರ್‌ನಲ್ಲೇ ರಾಹುಲ್ ವಾಸಿಸುವರು. ಯಾತ್ರೆ ಅಂಗವಾಗಿ ಮಂಗಳವಾರ ರಾತ್ರಿಯೇ ರಾಹುಲ್ ಗಾಂಧಿಯವರು ತಮಿಳುನಾಡಿಗೆ ಆಗಮಿಸಿದ್ದರು. ಬುಧವಾರ ಬೆಳಗ್ಗೆ ಶ್ರೀಪೆರಂಬ ದೂರಿಗೆ ತೆರಳಿ ತಂದೆ ರಾಜೀವ್ ಗಾಂಧಿ ಯವರ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಅಲ್ಲಿಯೇ ಕೊಂಚ ಹೊತ್ತು ಧ್ಯಾನಿಸಿ ಬಳಿಕ ರಾಹುಲ್ ಕನ್ಯಾಕುಮಾರಿಗೆ ತೆರಳಿದರು. ಇವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾಥ್ ನೀಡಿದರು.
ಕನ್ಯಾಕುಮಾರಿಯಲ್ಲಿ ಯಾತ್ರೆ ಆರಂಭಿ ಸಿದ ರಾಹುಲ್‌ಗೆ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಭಾರತದ ಧ್ವಜ ಹಸ್ತಾಂ ತರಿಸಿ ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು. ವಿವೇಕಾನಂದ ಪ್ರತಿಮೆಗೆ ರಾಹುಲ್ ಗಾಂಧಿ ಪುಷ್ಪನಮನ ಸಲ್ಲಿಸಿದರು. ಕೇಂದ್ರದ ವಿರುದ್ಧ ವಾಗ್ಧಾಳಿ
ಕನ್ಯಾಕುಮಾರಿಯಲ್ಲಿ ನಡೆದ ಸಭೆಯಲ್ಲಿ ರಾಹುಲ್, ಕೇಂದ್ರ ಸರಕಾರದ ವಿರುದ್ಧ ನೇರ ವಾಗ್ಧಾಳಿ ನಡೆಸಿದರು. ಸದ್ಯ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ಭಾರತೀಯ ಧ್ವಜದ ಮೇಲೆ ದಾಳಿ ನಡೆಯುತ್ತಿದೆ ಎಂದು ದೂಷಿಸಿದರು.
Related Articles
Advertisement
ಭಾರತದ ಧ್ವಜವನ್ನು ಯಾರೋ ಕೊಡುಗೆಯಾಗಿ ಕೊಟ್ಟಿದ್ದಲ್ಲ, ಸುಲಭವಾಗಿಯೂ ದಕ್ಕಿದ್ದಲ್ಲ. ಭಾರತೀಯರೇ ಗಳಿಸಿಕೊಂಡಿದ್ದು ಎಂದರು. ಈ ಧ್ವಜವು ಪ್ರತಿಯೊಬ್ಬ ಭಾರತೀಯನಿಗೂ ರಕ್ಷಣೆ ನೀಡುತ್ತದೆ. ಎಲ್ಲರಿಗೂ ತಮ್ಮ ತಮ್ಮ ಧರ್ಮಗಳ ಆಚರಣೆಗೂ ಖಾತ್ರಿ ನೀಡಿದೆ. ಆದರೆ, ಇಂದು ಇದೇ ಧ್ವಜಕ್ಕೆ ಧಕ್ಕೆ ಬಂದಿದೆ. ಹಾಗಾಗಿ ಜನರು ಎಚ್ಚೆತ್ತು, ರಾಷ್ಟ್ರಧ್ವಜದ ಹಿಂದಿರುವ ಒಗ್ಗಟ್ಟಿನ ಮೌಲ್ಯವನ್ನು ಉಳಿಸಬೇಕಿದೆ ಎಂದು ಕರೆನೀಡಿದರು.
ಸದ್ಯ ಕೇಂದ್ರ ಸರ್ಕಾರವು ಎಲ್ಲಾ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ. ಭಾರತ ಹಿಂದೆಂದೂ ಕಾಣದ ಆರ್ಥಿಕ ಸಮಸ್ಯೆಯನ್ನು ಇಂದು ಎದುರಿಸುತ್ತಿದೆ. ನಿರುದ್ಯೋಗ ತಾಂಡವವಾಡುತ್ತಿದ್ದು, ದೇಶ ವಿನಾಶದತ್ತ ಸಾಗುತ್ತಿದೆ ಎಂದು ಟೀಕಿಸಿದರು.
ಈ ಕಾರ್ಯಕ್ರಮದಲ್ಲಿ ರಾಜಸ್ಥಾನ ಮತ್ತು ಛತ್ತೀಸ್‌ಗಡದ ಮುಖ್ಯಮಂತ್ರಿಗಳು, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರು ಭಾಗಿಯಾಗಿದ್ದರು.
ಪರಿವಾರ ಜೋಡೋ ಯಾತ್ರೆ!ಕಾಂಗ್ರೆಸ್ ಜೋಡೋ ಯಾತ್ರೆಯ ಭಿತ್ತಿಪತ್ರವೊಂದರಲ್ಲಿ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಫೋಟೋ ಕಾಣಿಸಿಕೊಂಡಿರುವುದನ್ನು ಬಿಜೆಪಿ ಟೀಕಿಸಿದೆ. ಇದು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಅಲ್ಲ, ಬದಲಾಗಿ ಪರಿವಾರ ಜೋಡೋ ಯಾತ್ರೆ ಎಂದು ವ್ಯಂಗ್ಯವಾಡಿದೆ. ವಿಶೇಷವೆಂದರೆ, ತಮ್ಮ ಫೋಟೋ ಇದ್ದ ಫ್ಲೆಕ್ಸ್ ಅನ್ನು ರಾಬರ್ಟ್ ವಾದ್ರಾ ಅವರೇ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಇದು ಪರಿವಾರ ಜೋಡೋ ಮತ್ತು ಭ್ರಷ್ಟಾಚಾರ ಜೋಡೋ ಎಂದು ಟೀಕಿಸಿದೆ. ಸೆ. 30ರಿಂದ ರಾಜ್ಯದಲ್ಲಿ ಯಾತ್ರೆ
ಮೈಸೂರು ಮೂಲಕ ಯಾತ್ರೆಯು ಸೆ. 30ಕ್ಕೆ ಕರ್ನಾಟಕ ಪ್ರವೇ ಶಿಸಲಿದ್ದು, 20 ದಿನ 511 ಕಿ.ಮೀ.ಗಳನ್ನು ಪಯಣಿಸಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹಿತ ಹಲವು ನಾಯಕರು ಯಾತ್ರೆಯಲ್ಲಿ ಭಾಗಿಯಾಗುವರು.