Advertisement

UP ಅಂಬೇಡ್ಕರ್‌ ಪ್ರತಿಮೆ: ನೀಲಿಯಿಂದ ಕೇಸರಿ, ಮತ್ತೆ ನೀಲಿ ಬಣ್ಣಕ್ಕೆ

12:35 PM Apr 10, 2018 | udayavani editorial |

ಲಕ್ನೋ : ಉತ್ತರ ಪ್ರದೇಶದ ಬದಾವೂ ನಲ್ಲಿ ನೀಲಿ ಬಣ್ಣ ಹೊಂದಿದ್ದ ಡಾ. ಬಿ ಆರ್‌ ಅಂಬೇಡ್ಕರ್‌ ಪ್ರತಿಮೆಯನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ ಬಳಿಕ ಸ್ಥಳೀಯಾಡಳಿತೆ ಅದನ್ನು ಬದಲಾಯಿಸಿತ್ತು. ಆದರೆ ಹೊಸ ಪ್ರತಿಮೆ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿತ್ತು. ಇದನ್ನು ಸಹಿಸದ ಬಿಎಸ್‌ಪಿ ನಾಯಕ ಹಿಮೇಂದ್ರ ಗೌತಮ್‌ ಅವರು ಅಂಬೇಡ್ಕರ್‌ ಪ್ರತಿಮೆಗೆ ಮೊದಲಿನಂತೆ ನೀಲಿ ಬಣ್ಣವನ್ನು ಕೊಡಿಸಿದರು ! 

Advertisement

ಬಿಎಸ್‌ಪಿ ನಾಯಕನ ಉಸ್ತುವಾರಿಯಲ್ಲಿ ಪ್ರತಿಮೆಯ ರೀ-ಪೇಂಟಿಂಗ್‌ ನಡೆಯುತ್ತಿರುವ ವಿಡಿಯೋ ಚಿತ್ರಿಕೆಯನ್ನು ಎಎನ್‌ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ. 

#WATCH Badaun: The damaged statue of BR Ambedkar which was rebuilt and painted saffron, re-painted blue by BSP Leader Himendra Gautam. pic.twitter.com/Tntf7shNAN

— ANI UP (@ANINewsUP) April 10, 2018

Advertisement

ಬದಾವೂ ನ ಕನ್ವರ್‌ಗಾಂವ್‌ ಪ್ರದೇಶದಲ್ಲಿನ ದುಗ್ರಯಾ ಗ್ರಾಮದಲ್ಲಿರುವ ಅಂಬೇಡ್ಕರ್‌ ಪ್ರತಿಮೆಯನ್ನು ಕಳೆದ ಎ.7ರಂದು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೈದಿದ್ದರು. ಇದರಿಂದ ತೀವ್ರ ಪ್ರತಿಭಟನೆ ವ್ಯಕ್ತವಾದಾಗ ಸ್ಥಳೀಯಾಡಳಿತೆಯು ಹೊಸ ಪ್ರತಿಮೆಯನ್ನು ಅವಸರದಲ್ಲಿ ಆಗ್ರಾದಿಂದ ತರಿಸಿಕೊಂಡು ಸ್ಥಾಪಿಸಿತ್ತು. ಆಗ ಅದರ ಬಣ್ಣ ಕೇಸರಿಯಾಗಿತ್ತು.

ಇದರಲ್ಲಿ ಬಿಜೆಪಿಯ ಕೈವಾಡವೇನೂ ಇಲ್ಲವೆಂದು ಪಕ್ಷವು ಸ್ಪಷ್ಟಪಡಿಸಿತ್ತು. ಆದರೆ ಕೇಸರಿ ಬಣ್ಣ ಸಹಿಸದ ಬಿಎಸ್‌ಪಿ ನಾಯಕ ಇದೀಗ ಪ್ರತಿಮೆಗೆ ನೀಲಿ ಬಣ್ಣ ಕೊಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next