Advertisement
ಅವರು ರವಿವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ವತಿಯಿಂದ ನಡೆದ 19ನೇ ವರ್ಷದ ಭಜನ ತರಬೇತಿ ಕಮ್ಮಟದ ಸಮಾರೋಪ ಹಾಗೂ ಭಜನೋತ್ಸವದಲ್ಲಿ ಮಾತನಾಡಿದರು.
ನಾವಿರುವಲ್ಲಿಗೆ ಭಗವಂತನನ್ನು ಒಲಿಸಿಕೊಳ್ಳುವುದು ಭಜನೆ ಸಂಸ್ಕೃತಿಯ ವಿಶೇಷ. ಭಜನೆ ಮಾಡುವವರಿಗೆ ಶಿಸ್ತು, ಕ್ರಿಯಾಶೀಲ ಗುಣ, ಕಾರ್ಯಕ್ಷಮತೆ, ಕೌಶಲ ಇರುತ್ತದೆ. ಮನುಷ್ಯರನ್ನು ಪ್ರೀತಿಸುವಾಗ ಕಾಮನೆ ಇರುತ್ತದೆ. ಆದರೆ ನಿಷ್ಕಾಮದಿಂದ ಭಗವಂತನನ್ನು ಪ್ರೀತಿಸಿದರೆ ಆತನ ಒಲುಮೆ ದೊರೆಯಬಲ್ಲದು. ಧರ್ಮಶ್ರದ್ಧೆಯ ಭಾರತವನ್ನು, ಭಕ್ತಿ ಸಂಸ್ಕೃತಿಯ ಭಾರತವನ್ನು, ದೈವಭಕ್ತಿಯ ಅನಾವರಣವನ್ನು, ಹಳ್ಳಿಗಳಲ್ಲಿ ಪರಮಾತ್ಮನ ನಾಮಸ್ಮರಣೆಯನ್ನು ಕೇಳುವಂತೆ ಮಾಡುವುದೇ ಇಂತಹ ಕಮ್ಮಟಗಳ ಉದ್ದೇಶ. ಭಕ್ತಿ ಎಂದರೆ ಅಂತರಗಂಗೆ. ಇದು ಜಲಪಾತವಾದರೆ ಭಜನೆ ಎಂದರು. ಉದ್ಯೋಗ ಸೃಷ್ಟಿ
ಸಕ್ಕರೆ ಮತ್ತು ಸಣ್ಣ ಕೈಗಾರಿಕಾ ಸಚಿವೆ ಡಾ| ಎಂ.ಸಿ. ಮೋಹನ ಕುಮಾರಿ (ಗೀತಾ ಮಹದೇವ ಪ್ರಸಾದ್) ಅವರು ಭಕ್ತಿಯ ಆರಾಧನೆಗೆ ಇಡಿಯ ಧರ್ಮಸ್ಥಳ ತೆರೆದುಕೊಂಡಿದೆ ಎಂದು ಹೇಳಿ, ದ.ಕ. ಜಿಲ್ಲೆಯಲ್ಲಿ 16 ಸಣ್ಣ ಕೈಗಾರಿಕೆಗಳು, 11 ದೊಡ್ಡ ಕೈಗಾರಿಕೆಗಳು, 1 ಐಟಿ ಇಂಡಸ್ಟ್ರಿ, 1 ಮಲ್ಟಿ ಪ್ರಾಡಕ್ಟ್ ಇಂಡಸ್ಟ್ರಿ ಇದೆ. ಮುಂದೆ ಸಣ್ಣ ಕೈಗಾರಿಕೆಗಳನ್ನು ಹೆಚ್ಚಿಸುವ ಮೂಲಕ ಸ್ಥಳೀಯ ಸಂಪನ್ಮೂಲ ಬಳಕೆ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದರು.
Related Articles
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಭೋಗ ಜೀವನ ಯೋಗ ಜೀವನ ಎಂಬೆರಡು ವಿಧಾನಗಳಿದ್ದು ಬದುಕಿನಲ್ಲಿ ಸಂತೋಷ,ತೃಪ್ತಿ, ನೆಮ್ಮದಿ ಧನ್ಯತೆಗೆ ಭೋಗ ಜೀವನ ಬೇಕು. ಆದರೆ ಭೋಗದ ದಾಸ
ರಾಗದೇ ನಮ್ಮತನ ಕಳೆದುಕೊಳ್ಳದೇ ಹಿಡಿತದಲ್ಲಿಟ್ಟು ಬದುಕಬೇಕು. ಬಾಹ್ಯಾ ಕರ್ಷಣೆಗಳಿಗೆ ನಿಯಂತ್ರಣ ಹೇರಬೇಕು. ಭೋಗದ ದಾಸರಾಗದೇ ಭಗವಂತನ ದಾಸರಾಗಿ ಮನಸ್ಸಿನ ಮಾಲಿನ್ಯ ದೂರ ಮಾಡಬೇಕು ಎಂದರು.
Advertisement
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಹೇಮಾವತಿ ವೀ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್,ಸುಪ್ರಿಯಾ ಎಚ್. ಕುಮಾರ್, ಸಮಿತಿಯ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಬಿ. ಜಯರಾಮ ನೆಲ್ಲಿತ್ತಾಯ, ಡಾ| ಐ. ಶಶಿಕಾಂತ್ ಜೈನ್ ಉಪಸ್ಥಿತರಿದ್ದರು. ಕುಣಿತ ಭಜನೆ ಹಾಗೂ ಕುಳಿತು ಭಜನೆಯ ಪ್ರಾತ್ಯಕ್ಷಿಕೆ ನಡೆಯಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ, ಕಾರ್ಯದರ್ಶಿ ಮಮತಾ ರಾವ್ ವರದಿ ವಾಚಿಸಿದರು. ವೀರು ಶೆಟ್ಟಿ ವಂದಿಸಿದರು. ಶ್ರೀನಿವಾಸ ರಾವ್, ಪ್ರದೀಪ್ ನಿರ್ವಹಿಸಿದರು. ಭಜನೋತ್ಸವ
300 ಭಜನ ಮಂಡಳಿಗಳ 5,000 ಭಜಕರಿಂದ ಭಜನೋತ್ಸವ ನಡೆಯಿತು. ಈ ಬಾರಿ 13 ಜಿಲ್ಲೆಗಳ 115 ಮಂಡಳಿಗಳ 208 ಮಂದಿ ತರಬೇತಿಗೆ ಆಗಮಿಸಿದ್ದರು. ಶಂಕರ್ ಶ್ಯಾನುಭಾಗ್ ಬೆಂಗಳೂರು, ಬಿ.ಕೆ. ಸುಮಿತ್ರಾ ಬೆಂಗಳೂರು, ರಾಮಕೃಷ್ಣ ಕಾಟುಕುಕ್ಕೆ ಕಾಸರಗೋಡು, ಉಷಾ ಹೆಬ್ಟಾರ್ ಮಣಿಪಾಲ, ಮನೋರಮಾ ತೋಳ್ಪಾಡಿತ್ತಾಯ ಧರ್ಮಸ್ಥಳ, ದೇವದಾಸ ಪ್ರಭು ಬಂಟ್ವಾಳ, ಮೋಹನದಾಸ ಶೆಣೆೈ ಮಂಗಳೂರು, ಮಂಗಲದಾಸ್ ಗುಲ್ವಾಡಿ ಮಂಗಳೂರು, ಈರಪ್ಪ ಕೆ. ಪತ್ತಾರ್ ಬೈಲಹೊಂಗಲ, ರಮೇಶ್ ಕಲ್ಮಾಡಿ, ಶಂಕರ್ ಉಡುಪಿ ತರಬೇತಿ ನೀಡಿದ್ದರು.