Advertisement

ಡಿ.5ರಿಂದ 2 ಲಕ್ಷ ಮೀರುವ ವಹಿವಾಟಿಗೆ ಪ್ಯಾನ್‌ ಕಾರ್ಡ್‌ ಕಡ್ಡಾಯ

03:44 PM Nov 26, 2018 | Team Udayavani |

ಹೊಸದಿಲ್ಲಿ : ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ತನ್ನ ಅಧಿಸೂಚನೆಯ ಮೂಲಕ ಆದಾಯ ತೆರಿಗೆ ಕಾಯಿದೆಯ ನಿಯಮಗಳಿಗೆ ತಿದ್ದುಪಡಿ ತಂದಿದ್ದು  ಡಿ.5ರಂದು ಇದು ಜಾರಿಗೆ ಬರಲಿದೆ ಎಂದು ಹೇಳಿದೆ. 

Advertisement

ಅಂತೆಯೇ ಇನ್ನು ಮುಂದೆ 2 ಲಕ್ಷ ರೂ. ಮೀರುವ ಯಾವುದೇ ಹಣಕಾಸು ವಹಿವಾಟಿಗೆ ಪ್ಯಾನ್‌ ಕಾರ್ಡ್‌ ಕಡ್ಡಾಯವಾಗುತ್ತದೆ.  ಮಾತ್ರವಲ್ಲದೆ ಬ್ಯಾಂಕ್‌ ಖಾತೆ ತೆರೆಯುವುದರ ಸಹಿತ ಗುರುತು ಪತ್ರ ಸಾಕ್ಷ್ಯವಾಗಿಯೂ ಪ್ಯಾನ್‌ ಕಾರ್ಡ್‌ ಕಡ್ಡಾಯವಾಗಲಿದೆ.

1961ರ ಆದಾಯ ತೆರಿಗೆ ಕಾಯಿದೆ ಸೆ.295ರೊಂದಿಗೆ ಓದಲ್ಪಡಬೇಕಿರುವ ಎ.139ಎ ಪ್ರಕಾರ ಉಪಲಬ್ಧವಿರುವ ಅಧಿಕಾರಗಳ ಪ್ರಕಾರ ಆದಾಯ ತೆರಿಗೆ ಕಾಯಿದೆ ನಿಮಯಗಳಿಗೆ ತಿದ್ದುಪಡಿ ತರಲಾಗಿದೆ ಎಂದು ಸಿಬಿಡಿಟಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next