Advertisement
ಕಾಕೋಳು ಸರ್ಕಾರಿ ಶಾಲೆಯಲ್ಲಿ ಕಲಿತು ಭವಿಷ್ಯ ಕಟ್ಟಿಕೊಂಡ ಹಳೇ ವಿದ್ಯಾರ್ಥಿಗಳು, 25 ವರ್ಷಗಳ ಬಳಿಕ ತಮ್ಮ ಶಿಕ್ಷಕರ ಇಂದಿನ ವಿಳಾಸ ಪತ್ತೆ ಮಾಡಿ, ಅವರನ್ನೆಲ್ಲ ಕಾರ್ಯಕ್ರಮಕ್ಕೆ ಕರೆದು, ಗೌರವಿಸುವ ಜತೆಗೆ, ದಿನವಿಡೀ ಅವರೊಂದಿಗೆ ಬೆರೆತು ನೆನಪುಗಳ ಮೆಲುಕುಹಾಕಿದರು.
Related Articles
Advertisement
ಮುಖಂಡ ರಫೀಕ್ ಪಾಷ ಮಾತನಾಡಿ, ನಾವೆಷ್ಟೇ ದೊಡ್ಡ ಹುದ್ದೆ ಅಲಂಕರಿಸಿದರೂ ಶಿಕ್ಷಣದ ದಾರಿ ತೋರಿದ ಗುರುವಿಗೆ ಚಿರರುಣಿಗಳಾಗಿರಬೇಕು. ಒಬ್ಬ ವಿದ್ಯಾರ್ಥಿ ಸಾಧನೆ ಮಾಡಿದಾಗ ಪೋಷಕರಿಗಿಂತ ಹೆಚ್ಚು ಹೆಮ್ಮೆ ಪಡುವವವರು ಗುರುಗಳು ಎಂದು ಅಭಿಪ್ರಾಯಪಟ್ಟರು.
ಹಳೆ ವಿದ್ಯಾರ್ಥಿನಿ ನಳಿನಾಕ್ಷಿ ಮಾತನಾಡಿ, ಇಲ್ಲಿ ಕಲಿತ ನಾವು ಇಂದು ಎಲ್ಲೋ ಬದುಕು ಕಟ್ಟಿಕೊಂಡಿದ್ದೇವೆ. ವಿದ್ಯಾರ್ಥಿ ಜೀವನದಲ್ಲಿ ನಮ್ಮ ತುಂಟಾಟಗಳನ್ನು ಮನ್ನಿಸಿ ನಮ್ಮ ಬದುಕನ್ನು ಹಸನಾಗಿಸಿದ ಗುರುಗಳನ್ನು ಗೌರವಿಸುವುದೇ ಒಂದು ಸಂಭ್ರಮ ಎಂದರು.
ಹಳೇ ವಿದ್ಯಾರ್ಥಿ ಸಂಘ: ಹಳೆ ವಿದ್ಯಾರ್ಥಿಗಳ ಮುಖಂಡರಾದ ರಾಜಣ್ಣ,ನರಸಿಂಹಮೂರ್ತಿ, ಅನ್ನಪೂರ್ಣ,ಶ್ರೀನಿವಾಸ್, ರಾಜು, ಅಶಥನಾರಾಯಣ,ನಾಗಮಣಿ ಸೇರಿದಂತೆ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುರುಗಳಾದ ಆರ್. ಗೋವಿಂದಯ್ಯ,
ಓಂಕಾರ್ ನಾಯಕ್, ಕೆಎನ್.ಪ್ರಭುದೇವ್, ಆರ್.ವಿ.ರತ್ನಕರವೈದ್ಯ, ಜಿ ಪುಟ್ಟಹನುಮಕ್ಕ, ಹೆಚ್.ಎಸ್. ಮಂಗಳಾಂಬ ಎಸ್.ಆರ್.ಹೆಚ್.ಆರಾಧ್ಯ ಇವರನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ನೀಡಿ ಹಳೆ ಸಹಪಾಟಿಗಳೆಲ್ಲರೂ ಪೋಟೊ ತೆಗೆಸಿಕೊಂಡರು.