ಢಾಕಾ: ಇತ್ತೀಚೆಗಷ್ಟೇ ಹಿಂದೂ ದೇವಾಲಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ ಘಟನೆ ಬೆನ್ನಲ್ಲೇ ಇದೀಗ ಬಾಂಗ್ಲಾದೇಶದ ನೊಖಾಲಿ ಜಿಲ್ಲೆಯಲ್ಲಿ ಶುಕ್ರವಾರ(ಅ.15) ಇಸ್ಕಾನ್ ದೇವಾಲಯದ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
ಸುಮಾರು 200ಕ್ಕೂ ಅಧಿಕ ಮಂದಿ ಗುಂಪೊಂದು ಏಕಾಏಕಿ ದೇವಸ್ಥಾನದ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಇಸ್ಕಾನ್ ಸದಸ್ಯ ಪಾರ್ಥ ದಾಸ್ ಅವರನ್ನು ಬರ್ಬರವಾಗಿ ಹತ್ಯೆಗೈದಿರುವುದಾಗಿ ವರದಿ ವಿವರಿಸಿದೆ.
ಪಾರ್ಥ ದಾಸ್ ಅವರ ಶವ ದೇವಸ್ಥಾನದ ಸಮೀಪದ ಕೊಳದಲ್ಲಿ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಬಾಂಗ್ಲಾದೇಶ ಸರ್ಕಾರಕ್ಕೆ ಕರೆ ನೀಡುವುದಾಗಿ ಇಸ್ಕಾನ್ ಸಮುದಾಯದ ಟ್ವೀಟರ್ ಖಾತೆಯಲ್ಲಿ ತಿಳಿಸಿದೆ.
ಬಾಂಗ್ಲಾದೇಶದ ನೊಖಾಲಿಯಲ್ಲಿ ಇಸ್ಕಾನ್ ದೇವಾಲಯ ಮತ್ತು ಭಕ್ತರ ಮೇಲೆ ತೀವ್ರ ಹಿಂಸಾತ್ಮಕವಾಗಿ ದಾಳಿ ನಡೆಸಿದ್ದಾರೆ. ದೇವಾಲಯದ ಹಲವೆಡೆ ಹಾನಿಯಾಗಿದ್ದು, ಜಖಂಗೊಂಡಿದೆ. ಭಕ್ತರ ಸ್ಥಿತಿ ಕೂಡಾ ಗಂಭೀರವಾಗಿದೆ. ಅಲ್ಲದೇ ಬಾಂಗ್ಲಾದಲ್ಲಿ ಎಲ್ಲಾ ಹಿಂದುಗಳಿಗೆ ದೇವಸ್ಥಾನಕ್ಕೆ ಬಾಂಗ್ಲಾ ಸರಕಾರ ಸುರಕ್ಷತೆ ನೀಡಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.